ಭಾರತದ ಕೋವಿಡ್ ಲಸಿಕೆ ವ್ಯಾಪ್ತಿ 2021ರ ಅಂತ್ಯಕ್ಕೆ 35% ಕ್ಕಿಂತ ಕಡಿಮೆ ಇರಲಿದೆ - ಐಎಂಎಫ್

ಕೋವಿಡ್‌-19 ಲಸಿಕೆಯ ಕವರೇಜ್‌ ಭಾರತದಲ್ಲಿ 2021ರ ಅಂತ್ಯದ ವೇಳೆಗೆ ಶೇ.35ರ ಒಳಗಿರಬಹುದು ಎಂದು ಐಎಂಎಫ್‌ನ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್‌, ಎಕನಾಮಿಸ್ಟ್‌ ರುಚಿರ್‌ ಅಗರವಾಲ್‌ ಸಿದ್ಧಪಡಿಸಿರುವ ವರದಿ ತಿಳಿಸಿದೆ.

ಭಾರತದ ಕೋವಿಡ್ ಲಸಿಕೆ ವ್ಯಾಪ್ತಿ 2021ರ ಅಂತ್ಯಕ್ಕೆ 35% ಕ್ಕಿಂತ ಕಡಿಮೆ ಇರಲಿದೆ - ಐಎಂಎಫ್
Linkup
ಹೊಸದಿಲ್ಲಿ: ಭಾರತದಲ್ಲಿ ಕೋವಿಡ್‌-19 ಲಸಿಕೆಯ ಕವರೇಜ್‌ 2021ರ ಅಂತ್ಯದ ವೇಳೆಗೆ ಶೇ.35ರ ಒಳಗಿರಬಹುದು ಎಂದು ಐಎಂಎಫ್‌ನ ಮುಖ್ಯ ಆರ್ಥಿಕ ತಜ್ಞೆ ಮತ್ತು ಎಕನಾಮಿಸ್ಟ್‌ ರುಚಿರ್‌ ಅಗರವಾಲ್‌ ಸಿದ್ಧಪಡಿಸಿರುವ ವರದಿ ತಿಳಿಸಿದೆ. 2021ರ ವೇಳೆಗೆ ವಿಶ್ವದ ಜನಸಂಖ್ಯೆಯಲ್ಲಿ ಕನಿಷ್ಠ ಶೇ.40 ಮಂದಿಗೆ ಹಾಗೂ 2022ರ ಮೊದಲಾರ್ಧದ ವೇಳೆಗೆ ಶೇ.60ರಷ್ಟು ಮಂದಿಗೆ ಲಸಿಕೆ ವಿತರಣೆಯಾಗಬೇಕು ಎಂದಿರುವ , ಕೋವಿಡ್‌ ನಿರ್ಮೂಲನೆಯ ನಿಟ್ಟಿನಲ್ಲಿ ತಾನು 50 ಶತಕೋಟಿ ಡಾಲರ್‌ಗಳ (3.65 ಲಕ್ಷ ಕೋಟಿ ರೂ.) ಯೋಜನೆ ಸಿದ್ಧಪಡಿಸುತ್ತಿರುವುದಾಗಿ ತಿಳಿಸಿದೆ. ಕೋವಿಡ್‌ ಎರಡನೇ ಅಲೆಯ ತೀವ್ರತೆಯಿಂದ ಆರ್ಥಿಕತೆಗೂ ಹಿನ್ನಡೆಯಾಗಲಿದೆ. ಶ್ರೀಮಂತ ಮತ್ತು ಬಡ ರಾಷ್ಟ್ರಗಳ ನಡುವಣ ಅಂತರ ಮತ್ತಷ್ಟು ಹೆಚ್ಚಲಿದೆ. ಶ್ರೀಮಂತ ದೇಶಗಳು ಬೇಗನೆ ವ್ಯಾಪಕ ಲಸಿಕೆ, ಚಿಕಿತ್ಸೆಗಳನ್ನು ಜನತೆಗೆ ಒದಗಿಸಿದರೆ, ಬಡ ರಾಷ್ಟ್ರಗಳಿಗೆ ಭಾರಿ ಸಂಕಷ್ಟ ಎದುರಾಗಲಿದೆ ಎಂದು ವರದಿ ಎಚ್ಚರಿಸಿದೆ. ಭಾರತದಲ್ಲಿ ಶೇ.60ರಷ್ಟು ಜನತೆಗೆ ಲಸಿಕೆ ಪೂರೈಸಲು 100 ಕೋಟಿ ಡೋಸ್‌ ಲಸಿಕೆ ಖರೀದಿಸಬೇಕು ಎಂದು ತಿಳಿಸಿದೆ.