ಮಗುವನ್ನು ದತ್ತು ಪಡೆಯಬೇಕು ಅಂತಿದ್ದ RJ ರಚನಾ: ಅಷ್ಟರಲ್ಲೇ ವಿಧಿ ಅಟ್ಟಹಾಸ ಮೆರೆಯಿತು!

‘’ರಚನಾ ಒಂದು ಮಗುವನ್ನು ದತ್ತು ತೆಗೆದುಕೊಳ್ಳಬೇಕು ಅಂತ ಹೇಳುತ್ತಿದ್ದಳು’’ ಎಂದು ರಾಪಿಡ್ ರಶ್ಮಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಮಗುವನ್ನು ದತ್ತು ಪಡೆಯಬೇಕು ಅಂತಿದ್ದ RJ ರಚನಾ: ಅಷ್ಟರಲ್ಲೇ ವಿಧಿ ಅಟ್ಟಹಾಸ ಮೆರೆಯಿತು!
Linkup
RJ ರಚನಾ… ರೇಡಿಯೋ ಕೇಳುತ್ತಿದ್ದ ಪ್ರತಿಯೊಬ್ಬ ಕನ್ನಡಿಗರಿಗೂ ಇವರ ಪರಿಚಯ ಇದ್ದೇ ಇತ್ತು. ಮಾತಿನ ಮಲ್ಲಿ RJ ರಚನಾಗೆ ಅದೆಷ್ಟು ಮಂದಿ ಅಭಿಮಾನಿಗಳಿದ್ರೋ, ಲೆಕ್ಕವೇ ಇಲ್ಲ. ವರ್ಷಗಳ ಕಾಲ ರೇಡಿಯೋ ಜಾಕಿ ಆಗಿ ಕೆಲಸ ಮಾಡಿದ್ದ RJ ರಚನಾ ಈಗ ಕೇವಲ ನೆನಪು ಮಾತ್ರ. ಪಟ ಪಟ ಅಂತ ಮಾತನಾಡುತ್ತಿದ್ದ RJ ರಚನಾ ಈಗ ಶಾಶ್ವತವಾಗಿ ಮೌನವಾಗಿದ್ದಾರೆ. 39 ವರ್ಷ ವಯಸ್ಸಿನ RJ ರಚನಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಹಾಗ್ನೋಡಿದ್ರೆ, RJ ರಚನಾ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದರು. ಫಿಟ್ ಅಂಡ್ ಫೈನ್ ಆಗಿದ್ದ RJ ರಚನಾ ಅವರು ಕಳೆದ ಕೆಲವು ವರ್ಷಗಳಿಂದ ರೇಡಿಯೋ ಜಾಕಿ ಕೆಲಸ ಮಾಡುತ್ತಿರಲಿಲ್ಲ. ಮನೆಯಲ್ಲೇ ಉಳಿದಿದ್ದ RJ ರಚನಾ ಡಿಪ್ರೆಷನ್ ಹಾಗೂ ಸ್ಟ್ರೆಸ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮಗುವನ್ನ ದತ್ತು ಪಡೆಯಬೇಕು ಅಂತಿದ್ದ RJ ರಚನಾ RJ ರಚನಾ ಹಾಗೂ ರಾಪಿಡ್ ರಶ್ಮಿ ಆತ್ಮೀಯ ಸ್ನೇಹಿತರು. RJ ರಚನಾ ಅವರ ವಾರ್ತೆ ಕೇಳಿ ರಾಪಿಡ್ ರಶ್ಮಿ ಆಘಾತ ವ್ಯಕ್ತಪಡಿಸಿದರು. ಸಂದರ್ಶನವೊಂದರಲ್ಲಿ RJ ರಚನಾ ಬಗ್ಗೆ ಕೆಲ ಸಂಗತಿಗಳನ್ನು ರಾಪಿಡ್ ರಶ್ಮಿ ಹಂಚಿಕೊಂಡಿದ್ದಾರೆ. ರಾಪಿಡ್ ರಶ್ಮಿ ಹೇಳಿದ್ದೇನು? ‘’ಆರ್.ಜೆ ರಚನಾ ನಿಧನದ ವಾರ್ತೆ ಕೇಳಿ ತುಂಬಾ ಶಾಕ್ ಆಯ್ತು. ನಾನು ಆರ್.ಜೆ ಆಗೋಕೆ ಮುಂಚಿನಿಂದಲೂ ರಚನಾ ನನಗೆ ಫ್ರೆಂಡ್ ಆಗಿದ್ದರು. ಇತ್ತೀಚೆಗೆ ನಾವು ಅಷ್ಟು ಟಚ್‌ನಲ್ಲಿ ಇರ್ಲಿಲ್ಲ. ಅವರು ಆರ್.ಜೆ ಕೆಲಸ ಬಿಟ್ಟ ಮೇಲೆ ನಮ್ಮ ಟಚ್ ಬಿಟ್ಟು ಹೋಯ್ತು. ನಾವೆಲ್ಲಾ ಆಂಕರ್ ಆಗಿದ್ದಾಗ ನಮ್ಮ ನಡುವೆ ಒಳ್ಳೆಯ ಒಡನಾಟ ಇತ್ತು. ಆಗಲೇ ಅವರು ಜನಪ್ರಿಯ ಆಂಕರ್ ಆಗಿದ್ದರು. ಈಗ ಏನಾಯ್ತು ಅಂತಲೇ ಗೊತ್ತಿಲ್ಲ. ತಾವು ಸೇವಿಸುವ ಆಹಾರದ ಬಗ್ಗೆ ರಚನಾ ಅವರು ತುಂಬಾ ಕಾಳಜಿ ವಹಿಸುತ್ತಿದ್ದರು. ನನಗೆ ನೆನಪಿರುವ ಹಾಗೆ, ರಚನಾ ಒಂದು ಮಗುವನ್ನು ದತ್ತು ತೆಗೆದುಕೊಳ್ಳಬೇಕು ಅಂತ ಹೇಳುತ್ತಿದ್ದಳು’’ ಎಂದು ಸಂದರ್ಶನವೊಂದರಲ್ಲಿ ರಾಪಿಡ್ ರಶ್ಮಿ ಹೇಳಿದ್ದಾರೆ. ಕಂಬನಿ ಮಿಡಿದ ಹರ್ಷಿಕಾ ಪೂಣಚ್ಚ ‘’RJ ರಚನಾ ನೀವಿಲ್ಲ ಅಂತ ನಂಬುವುದಕ್ಕೆ ನನಗೆ ಕಷ್ಟವಾಗುತ್ತಿದೆ. ರೇಡಿಯೋ ಮೂಲಕ ಕೋಟ್ಯಂತರ ಜನರನ್ನು ರಂಜಿಸಿದ ನಿಮ್ಮ ನಗು ಹಾಗೂ ನಿಮ್ಮ ಧ್ವನಿಯನ್ನು ಖಂಡಿತ ಮಿಸ್ ಮಾಡಿಕೊಳ್ಳುತ್ತೇನೆ’’ ಎಂದು ನಟಿ ಹರ್ಷಿಕಾ ಪೂಣಚ್ಚ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಸಂತಾಪ ರಕ್ಷಿತ್ ಶೆಟ್ಟಿ ಅಭಿನಯದ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾದಲ್ಲಿ ರಚನಾ ಅಭಿನಯಿಸಿದ್ದರು. RJ ರಚನಾ ನಿಧನಕ್ಕೆ ರಕ್ಷಿತ್ ಶೆಟ್ಟಿ ಕಂಬನಿ ಮಿಡಿದಿದ್ದಾರೆ. ‘’ನಿಮ್ಮನ್ನ ಸದಾ ನೆನಪಿಸಿಕೊಳ್ಳುತ್ತೇವೆ. ನಿಮ್ಮ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ. ಓಂ ಶಾಂತಿ’’ ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.