ಮದುವೆಯಾಗಿ 3 ವರ್ಷವಾದ್ರೂ ಹತ್ತಿರ ಸೇರದ ಸಲಿಂಗಕಾಮಿ ಗಂಡನ ವಿರುದ್ಧ ದೂರು ದಾಖಲಿಸಿದ ಪತ್ನಿ

2018ರಲ್ಲಿ 28 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರ್‌ನನ್ನು ಮಹಿಳಾ ಉದ್ಯೋಗಿ ವಿವಾಹವಾಗಿದ್ದರು. ವಿವಾಹವಾದ ದಿನದಿಂದಲೂ ದಾಂಪತ್ಯದಲ್ಲಿ ಹೊಂದಾಣಿಕೆ ಇರಲಿಲ್ಲ. ಮದುವೆಯಾದ ದಿನದಿಂದಲೂ ಪತ್ನಿ ಬಳಿ ಬಂದಾಗಲೆಲ್ಲ, ಪತಿ ಒಂದಿಲ್ಲೊಂದು ಕಾರಣ ನೀಡಿ ದೂರ ಸರಿಸುತ್ತಿದ್ದ. ಸರಸ ಸಲ್ಲಾಪದಲ್ಲಿ ನಿರಾಸಕ್ತಿ ಹೊಂದಿದ್ದ ಪತಿಯ ಬಗ್ಗೆ ಪತ್ನಿಗೆ ತುಂಬಾ ಬೇಸರವಿತ್ತು. ಒಮ್ಮೆ ಪತ್ನಿ ತನ್ನ ಗಂಡನ ಮೊಬೈಲ್‌ ಪರಿಶೀಲಿಸಿದಾಗ ಆಕೆಗೆ ಶಾಕ್ ಆಗಿತ್ತು.

ಮದುವೆಯಾಗಿ 3 ವರ್ಷವಾದ್ರೂ ಹತ್ತಿರ ಸೇರದ ಸಲಿಂಗಕಾಮಿ ಗಂಡನ ವಿರುದ್ಧ ದೂರು ದಾಖಲಿಸಿದ ಪತ್ನಿ
Linkup
ಬೆಂಗಳೂರು: ಆತ ಸಾಫ್ಟ್‌ವೇರ್‌ ಎಂಜಿನಿಯರ್‌. ಪತ್ನಿ ಹತ್ತಿರ ಹೋದಾಗಲೆಲ್ಲಾ ದೂರ ದೂರ ಸರಿಯುತ್ತಿದ್ದ. ಪತಿ ವರ್ತನೆ ಕಂಡು ಪತ್ನಿಗೆ ರೋಸಿ ಹೋಗಿತ್ತು. ಯಾಕೆ ಹೀಗೆ ಮಾಡುತ್ತಾನೆ ಎಂದು ತಿಳಿಯದೆ ತುಂಬಾ ತಲೆಕೆಡಿಸಿಕೊಂಡಿದ್ದಳು. ತನ್ನ ಜತೆ ಸರಸ ಸಲ್ಲಾಪಕ್ಕೆ ನಿರಾಸಕ್ತಿ ತೋರಿಸುವ ಗಂಡನ ಬಗ್ಗೆ ಬೇಸರಗೊಂಡಿದ್ದಳು. ಸುಮಾರು ಎರಡು ವರ್ಷಗಳ ಬಳಿಕ ತಿಳಿಯಿತು ಆತ ಸಲಿಂಗ ಕಾಮಿ ಎಂದು. ವಿವಾಹವಾಗಿ ಮೂರು ವರ್ಷದ ಬಳಿಕ ಪತಿಯಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಆಕೆ ಅರ್ಜಿ ಸಲ್ಲಿಸಿದ್ದಾಳೆ. 2018ರಲ್ಲಿ 28 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರ್‌ನನ್ನು ಮಹಿಳಾ ಉದ್ಯೋಗಿ ವಿವಾಹವಾಗಿದ್ದರು. ವಿವಾಹವಾದ ದಿನದಿಂದಲೂ ದಾಂಪತ್ಯದಲ್ಲಿ ಹೊಂದಾಣಿಕೆ ಇರಲಿಲ್ಲ. ಮದುವೆಯಾದ ದಿನದಿಂದಲೂ ಪತ್ನಿ ಬಳಿ ಬಂದಾಗಲೆಲ್ಲ, ಪತಿ ಒಂದಿಲ್ಲೊಂದು ಕಾರಣ ನೀಡಿ ದೂರ ಸರಿಸುತ್ತಿದ್ದ. ಸರಸ ಸಲ್ಲಾಪದಲ್ಲಿ ನಿರಾಸಕ್ತಿ ಹೊಂದಿದ್ದ ಪತಿಯ ಬಗ್ಗೆ ಪತ್ನಿಗೆ ತುಂಬಾ ಬೇಸರವಿತ್ತು. ಒಮ್ಮೆ ಪತ್ನಿ ತನ್ನ ಗಂಡನ ಮೊಬೈಲ್‌ ಪರಿಶೀಲಿಸಿದಾಗ ಅದರಲ್ಲಿಎರಡು ಗೇ ಡೇಟಿಂಗ್‌ ಆ್ಯಪ್‌ಗಳು ಡೌನ್‌ಲೋಡ್‌ ಆಗಿರುವುದು ಕಂಡುಬಂದಿವೆ. ಇದರಿಂದ ತನ್ನ ಪತಿ ಸಲಿಂಗಕಾಮಿ ಎಂಬುದು ತಿಳಿದ ಪತ್ನಿ ದಿಗ್ಬ್ರಾಂತಳಾಗಿದ್ದಾಳೆ. ತನ್ನ ಗಂಡ ಸಲಿಂಗಕಾಮಿಯಾಗಿರುವ ಕಾರಣ ಸ್ತ್ರೀಯೊಂದಿಗೆ ಆತನಿಗೆ ಆಸಕ್ತಿ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾಳೆ. ಗಂಡ ಮೋಸ ಮಾಡಿರುವ ಕಾರಣವನ್ನೇ ಮುಂದಿಟ್ಟುಕೊಂಡು ಕೌಂಟುಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತಾನು ಸಲಿಂಗ ಕಾಮಿ ಎಂದು ತಿಳಿದಿದ್ದರೂ ವರದಕ್ಷಿಣೆ ಪಡೆದುಕೊಂಡು ಮದುವೆ ಮಾಡಿಕೊಂಡು ಮೋಸ ಮಾಡಿರುವುದಾಗಿ ಅವರು ಅರ್ಜಿಯಲ್ಲಿ ಹೇಳಿದ್ದಾರೆ. ಜತೆಗೆ ಪತಿಯ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ಫೋನ್‌ನಲ್ಲಿ ಈ ಡೇಟಿಂಗ್‌ ಆ್ಯಪ್‌ಗಳು ಇರುವುದು ನಿಜವಾದರೂ ತಾನು ಇದುವರೆಗೆ ಯಾವ ಸಲಿಂಗಿಯ ಜತೆಯೂ ಡೇಟಿಂಗ್‌ ಮಾಡಿಲ್ಲ ಎಂದು ಪತಿ ಹೇಳಿಕೆ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.