‘ತಾಯಿ ಕಸ್ತೂರ್‌ ಗಾಂಧಿ’ ಸಿನಿಮಾದಲ್ಲಿ ನಟಿ ಹರಿಪ್ರಿಯಾ, ಕಿಶೋರ್ ನಟನೆ; ಬರಗೂರು ರಾಮಚಂದ್ರಪ್ಪ ನಿರ್ದೇಶನ

ಪ್ರತಿಭಾವಂತ ನಟಿ ಹರಿಪ್ರಿಯಾ ಅವರು ‘ತಾಯಿ ಕಸ್ತೂರ್‌ ಗಾಂಧಿ’ ಸಿನಿಮಾದಲ್ಲಿತಮ್ಮ ವಿಭಿನ್ನ ಲುಕ್‌ಗಳ ಕುರಿತಾದ ಕೆಲವು ಆಸಕ್ತಿಕರ ವಿಷಯಗಳನ್ನು ಲವಲವಿಕೆಯೊಂದಿಗೆ ಶೇರ್‌ ಮಾಡಿದ್ದಾರೆ.

‘ತಾಯಿ ಕಸ್ತೂರ್‌ ಗಾಂಧಿ’ ಸಿನಿಮಾದಲ್ಲಿ ನಟಿ ಹರಿಪ್ರಿಯಾ, ಕಿಶೋರ್ ನಟನೆ; ಬರಗೂರು ರಾಮಚಂದ್ರಪ್ಪ ನಿರ್ದೇಶನ
Linkup
(ಹರೀಶ್‌ ಬಸವರಾಜ್‌) ಕನ್ನಡ, ತೆಲುಗು, ತಮಿಳು ಹೀಗೆ ಎಲ್ಲಾ ಚಿತ್ರರಂಗದಲ್ಲಿಯೂ ತಮ್ಮ ನಟನೆಯಿಂದ ಛಾಪು ಮೂಡಿಸಿರುವ ನಟಿ ಅವರು ಈಗ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ತಾಯಿ ಕಸ್ತೂರ್‌ ಗಾಂಧಿ’ ಸಿನಿಮಾದಲ್ಲಿ ಸಾಕ್ಷಾತ್‌ ಕಸ್ತೂರ್‌ಬಾ ಅವರಂತೆಯೇ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರ ಮೂರು ಪ್ರಬುದ್ಧ ಲುಕ್‌ಗಳು ಈಗಾಗಲೇ ಸಿನಿಪ್ರಿಯರಿಗೆ ಇಂಪ್ರೆಸ್‌ ಮಾಡಿವೆ. ಕಳೆದೊಂದು ದಶಕದಿಂದ ಎಲ್ಲಾ ಸಿನಿಮಾಗಳಲ್ಲಿಯೂ ಸವಾಲು ಎನಿಸುವ ಪಾತ್ರಗಳನ್ನು ಸಲೀಸಾಗಿ ಮಾಡಿರುವ ಇವರು, ಈಗ ‘ತಾಯಿ ಕಸ್ತೂರ್‌ ಗಾಂಧಿ’ ಸಿನಿಮಾದಲ್ಲಿ ಅವರ ಯುವ, ಮಧ್ಯ ವಯಸ್ಕ ಮತ್ತು ಇಳಿ ವಯಸ್ಸಿನ ಮೂರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ‘ಅಮೃತಮತಿ ಸಿನಿಮಾದ ನಂತರ ಒಂದು ದಿನ ಬರಗೂರು ಸರ್‌ ಮನೆಗೆ ಬಂದು ‘ಕಸ್ತೂರ್‌ ಬಾ ವರ್ಸಸ್‌ ಗಾಂಧಿ’ ಪುಸ್ತಕ ತಂದು ಕೊಟ್ಟರು. ಅದನ್ನು ನಾನು ಓದಿ, ತುಂಬಾ ಚೆನ್ನಾಗಿದೆ ಎಂದು ಹೇಳಿದ್ದೆ. ಆಗ ಅವರು ಇದನ್ನು ಸಿನಿಮಾ ಮಾಡುತ್ತಿದ್ದೇನೆ. ಇದರಲ್ಲಿ ನೀವೇ ಕಸ್ತೂರ್‌ ಬಾ ಎಂದು ಹೇಳಿದ್ದರು. ಆಗ ನನಗೆ ಖುಷಿಯಾಯಿತು. ಯಾಕೆಂದರೆ ಬಯೋಪಿಕ್‌ಗಳನ್ನು ಕನ್ನಡದಲ್ಲಿ ಮಾಡುವವರು ಕಡಿಮೆ. ಗಾಂಧೀಜಿಯವರ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಕಸ್ತೂರ್‌ ಬಾ ಬಗ್ಗೆ ನಮಗೆ ಗೊತ್ತಿಲ್ಲ. ಮಹಾತ್ಮ ಎನಿಸಿಕೊಳ್ಳಲು ಪತ್ನಿಯ ಸಹಕಾರ, ತ್ಯಾಗ ಎಷ್ಟಿದೆ ಎಂಬುದು ಈ ಸಿನಿಮಾದಲ್ಲಿದೆ. ಗಾಂಧೀಜಿ ಮತ್ತು ಕಸ್ತೂರ್‌ ಬಾ ಅವರು ತಮ್ಮ ಮಧ್ಯೆ ಮೂಡಿದ ಭಿನ್ನಾಭಿಪ್ರಾಯಗಳನ್ನು ಹೇಗೆ ದಾಟಿ ಹೊರಬರುತ್ತಾರೆ ಮುಂತಾದ ಹಲವು ವಿಚಾರಗಳನ್ನು ಈ ಸಿನಿಮಾದಲ್ಲಿ ತೋರಿಸುತ್ತಿದ್ದೇವೆ’ ಎಂದು ಹರಿಪ್ರಿಯಾ ಹೇಳಿದ್ದಾರೆ. ‘ಈ ಸಿನಿಮಾದಲ್ಲಿ ನಾನು ಯಂಗ್‌, ಮಧ್ಯ ವಯಸ್ಸು ಮತ್ತು ಇಳಿ ವಯಸ್ಸಿನ ಕಸ್ತೂರ್‌ ಬಾ ಎಂಬ ಮೂರು ಶೇಡ್‌ಗಳ ಪಾತ್ರವನ್ನು ನಿರ್ವಹಿಸಿದ್ದೇನೆ. ಕೆಲವು ಫೋಟೊಗಳನ್ನು ನೋಡಿಯಷ್ಟೇ ನಾವು ಅವರ ಬಗ್ಗೆ ತಿಳಿದುಕೊಂಡಿದ್ದೇವೆ. ಕಸ್ತೂರ್‌ ಬಾ ಧರಿಸುತ್ತಿದ್ದ ಸೀರೆ, ಕುಂಕುಮ ಇತ್ಯಾದಿಗಳ ಬಗ್ಗೆ ಬರಗೂರು ರಾಮಚಂದ್ರಪ್ಪ ಅವರು ಸಾಕಷ್ಟು ರಿಸರ್ಚ್ ಮಾಡಿ ಕಾಸ್ಟ್ಯೂಮ್‌ ರೆಡಿ ಮಾಡಿದ್ದರು. ಆ ಕಾಲದಲ್ಲಿ ಮಹಿಳೆಯರಉಡುಪು ಹೇಗಿತ್ತು ಎಂಬುದರ ಬಗ್ಗೆಯೂ ಸರ್‌ ತಿಳಿದುಕೊಂಡಿದ್ದರು. ನನಗೆ ಪ್ರತಿಯೊಂದನ್ನು ಹೇಳಿ ಆ ಪಾತ್ರಕ್ಕೆ ಬಹಳ ಚೆನ್ನಾಗಿ ರೆಡಿ ಮಾಡಿದರು. ಅವರ ಜತೆಗೆ ಕೆಲಸ ಮಾಡುವುದೇ ಒಂದು ಅದ್ಭುತ ಅನುಭವ. ಪ್ರತಿ ಕಲರ್‌ ಪ್ಯಾಲೆಟ್‌ ಬಗ್ಗೆಯೂ ಅವರು ವಿವರಣೆ ನೀಡುತ್ತಿದ್ದರು. ಬಿಳಿ ಬಣ್ಣದ ಬಳಕೆ ಶಾಂತಿಗಾಗಿ ಎಂಬಿತ್ಯಾದಿ ಹಲವು ವಿಷಯಗಳನ್ನು ನಾನು ಅವರಿಂದ ತಿಳಿದುಕೊಂಡಿದ್ದೇನೆ. ಬೇರೆ ಕಮರ್ಷಿಯಲ್‌ ಸಿನಿಮಾಗಳಲ್ಲಿ ಇವುಗಳನ್ನು ಕಲಿಯಲು ಆಗುವುದಿಲ್ಲ’ ಎಂದಿದ್ದಾರೆ ಹರಿಪ್ರಿಯಾ. ಅವರು ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಮುಗಿಸಿ ಡಬ್ಬಿಂಗ್‌ ಕೆಲಸವನ್ನೂ ಪೂರ್ಣಗೊಳಿಸಿದ್ದಾರೆ. ಈ ಸಿನಿಮಾದಲ್ಲಿ ನಟ ಕಿಶೋರ್‌ ಅವರು ಗಾಂಧೀಜಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. "ನನ್ನನ್ನು ಈ ರೀತಿಯ ಉತ್ತಮ ಸ್ಕ್ರಿಪ್ಟ್‌ಗಳು ಹುಡುಕಿಕೊಂಡು ಬರುತ್ತಿರುವುದಕ್ಕೆ ಈ ಜನರೇಷನ್‌ನ ನಾಯಕಿಯರಲ್ಲಿ ನಾನು ಅದೃಷ್ಟವಂತೆ ಎನ್ನಬಹುದು. ಇದರಿಂದಾಗಿ ನನ್ನ ಜವಾಬ್ದಾರಿಯೂ ಹೆಚ್ಚಾಗಿದೆ. ಕಸ್ತೂರ್‌ ಬಾ ಬಯೋಪಿಕ್‌ನಲ್ಲಿ ನಾನು ನಟಿಸಿದ್ದು ನನಗೆ ಹೆಚ್ಚು ಖುಷಿ ಕೊಟ್ಟಿದೆ" ಎಂದು ಹೇಳಿದ್ದಾರೆ ನಟಿ ಹರಿಪ್ರಿಯಾ