ಭೂ ಕಬಳಿಕೆ ಪ್ರಕರಣ; ಬೈರತಿ ಬಸವರಾಜ್‌ ಕೇಸ್‌ಗೆ ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಿಸಿದ ಹೈಕೋರ್ಟ್‌

ತಮ್ಮ ವಿರುದ್ಧದ ದೂರು ವಿಚಾರಣೆಗೆ ಅಂಗೀಕರಿಸಿ ಸಮನ್ಸ್‌ ಜಾರಿಗೊಳಿಸಿದ 42ನೇ ಎಸಿಎಂಎಂ ಕೋರ್ಟ್‌ ಆದೇಶ ರದ್ದು ಕೋರಿ, ಭೈರತಿ ಬಸವರಾಜ್‌ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಈ ಕುರಿತು ನ್ಯಾ. ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ಪೀಠ ಕೆಲ ಕಾಲ ವಾದ - ಪ್ರತಿವಾದ ಆಲಿಸಿತು. ಬಳಿಕ ವಿಚಾರಣೆಯನ್ನು ಫೆಬ್ರುವರಿ ಎರಡನೇ ವಾರಕ್ಕೆ ಮುಂದೂಡಿ, ಅಲ್ಲಿಯವರೆಗೂ ಅರ್ಜಿದಾರರ ವಿರುದ್ಧದ ನಗರದ 42ನೇ ಎಸಿಎಂಎಂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ 2021 ರ ಡಿ.21 ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಮಂದುವರಿಸುವುದಾಗಿ ಆದೇಶಿಸಿತು.

ಭೂ ಕಬಳಿಕೆ ಪ್ರಕರಣ; ಬೈರತಿ ಬಸವರಾಜ್‌ ಕೇಸ್‌ಗೆ ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಿಸಿದ ಹೈಕೋರ್ಟ್‌
Linkup
ಬೆಂಗಳೂರು: ಭೂ ಕಬಳಿಕೆ ಪ್ರಕರಣ ಸಂಬಂಧ ಸಚಿವ ಬೈರತಿ ಬಸವರಾಜ್‌ ಮತ್ತು ಶಾಸಕ ಆರ್‌.ಶಂಕರ್‌ ವಿರುದ್ಧದ ಖಾಸಗಿ ದೂರು ಸಂಬಂಧ ಅಧೀನ ನ್ಯಾಯಾಲಯದ ವಿಚಾರಣೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್‌ ಮಂಗಳವಾರ ವಿಸ್ತರಿಸಿದೆ. ಭೂ ಕಬಳಿಕೆ ಆರೋಪ ಸಂಬಂಧ ತಮ್ಮ ವಿರುದ್ಧದ ದೂರು ವಿಚಾರಣೆಗೆ ಅಂಗೀಕರಿಸಿ ಸಮನ್ಸ್‌ ಜಾರಿಗೊಳಿಸಿದ 42ನೇ ಎಸಿಎಂಎಂ ಕೋರ್ಟ್‌ ಆದೇಶ ರದ್ದು ಕೋರಿ, ಭೈರತಿ ಬಸವರಾಜ್‌ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಈ ಕುರಿತು ನ್ಯಾ. ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ಪೀಠ ಕೆಲ ಕಾಲ ವಾದ - ಪ್ರತಿವಾದ ಆಲಿಸಿತು. ಬಳಿಕ ವಿಚಾರಣೆಯನ್ನು ಫೆಬ್ರುವರಿ ಎರಡನೇ ವಾರಕ್ಕೆ ಮುಂದೂಡಿ, ಅಲ್ಲಿಯವರೆಗೂ ಅರ್ಜಿದಾರರ ವಿರುದ್ಧದ ನಗರದ 42ನೇ ಎಸಿಎಂಎಂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ 2021 ರ ಡಿ.21 ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಮಂದುವರಿಸುವುದಾಗಿ ಆದೇಶಿಸಿತು. ಪ್ರಕರಣದ ಹಿನ್ನೆಲೆ: ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್‌.ಪುರ ಹೋಬಳಿಯ ಕಲ್ಕೆರೆ ಗ್ರಾಮದ ಸರ್ವೆ ನಂಬರ್‌ 375/2 ರಲ್ಲಿನ 22.43 ಎಕರೆ ಜಾಗ ಅದೂರ್‌ ಅಣ್ಣೈಯಪ್ಪಗೆ ಎಂಬುವರಿಗೆ ಸೇರಿತ್ತು. 2003ರ ಮೇ 21ರಂದು ಸಂಬಂಧಿಕರಾದ ಮಾದಪ್ಪ ಮತ್ತು ಪಿಳ್ಳಮಾದಪ್ಪ ಖಾಲಿ ಕಾಗದಗಳ ಮೇಲೆ ಅದೂರ್‌ ಅಣ್ಣೈಯಪ್ಪ ಅವರ ಸಹಿ ಮತ್ತು ಹೆಬ್ಬೆಟ್ಟು ಪಡೆದುಕೊಂಡಿದ್ದರು. ನಂತರ ಪಾಲುದಾರಿಕೆ ಕರಾರು ಸಿದ್ಧಪಡಿಸಿ ಕೊಂಡು ಬೈರತಿ ಬಸವರಾಜ್‌ಗೆ 2003ರ ಮೇ 21ರಂದು ಅಕ್ರಮವಾಗಿ 22.43 ಎಕರೆ ಜಮೀನು ಮಾರಾಟ ಮಾಡಿ ದ್ದಾರೆ ಹಾಗೂ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಣಿ ಮಾಡಿ ಕೊಟ್ಟಿದ್ದಾರೆ ಎಂದು ಆರೋಪಿಸಿ ಅಣ್ಣೈಯಪ್ಪ ಪುತ್ರ ಮಾದಪ್ಪ ಖಾಸಗಿ ದೂರು ದಾಖಲಿಸಿದ್ದರು.