ಭಾರತದಲ್ಲಿ ಮಕ್ಕಳ ಮೇಲೆ ಕೋವೊವ್ಯಾಕ್ಸ್ ಲಸಿಕೆ ಪ್ರಯೋಗ ಜುಲೈನಲ್ಲಿ ಆರಂಭ

ಅಮೆರಿಕದ ನೋವಾವ್ಯಾಕ್ಸ್ ಕಂಪೆನಿಯ ಲಸಿಕೆಯನ್ನು ಭಾರತದಲ್ಲಿ ಕೋವೊವ್ಯಾಕ್ಸ್ ಹೆಸರಿನಲ್ಲಿ ಉತ್ಪಾದಿಸುತ್ತಿರುವ ಸೀರಮ್ ಸಂಸ್ಥೆಯು ಜುಲೈನಿಂದ ಮಕ್ಕಳ ಮೇಲೆ ಲಸಿಕೆ ಪ್ರಯೋಗ ಆರಂಭಿಸಲಿದೆ.

ಭಾರತದಲ್ಲಿ ಮಕ್ಕಳ ಮೇಲೆ ಕೋವೊವ್ಯಾಕ್ಸ್ ಲಸಿಕೆ ಪ್ರಯೋಗ ಜುಲೈನಲ್ಲಿ ಆರಂಭ
Linkup
ಹೊಸದಿಲ್ಲಿ: ಭಾರತದಲ್ಲಿ '' ಹೆಸರಿನಲ್ಲಿ ಅಮೆರಿಕದ ನೋವಾವ್ಯಾಕ್ಸ್ ಲಸಿಕೆಯನ್ನು ಉತ್ಪಾದಿಸಲು ಸಿದ್ಧತೆ ನಡೆಸಿರುವ ಪುಣೆಯ ಆಫ್ ಇಂಡಿಯಾ, ಮುಂದಿನ ತಿಂಗಳಿನಿಂದ ಮಕ್ಕಳ ಮೇಲೆ ಪ್ರಯೋಗ ಆರಂಭಿಸಲು ಯೋಜನೆ ರೂಪಿಸಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ. ಅಮೆರಿಕ ಮೂಲದ ನೋವಾವ್ಯಾಕ್ಸ್, ತನ್ನ ಕೋವಿಡ್ 19 ಲಸಿಕೆ ಶೇ 90ಕ್ಕಿಂತಲೂ ಅಧಿಕ ಪರಿಣಾಮಕಾರಿ ಎಂದು ಹೇಳಿತ್ತು. ಅಮೆರಿಕ ಹಾಗೂ ಮೆಕ್ಸಿಕೋದಲ್ಲಿನ ತನ್ನ ಇತ್ತೀಚಿನ ಪ್ರಯೋಗಗಳ ಆಧಾರದಲ್ಲಿ ಅದು ವರದಿ ನೀಡಿದೆ. ನೋವಾವ್ಯಾಕ್ಸ್ ಲಸಿಕೆಯನ್ನು ಸೀರಮ್ ಸಂಸ್ಥೆಯು ಭಾರತದಲ್ಲಿ ಕೋವೊವ್ಯಾಕ್ಸ್ ಹೆಸರಿನಲ್ಲಿ ಉತ್ಪಾದಿಸುತ್ತಿದ್ದು, ಮಾರ್ಚ್ ತಿಂಗಳಿನಿಂದ ವಯಸ್ಕರ ಮೇಲೆ ಪ್ರಯೋಗ ನಡೆಯುತ್ತಿದೆ. ಎರಡನೆಯ ಅಲೆಯ ಹೊಡೆತದ ನಡುವೆ ಲಸಿಕೆ ಕೊರತೆಯನ್ನು ಸರಿದೂಗಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಸರಕಾರ, ಹೊಸ ಲಸಿಕೆಗಳ ಮೇಲೆ ಕಣ್ಣಿರಿಸಿದೆ. ಇದು ಮಾರುಕಟ್ಟೆಯಲ್ಲಿ ಅತ ಅಗ್ಗದ ದರದಲ್ಲಿ ದೊರಕುವ ಲಸಿಕೆಗಳಲ್ಲಿ ಒಂದು ಎನ್ನಲಾಗಿದೆ. ಕೋವೊವ್ಯಾಕ್ಸ್ ಲಸಿಕೆಯು ಸೆಪ್ಟೆಂಬರ್ ತಿಂಗಳಿನಿಂದ ಭಾರತದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ತನ್ನ ಲಸಿಕೆಯು ಸಾಧಾರಣ ಹಾಗೂ ತೀವ್ರ ಕಾಯಿಲೆಗಳಿಂದ ಶೇ 100ರಷ್ಟು ರಕ್ಷಣೆ ಪ್ರದರ್ಶಿಸಿದೆ. ತನ್ನ ದಕ್ಷತೆ, ಸುರಕ್ಷತೆ ಹಾಗೂ ಪ್ರತಿರಕ್ಷಣಾ ಸಾಮರ್ಥ್ಯ ಹೆಚ್ಚಳದ ಮೌಲ್ಯಮಾಪನ ನಡೆಸಲು ಅಮೆರಿಕ ಮತ್ತು ಮೆಕ್ಸಿಕೋಗಳಲ್ಲಿನ 119 ಸ್ಥಳಗಳಲ್ಲಿ 29,960 ಮಂದಿಯನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಒಟ್ಟಾರೆ ಶೇ 90.4ರಷ್ಟು ಪರಿಣಾಮಕಾರಿ ಎನಿಸಿದೆ ಎಂದು ಕಂಪೆನಿ ತಿಳಿಸಿದೆ.