ಆರ್ಥಿಕ ಚಟುವಟಿಕೆ ಕ್ಷಿಪ್ರ ಚೇತರಿಕೆ, ಕೋವಿಡ್‌ ಪೂರ್ವ ಮಟ್ಟಕ್ಕೆ ಸನಿಹ

ಆ. 8ಕ್ಕೆ ಅಂತ್ಯವಾದ ವಾರದಲ್ಲಿ ಭಾರತದಲ್ಲಿ ಆರ್ಥಿಕ ಚಟುವಟಿಕೆಗಳು ದಾಖಲೆಯ ಮಟ್ಟದಲ್ಲಿ ವಿಸ್ತರಣೆಯಾಗಿದ್ದು, ಕೊರೊನಾ ಪೂರ್ವ ಮಟ್ಟಕ್ಕೆ ಸನಿಹದಲ್ಲಿವೆ ಎಂದು ನೊಮುರಾ ಇಂಡಿಯಾ ಸಂಸ್ಥೆಯು ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.

ಆರ್ಥಿಕ ಚಟುವಟಿಕೆ ಕ್ಷಿಪ್ರ ಚೇತರಿಕೆ, ಕೋವಿಡ್‌ ಪೂರ್ವ ಮಟ್ಟಕ್ಕೆ ಸನಿಹ
Linkup
ಹೊಸದಿಲ್ಲಿ: ಭಾರತದಲ್ಲಿ ಆಗಸ್ಟ್‌ 8ಕ್ಕೆ ಅಂತ್ಯವಾದ ವಾರದಲ್ಲಿ ಆರ್ಥಿಕ ಚಟುವಟಿಕೆಗಳು ದಾಖಲೆಯ ಮಟ್ಟದಲ್ಲಿ ವಿಸ್ತರಣೆಯಾಗಿದ್ದು, ಕೋವಿಡ್‌ ಪೂರ್ವ ಮಟ್ಟಕ್ಕೆ ಸನಿಹದಲ್ಲಿವೆ ಎಂದು ನೊಮುರಾ ಇಂಡಿಯಾ ಸಂಸ್ಥೆಯ ಸಮೀಕ್ಷೆ ತಿಳಿಸಿದೆ. ಕೋವಿಡ್‌ ಕೇಸ್‌ಗಳ ಸಂಖ್ಯೆ ನಿಯಂತ್ರಣದಲ್ಲಿರುವುದು, ವಿದ್ಯುತ್‌ ಬಳಕೆ ಸುಧಾರಿಸಿರುವುದು, ಹೆಚ್ಚುತ್ತಿರುವ ಜನ ಸಂಚಾರ ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸಿದೆ ಎಂದಿದೆ. ನೊಮುರಾ ಇಂಡಿಯಾ ಬಿಸಿನೆಸ್‌ ರೆಸ್ಯುಮ್ಷನ್‌ ಇಂಡೆಕ್ಸ್‌ ಕಳೆದ ಆಗಸ್ಟ್‌ 8ಕ್ಕೆ ಅಂತ್ಯವಾದ ವಾರದಲ್ಲಿ ದಾಖಲೆಯ 99.4 ಅಂಕಗಳಿಗೆ ಏರಿಕೆಯಾಗಿದೆ. ಇದಕ್ಕೂ ಹಿಂದಿನ ವಾರದಲ್ಲಿ 94.0 ಅಂಕ ಗಳಿಸಿತ್ತು. ಫೆಬ್ರವರಿಯಲ್ಲಿ 99.3 ಅಂಕದಲ್ಲಿತ್ತು. ಹೀಗಾಗಿ ಕೋವಿಡ್‌ ಎರಡನೇ ಅಲೆಯ ನಂತರ ಕುಸಿದಿದ್ದ ಆರ್ಥಿಕತೆ ನಿರೀಕ್ಷೆಗೂ ಮೀರಿ ಚೇತರಿಸುತ್ತಿರುವುದನ್ನು ಸೂಚ್ಯಂಕ ಬಿಂಬಿಸಿದೆ ಎಂದು ನೊಮುರಾ ತಿಳಿಸಿದೆ. "ಕಳೆದ ಎರಡು ವಾರಗಳಿಂದ ಬಿಸಿನೆಸ್‌ ಚಟುವಟಿಕೆಗಳು ಕ್ಷಿಪ್ರ ಗತಿಯಲ್ಲಿ ಚೇತರಿಸಿವೆ" ಎಂದು ನೊಮುರಾದ ಆರ್ಥಿಕ ತಜ್ಞರಾದ ಸೋನಲ್‌ ವರ್ಮಾ ಮತ್ತು ಆರುದೀಪ್‌ ನಂದಿ ತಿಳಿಸಿದ್ದಾರೆ.