ಪ್ರಮುಖ ಕ್ರಿಪ್ಟೋಕರೆನ್ಸಿಗಳನ್ನು ತನ್ನ ತೆಕ್ಕೆಗೆ ಪಡೆದ ಎಲೋನ್‌ ಮಸ್ಕ್!

ಟೆಸ್ಲಾ ಕಂಪನಿ ಸಿಇಒ ಎಲಾನ್‌ ಮಸ್ಕ್‌ ಅವರು ವಿಶ್ವದ ಪ್ರಮುಖ ಕ್ರಿಪ್ಟೋ ಕರೆನ್ಸಿಗಳನ್ನು ಸ್ವಾಧೀನಪಡಿಸಿಕೊಂಡಿರುವ ಕುರಿತು ಖಾತರಿಪಡಿಸಿದ ಕೂಡಲೇ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆ ಪುಟಿದೆದ್ದಿದೆ. ಕಳೆದ 24 ಗಂಟೆಯಲ್ಲಿ ಬಿಟ್‌ಕಾಯಿನ್‌ ಮೌಲ್ಯದಲ್ಲಿ ಶೇ.8ರಷ್ಟು ಏರಿಕೆಯಾಗಿದೆ.

ಪ್ರಮುಖ ಕ್ರಿಪ್ಟೋಕರೆನ್ಸಿಗಳನ್ನು ತನ್ನ ತೆಕ್ಕೆಗೆ ಪಡೆದ ಎಲೋನ್‌ ಮಸ್ಕ್!
Linkup
ಹೊಸದಿಲ್ಲಿ: ಟೆಸ್ಲಾ ಕಂಪನಿ ಸಿಇಒ ಎಲಾನ್‌ ಮಸ್ಕ್‌ ಅವರು ವಿಶ್ವದ ಪ್ರಮುಖ ಕ್ರಿಪ್ಟೋ ಕರೆನ್ಸಿಗಳನ್ನು ಸ್ವಾಧೀನಪಡಿಸಿಕೊಂಡಿರುವ ಕುರಿತು ಖಾತರಿಪಡಿಸಿದ ಕೂಡಲೇ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆ ಪುಟಿದೆದ್ದಿದೆ. ಎಲಾನ್‌ ಮಸ್ಕ್‌ ಅವರು ಬಿಟ್‌ಕಾಯಿನ್‌, ಡಾಗಿಕಾಯಿನ್ ಮತ್ತು ಇಥೆರಿಯಂ ಡಿಜಿಟಲ್‌ ಕರೆನ್ಸಿಗಳನ್ನು ತನ್ನ ಸ್ವಾಧೀನಕ್ಕೆ ಪಡೆದಿರುವುದಾಗಿ ಗುರುವಾರ ಹೇಳಿಕೆ ನೀಡಿದ್ದಾರೆ. ಮಸ್ಕ್‌ ಅವರ ಈ ಇಂದು ಹೇಳಿಕೆ ಬೆನ್ನಲ್ಲೇ $30 ಸಾವಿರಕ್ಕಿಂತ ಕೆಳಗಿಳಿದ್ದ ಮೌಲ್ಯ ಮತ್ತೆ $32 ಸಾವಿರ ಡಾಲರ್‌ಗಿಂತ ಹೆಚ್ಚಿದೆ. ಗುರುವಾರ ‘ದಿ ಬಿ ವರ್ಡ್’ ಎಂಬ ಬಿಟ್ ಕಾಯಿನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಟ್ವಿಟ್ಟರ್‌ ಸಿಇಒ ಜಾಕ್‌ ಡಾರ್ಸಿ ಕೂಡ ಇದ್ದರು. ಟೆಸ್ಲಾ ಮತ್ತು ಸ್ಪೇಸ್ಎಕ್ಸ್‌ ನಂತರ ಷೇರುಮಾರುಕಟ್ಟೆಯಲ್ಲಿ ಅತಿ ಹೆಚ್ಚು ಅತಿ ಷೇರು ಹೊಂದಿರುವುದು ಕ್ರಿಪ್ಟೋ ಕರೆನ್ಸಿ ಮೇಲೆಯೇ ಎಂದು ಎಲಾನ್‌ ಮಸ್ಕ್‌ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ಸೊರಗಿದ್ದ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆ ಚೇತರಿಸಿಕೊಂಡಿದೆ. ಇದಿಷ್ಟೇ ಅಲ್ಲದೆ ಟೆಸ್ಲಾ ಕಂಪನಿಯು ಶೀಘ್ರದಲ್ಲೇ ತನ್ನ ಪೇಮೆಂಟ್‌ಗಳನ್ನು ಕ್ರಿಪ್ಟೋ ಕರೆನ್ಸಿ ರೂಪದಲ್ಲಿ ಸ್ವೀಕರಿಸಲಿದೆ ಎಂಬ ಹೇಳಿಕೆ ದಿಜಿಟಲ್‌ ಕರೆನ್ಸಿ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದರೊಂದಿಗೆ ನಾನು ಯಾವುದೇ ಬಿಟ್‌ಕಾಯಿನ್‌ಗಳನ್ನು ಮಾಡುವುದಿಲ್ಲ. ಒಂದು ವೇಳೆ ಮೌಲ್ಯ ಇಳಿಕೆಯಾದರೆ , ನನಗೆ ನಷ್ಟ ಸಂಭವಿಸಲಿದೆ. ಹೀಗಾದರೆ ನಾನು ನಷ್ಟವನ್ನು ನಿಭಾಯಿಸುತ್ತೇನೆಯೇ ಹೊರತು ಕ್ರಿಪ್ಟೋ ಕಾಯಿನ್‌ಗಳನ್ನು ಎಸೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆ ಬಿಟ್‌ಕಾಯಿನ್ ಯಶಸ್ವಿಯಾಗಬೇಕು ಎಂಬ ಇಂಗಿತ ವ್ಯಕ್ತಿಪಡಿಸಿದ್ದಾರೆ. ಇದಾದ 24 ಗಂಟೆಯಲ್ಲಿ ಬಿಟ್‌ಕಾಯಿನ್‌ ಮೌಲ್ಯದಲ್ಲಿ ಶೇ.8ರಷ್ಟು ಏರಿಕೆಯಾಗಿದೆ.