ಮಾರ್ಚ್ ವೇಳೆಗೆ ಷೇರು ಪೇಟೆ ಪ್ರವೇಶಿಸಲಿದೆ LIC, 1 ಲಕ್ಷ ಕೋಟಿ ರೂ.ವರೆಗೆ ಸಂಗ್ರಹದ ನಿರೀಕ್ಷೆ

ಕಳೆದ ವಾರ ಎಲ್‌ಐಸಿಯ ಷೇರು ಮಾರುಕಟ್ಟೆ ಪ್ರವೇಶಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿತ್ತು. ಇದರಿಂದ ಎಲ್‌ಐಸಿ 90,000 ಕೋಟಿ ರೂ.ಗಳಿಂದ 1 ಲಕ್ಷ ಕೋಟಿ ರೂ. ತನಕ ಹಣ ಸಂಗ್ರಹಿಸುವ ನಿರೀಕ್ಷೆ ಇದೆ.

ಮಾರ್ಚ್ ವೇಳೆಗೆ ಷೇರು ಪೇಟೆ ಪ್ರವೇಶಿಸಲಿದೆ LIC, 1 ಲಕ್ಷ ಕೋಟಿ ರೂ.ವರೆಗೆ ಸಂಗ್ರಹದ ನಿರೀಕ್ಷೆ
Linkup
ಹೊಸದಿಲ್ಲಿ: ಮುಂದಿನ ವರ್ಷ ಮಾರ್ಚ್ ಒಳಗೆ ಎಲ್‌ಐಸಿಯ ಆರಂಭಿಕ ಷೇರು ಬಿಡುಗಡೆಗೆ () ಸರಕಾರ ಸಿದ್ಧತೆ ನಡೆಸುತ್ತಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಕಾರ್ಯದರ್ಶಿ ತುಹಿನ್‌ ಕಾಂತ ಪಾಂಡೆ ತಿಳಿಸಿದ್ದಾರೆ. ಪ್ರಸಕ್ತ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ ಎಲ್‌ಐಸಿಯ ಐಪಿಒಗೆ ಸಿದ್ಧತೆ ನಡೆಸಲಾಗುತ್ತಿದೆ. ಈ ಐಪಿಒ ನಿರ್ವಹಣೆಗೆ ಸೂಕ್ತ ಬ್ಯಾಂಕರ್‌ಗಳನ್ನು ಶೀಘ್ರದಲ್ಲಿಯೇ ನೇಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಸಚಿವ ಸಂಪುಟವು ಕಳೆದ ವಾರ ಎಲ್‌ಐಸಿಯ ಐಪಿಒಗೆ ಅನುಮೋದಿಸಿತ್ತು. ಇದರಿಂದ 90,000 ಕೋಟಿ ರೂ.ಗಳಿಂದ 1 ಲಕ್ಷ ಕೋಟಿ ರೂ. ತನಕ ಹಣ ಸಂಗ್ರಹಿಸುವ ನಿರೀಕ್ಷೆ ಇದೆ. ಎಲ್‌ಐಸಿಯ ಖಾಸಗೀಕರಣವಲ್ಲ - ಕೇಂದ್ರ ಎಲ್‌ಐಸಿಯನ್ನು ಖಾಸಗೀಕರಣಗೊಳಿಸುವ ಉದ್ದೇಶ ಸರಕಾರಕ್ಕೆ ಇಲ್ಲ ಎಂದು ಈ ಹಿಂದೆ ಕೇಂದ್ರ ಸರಕಾರ ಲೋಕಸಭೆಗೆ ತಿಳಿಸಿತ್ತು. ಎಲ್‌ಐಸಿಯ ಷೇರುಗಳನ್ನು ಬಿಡುಗಡೆ ಮಾಡುವ ಮೂಲಕ ಹೆಚ್ಚು ಹೂಡಿಕೆಯನ್ನು ಗಳಿಸಲು ಎಲ್‌ಐಸಿಗೆ ಸಹಕಾರಿಯಾಗಲಿದೆ. ಈ ಹೂಡಿಕೆಯನ್ನು ಕಂಪನಿಯ ಅಭಿವೃದ್ಧಿಗೆ, ಪಾಲಿಸಿದಾರರ ಹಿತಾಸಕ್ತಿಗೆ ಬಳಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸರಕಾರ ತಿಳಿಸಿದೆ.