ಭಾರತದಲ್ಲಿ ಜೆಪಿ ಮೋರ್ಗನ್‌ನಿಂದ 4,000 ಟೆಕ್ಕಿಗಳ ನೇಮಕ

ಅಮೆರಿಕ ಮೂಲದ ದೈತ್ಯ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ ಜೆಪಿ ಮೋರ್ಗನ್‌ ಭಾರತದಲ್ಲಿರುವ ತನ್ನ ಘಟಕಗಳಿಗೆ 4,000 ತಂತ್ರಜ್ಞರನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದ್ದು, ಬೆಂಗಳೂರು, ಮುಂಬಯಿ, ಹೈದರಾಬಾದ್‌ನಲ್ಲಿ ಟೆಕ್ಕಿಗಳಿಗೆ ಉದ್ಯೋಗ ನೀಡಲಿದೆ.

ಭಾರತದಲ್ಲಿ ಜೆಪಿ ಮೋರ್ಗನ್‌ನಿಂದ 4,000 ಟೆಕ್ಕಿಗಳ ನೇಮಕ
Linkup
ಬೆಂಗಳೂರು: ಅಮೆರಿಕ ಮೂಲದ ದೈತ್ಯ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ ಭಾರತದಲ್ಲಿರುವ ತನ್ನ ಘಟಕಕ್ಕೆ 4,000 ತಂತ್ರಜ್ಞರನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದೆ. ಪ್ರಸ್ತುತ ಬೆಂಗಳೂರು, ಮುಂಬಯಿ ಮತ್ತು ಹೈದರಾಬಾದ್‌ನಲ್ಲಿ 35,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ''ನಮ್ಮ ಬಿಸಿನೆಸ್‌ ವಿಸ್ತರಣೆ ಮತ್ತು ಗ್ರಾಹಕ ಸೇವೆಗೆ ತಂತ್ರಜ್ಞಾನ ನಿರ್ಣಾಯಕವಾಗಿದೆ'' ಎಂದು ಕಂಪನಿಯ ಎಚ್‌ ಆರ್‌ ವಿಭಾಗದ ಮುಖ್ಯಸ್ಥ ಗೌರವ್‌ ಅಹ್ಲುವಾಲಿಯಾ ತಿಳಿಸಿದ್ದಾರೆ. ಪ್ರತಿಭಾವಂತ ತಂತ್ರಜ್ಞರನ್ನು ಮೋರ್ಗನ್‌ ನೇಮಕಾತಿ ಮಾಡಿಕೊಳ್ಳಲಿದೆ. ಕ್ಲೌಡ್‌, ಬಿಗ್‌ ಡೇಟಾ, ಮೆಶೀನ್‌ ಲರ್ನಿಂಗ್‌, ಡಿಜಿಟಲ್‌ ತಂತ್ರಜ್ಞಾನ ವಲಯದಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಬಹುತೇಕ ನೇಮಕಾತಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಜೆಪಿ ಮೋರ್ಗನ್‌ ಕೋವಿಡ್‌ ಪರಿಹಾರ ಕಾರ್ಯಚರಣೆಗಳಿಗೆ 2 ದಶಲಕ್ಷ ಡಾಲರ್‌ (ಅಂದಾಜು 1,460 ಕೋಟಿ ರೂ.) ದೇಣಿಗೆ ನೀಡಿತ್ತು. ನಾನಾ ಹಣಕಾಸು ಸೇವೆ ಹಾಗೂ ಇನ್ವೆಸ್ಟ್‌ಮೆಂಟ್‌ ಬ್ಯಾಂಕಿಂಗ್‌ ಸೌಲಭ್ಯಗಳನ್ನು ಜೆಪಿ ಮೋರ್ಗನ್‌ ನೂರಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಗ್ರಾಹಕರಿಗೆ ನೀಡುತ್ತದೆ.