ಪಿಎಂ ಕಿಸಾನ್‌ 10ನೇ ಕಂತಿನ ಹಣ ಶೀಘ್ರ ಬಿಡುಗಡೆ, ಆಧಾರ್‌ ಲಿಂಕ್‌ ಮಾಡಲು ಹೀಗೆ ಮಾಡಿ

ಪಿಎಂ - ಕಿಸಾನ್‌ ಯೋಜನೆಯಲ್ಲಿ ರೈತರಿಗೆ 10ನೇ ಕಂತಿನ ನಗದು ಹಣ ಮುಂದಿನ ವಾರ ವಿತರಣೆಯಾಗಲಿದೆ. ಆದರೆ ಆಧಾರ್‌ ಸಂಖ್ಯೆ, ಬ್ಯಾಂಕ್‌ ಖಾತೆ, ಬ್ಯಾಂಕ್‌ನ ವಿವರಗಳನ್ನು ಸರಿಯಾಗಿ ನಮೂದಿಸದಿದ್ದರೆ ರೈತರ ಖಾತೆಗೆ ನಗದು ಪಾವತಿ ವಿಫಲವಾಗಬಹುದು. ನೀವು ಸರಿಯಾದ ಮಾಹಿತಿ ದಾಖಲಿಸಿಲ್ಲ ಎಂದಿದ್ದರೆ, ಆನ್‌ಲೈನ್‌ ಮೂಲಕ ಆಧಾರ್‌ ವಿವರಗಳನ್ನು ಸರಿಪಡಿಸಬಹುದು.

ಪಿಎಂ ಕಿಸಾನ್‌ 10ನೇ ಕಂತಿನ ಹಣ ಶೀಘ್ರ ಬಿಡುಗಡೆ, ಆಧಾರ್‌ ಲಿಂಕ್‌ ಮಾಡಲು ಹೀಗೆ ಮಾಡಿ
Linkup
ಹೊಸದಿಲ್ಲಿ: ರೈತರಿಗೆ ಪಿಎಂ - ಕಿಸಾನ್‌ ಯೋಜನೆಯಲ್ಲಿ 10ನೇ ಕಂತಿನ ನಗದು ಹಣ ಮುಂದಿನ ವಾರ ವಿತರಣೆಯಾಗಲಿದೆ. ಕೆಲ ಅರ್ಹ ರೈತರಿಗೂ ಹಣ ಬರುತ್ತಿಲ್ಲ ಎಂದಿದ್ದರೆ, ಕೆಲ ತಪ್ಪುಗಳನ್ನು ಸರಿಪಡಿಸಿ ಸೌಲಭ್ಯವನ್ನು ತಮ್ಮದಾಗಿಸಿಕೊಳ್ಳಬಹುದು. ವಿವರ ಇಲ್ಲಿದೆ. ಡಿಸೆಂಬರ್‌ 15ಕ್ಕೆ ಮುಂದಿನ ಕಂತು ಪಿಎಂ - ಕಿಸಾನ್‌ ಯೋಜನೆಯಡಿಯಲ್ಲಿ ರೈತರ ಬ್ಯಾಂಕ್‌ ಖಾತೆಗೆ ಡಿಸೆಂಬರ್‌ 15ಕ್ಕೆ ಮುಂದಿನ ಕಂತಿನ ಹಣ ಜಮೆಯಾಗಲಿದೆ. ಈ ಯೋಜನೆಯಡಿಯಲ್ಲಿ ಪ್ರತಿ ವರ್ಷ ರೈತನಿಗೆ ಮೂರು ಕಂತುಗಳಲ್ಲಿ ಒಟ್ಟು 6,000 ರೂ. ನಗದು ವಿತರಣೆಯಾಗುತ್ತದೆ. ಏಪ್ರಿಲ್‌ - ಜುಲೈ, ಆಗಸ್ಟ್‌ - ನವೆಂಬರ್‌ ಮತ್ತು ಡಿಸೆಂಬರ್‌ - ಮಾರ್ಚ್‌ನಲ್ಲಿ ಈ ಕಂತು ವಿತರಣೆಯಾಗುತ್ತದೆ. ಆಧಾರ್‌ ಕಾರ್ಡ್‌ ಲಿಂಕ್‌ ಆಗಿರುವ ಅರ್ಹ ರೈತರ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗಲಿದೆ. ಪಾವತಿ ವೈಫಲ್ಯಕ್ಕೆ ಕಾರಣ? ಆಧಾರ್‌ ಸಂಖ್ಯೆ, ಬ್ಯಾಂಕ್‌ ಖಾತೆ, ಬ್ಯಾಂಕ್‌ನ ವಿವರಗಳನ್ನು ಸರಿಯಾಗಿ ನಮೂದಿಸದಿದ್ದರೆ ಅಂಥ ರೈತರ ಖಾತೆಗೆ ಪಿಎಂ - ಕಿಸಾನ್‌ ನಗದು ಪಾವತಿ ವಿಫಲವಾಗಬಹುದು. ನೀವು ಸರಿಯಾದ ಮಾಹಿತಿ ದಾಖಲಿಸಿಲ್ಲ ಎಂದಿದ್ದರೆ, ಆನ್‌ಲೈನ್‌ ಮೂಲಕ ಆಧಾರ್‌ ವಿವರಗಳನ್ನು ಸರಿಪಡಿಸಬಹುದು. ಪಿಎಂ ಕಿಸಾನ್‌ ವೆಬ್‌ಸೈಟ್‌ನಲ್ಲಿ ವಿವರ ಪರಿಷ್ಕರಿಸಿ: 1. ಪಿಎಂ ಕಿಸಾನ್‌ ವೆಬ್‌ಸೈಟ್‌ ತೆರೆಯಿರಿ 2. ನೀವು 'ಫಾರ್ಮರ್ಸ್ ಕಾರ್ನರ್‌' ಎಂಬ ಲಿಂಕ್‌ ಅನ್ನು ಕಾಣಬಹುದು. ಅದನ್ನು ಕ್ಲಿಕ್‌ ಮಾಡಿ. 3. ನಂತರ 'ಆಧಾರ್‌ ಎಡಿಟ್‌' ಲಿಂಕ್‌ ಮೇಲೆ ಕ್ಲಿಕ್ಕಿಸಿ. 4. ಆಗ ತೆರೆದುಕೊಳ್ಳುವ ಪೇಜ್‌ನಲ್ಲಿ ಆಧಾರ್‌ ಸಂಖ್ಯೆ ಮತ್ತು ಸರಿಯಾದ ಮಾಹಿತಿಗಳನ್ನು ಭರ್ತಿಗೊಳಿಸಿ. 5. ಬ್ಯಾಂಕ್‌ ಖಾತೆಯ ವಿವರಗಳು ತಪ್ಪಾಗಿದ್ದರೆ ಮಾತ್ರ ಕೃಷಿ ಇಲಾಖೆ ಕಚೇರಿಗೆ ತೆರಳಿ ಸರಿಪಡಿಸಿಕೊಳ್ಳಬಹುದು. ಯಾರಿಗೆ ಪಿಎಂ - ಕಿಸಾನ್‌ ಇಲ್ಲ? ಪಿಎಂ - ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯು ದೇಶದ ಎಲ್ಲ 14.5 ಕೋಟಿ ರೈತರಿಗೆ, ಅವರ ಭೂಮಿಯ ಗಾತ್ರವನ್ನು ಪರಿಗಣಿಸದೆ ಅನ್ವಯವಾಗುತ್ತದೆ. ಹೀಗಿದ್ದರೂ, ಸಾಂಸ್ಥಿಕ ಭೂ ಮಾಲೀಕರು, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ರೈತ ಕುಟುಂಬಗಳು, ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ರಾಜ್ಯ ಅಥವಾ ಕೇಂದ್ರ ಸರಕಾರಿ ಅಧಿಕಾರಿಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಉದ್ದಿಮೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು, ವೈದ್ಯರು, ಎಂಜಿನಿಯರ್‌, ವಕೀಲರು ಇತ್ಯಾದಿ ವೃತ್ತಿಪರರು, ಮಾಸಿಕ 10,000 ರೂ.ಗಿಂತ ಹೆಚ್ಚಿನ ಪಿಂಚಣಿ ಪಡೆಯುವವರು, ಆದಾಯ ತೆರಿಗೆ ಪಾವತಿಸುವವರಿಗೆ ಪಿಎಂ - ಕಿಸಾನ್‌ ಯೋಜನೆಯ ಸೌಲಭ್ಯ ಅನ್ವಯವಾಗುವುದಿಲ್ಲ. ಕರ್ನಾಟಕದಲ್ಲಿ 2021ರಲ್ಲಿ ಒಟ್ಟು ಫಲಾನುಭವಿಗಳು: 57,62,228