ಬಗೆಹರಿಯದ ಆದಾಯ ತೆರಿಗೆ ಪೋರ್ಟಲ್‌ ಸಮಸ್ಯೆ! ಇನ್ಫೋಸಿಸ್ ಸಿಇಒಗೆ ಕೇಂದ್ರದ ಸಮನ್ಸ್‌

ಆದಾಯ ತೆರಿಗೆ ಇಲಾಖೆಯ ನೂತನ ವೆಬ್‌ ಪೋರ್ಟಲ್ ನಲ್ಲಿ ಕಾಣಿಸಿಕೊಂಡಿದ್ದ ತೊಂದರೆಯನ್ನು ಸರಿಪಡಿಸಲು ಇದುವರೆಗೂ ಸಾಧ್ಯವಾಗಿರದ ಕಾರಣ ಇನ್ಫೋಸಿಸ್ ಸಿಇಒ ಸಲೀಲ್ ಪರೇಕ್ ಅವರಿಗೆ ಕೇಂದ್ರ ಸರ್ಕಾರ ಸಮನ್ಸ್ ಜಾರಿ ಮಾಡಿದೆ.

ಬಗೆಹರಿಯದ ಆದಾಯ ತೆರಿಗೆ ಪೋರ್ಟಲ್‌ ಸಮಸ್ಯೆ! ಇನ್ಫೋಸಿಸ್ ಸಿಇಒಗೆ ಕೇಂದ್ರದ ಸಮನ್ಸ್‌
Linkup
ಹೊಸದಿಲ್ಲಿ: ಇಲಾಖೆಯ ನೂತನ ವೆಬ್‌ ಪೋರ್ಟಲ್ ನಲ್ಲಿ ಕಾಣಿಸಿಕೊಂಡಿದ್ದ ತೊಂದರೆಯನ್ನು ಸರಿಪಡಿಸಲು ಇದುವರೆಗೂ ಸಾಧ್ಯವಾಗಿರದ ಕಾರಣ ಸಿಇಒ ಸಲೀಲ್ ಪರೇಕ್ ಅವರಿಗೆ ಕೇಂದ್ರ ಸರ್ಕಾರ ಸಮನ್ಸ್ ಜಾರಿ ಮಾಡಿದೆ. ಕೇಂದ್ರ ವಿತ್ತ ಸಚಿವಾಲಯವು ಭಾನುವಾರ ಇನ್ಫೊಸ್‌ನ ವ್ಯವಸ್ಥಾಪಕ ನಿರ್ದೇಶಕರು (ಎಂಡಿ) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅವರನ್ನು ಕರೆಸಿ ಹೊಸ ಆದಾಯ ತೆರಿಗೆ ಫೈಲಿಂಗ್ ಪೋರ್ಟಲ್‌ನಲ್ಲಿ ಎದುರಾಗುತ್ತಿರುವ ನಿರಂತರ ತೊಂದರೆಗಳನ್ನು ವಿವರಿಸಿದೆ. ಈ ಕುರಿತು ನಿರ್ಮಲಾ ಸೀತಾರಾಮನ್ ಅವರು ಕಳೆದ ಜೂನ್‌ನಲ್ಲಿಯೇ ಪ್ರಸ್ತಾಪಿಸಿದ್ದರು. ಪಾರೇಖ್ ಸೋಮವಾರ ಹಣಕಾಸು ಸಚಿವಾಲಯದ ಮುಂದೆ ಹಾಜರಾಗುವ ನಿರೀಕ್ಷೆಯಿದೆ. ಹೊಸ ಇ-ಫೈಲಿಂಗ್ ಪೋರ್ಟಲ್ ಅನ್ನು ಪ್ರಾರಂಭಿಸಿದ ಎರಡೂವರೆ ತಿಂಗಳ ನಂತರವೂ ಪೋರ್ಟಲ್‌ನಲ್ಲಿ ತೊಂದರೆಗಳನ್ನು ಏಕೆ ಪರಿಹರಿಸಲಾಗಿಲ್ಲ ಎಂಬುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿವರಿಸುವಂತೆ ಕೋರಿ ಹಣಕಾಸು ಸಚಿವಾಲಯವು ಆಗಸ್ಟ್ 23 ರಂದು ಸಲೀಲ್ ಪಾರೇಖ್ ಅವರಿಗ ಸಮನ್ಸ್ ನೀಡಿದೆ. ಆದಾಯ ತೆರಿಗೆ ಇಲಾಖೆಯ ನೂತನ ವೆಬ್‌ ಪೋರ್ಟಲ್‌ನಲ್ಲಿ ಕಾಣಿಸಿರುವ ಪ್ರಮುಖ ಅಡಚಣೆಗಳನ್ನು ವಾರದೊಳಗೆ ಬಗೆಹರಿಸುವಂತೆ ಇನ್ಫೋಸಿಸ್‌ಗೆ ಕೇಂದ್ರ ಸರಕಾರ ಕಳೆದ ಜೂನ್‌ನಲ್ಲಿಯೇ ಸೂಚಿಸಿತ್ತು. ಪೋರ್ಟಲ್‌ನಲ್ಲಿರುವ ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಮತ್ತು 5 ಪ್ರಮುಖ ತೊಂದರೆಗಳನ್ನು ವಾರದೊಳಗೆ ಬಗೆಹರಿಸುವಂತೆ ಖುದ್ದು ಹಣಕಾಸು ಸಚಿವೆ ಸೂಚಿಸಿದ್ದರು.