ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮನವಿ ತಿರಸ್ಕರಿಸಿದ ಆರ್‌ಬಿಐ: ನಿಯಮ ಸಡಿಲಿಕೆ ಆಗದು!

ಭಾರತೀಯ ರಿಸರ್ವ್ ಬ್ಯಾಂಕ್ ಹೇರಿರುವ ಕಠಿಣ ಸ್ವರೂಪದ ನಿರ್ಬಂಧಿತ ಕ್ರಮಗಳ (ಪಿಸಿಎ) ಚೌಕಟ್ಟನ್ನು ಸಡಿಲಗೊಳಿಸುವಂತೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಸಲ್ಲಿಸಿದ್ದ ಮನವಿಯನ್ನು ಆರ್‌ಬಿಐ (RBI)ತಿರಸ್ಕರಿಸಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮನವಿ ತಿರಸ್ಕರಿಸಿದ ಆರ್‌ಬಿಐ: ನಿಯಮ ಸಡಿಲಿಕೆ ಆಗದು!
Linkup
ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಹೇರಿರುವ ಕಠಿಣ ಸ್ವರೂಪದ ನಿರ್ಬಂಧಿತ ಕ್ರಮಗಳ (ಪಿಸಿಎ) ಚೌಕಟ್ಟನ್ನು ಸಡಿಲಗೊಳಿಸುವಂತೆ () ಸಲ್ಲಿಸಿದ್ದ ಮನವಿಯನ್ನು ()ತಿರಸ್ಕರಿಸಿದೆ. ಇದು ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಕೆಟ್ಟ ಸಾಲಗಳ () ಹೆಚ್ಚಳಕ್ಕೆ ಕಾರಣವಾಗಬಹುದು ಎಂದಿದ್ದಾರೆ ತಜ್ಞರು. ಎಲ್ಲ ಸಾಲದಾತ ಸಂಸ್ಥೆಗಳ ಮೇಲೆ ಏಕರೂಪದ ವಿವೇಚನಾಶೀಲ ಆಸ್ತಿ ಗುಣಮಟ್ಟದ ಮಾನದಂಡ ವಿಧಿಸಲು ಆರ್‌ಬಿಐ ಉದ್ದೇಶಿಸಿದೆ. ಹೀಗಾಗಿ ನಿಯಮ ಸಡಿಲಿಕೆಯ ಮನವಿಯನ್ನು ಸ್ವೀಕರಿಸಲಾಗದು ಎಂದು ಎನ್‌ಬಿಎಫ್‌ಸಿ ಲಾಬಿ ಗ್ರೂಪ್ ಆಗಿರುವ 'ಫೈನಾನ್ಸ್ ಇಂಡಸ್ಟ್ರಿ ಡೆವಲಪ್‌ಮೆಂಟ್ ಕೌನ್ಸಿಲ್ (ಎಫ್‌ಐಡಿಸಿ) ಗೆ ಆರ್‌ಬಿಐ ತಿಳಿಸಿದೆ. "ವಿವೇಚನಾಶೀಲ ಮಾನದಂಡಗಳನ್ನು ಸಡಿಲಿಸುವಂತೆ ನೀಡಿಲಾಗಿರುವ ನಿಮ್ಮ ಮನವಿಯನ್ನು ಒಪ್ಪಿಕೊಳ್ಳಲು ನಮ್ಮಿಂದ ಆಗದು" ಎಂದು ಆರ್‌ಬಿಐ (RBI) ಡಿಸೆಂಬರ್ 13 ರಂದು ಎಫ್‌ಐಡಿಸಿ (FIDC)ಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ. ಆರ್‌ಬಿಐ ವಿಧಿಸಿರುವ ಕಠಿಣ ನಿಯಮಗಳಿಂದ ಪ್ರಸ್ತುತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಎನ್‌ಬಿಎಫ್‌ಸಿಯಲ್ಲಿ ಗಳು (ಎನ್‌ಪಿಎ) 300 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ. ಎನ್‌ಬಿಎಫ್‌ಸಿ ವಲಯದಲ್ಲಿನ ಒಟ್ಟು ಎನ್‌ಪಿಎಗಳು ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಶೇ.6.4ರಷ್ಟು ಇರಲಿದೆ ಎಂದು ಆರ್‌ಬಿಐ ಹೇಳಿದೆ. ಟಾಪ್ 30 'ಎನ್‌ಬಿಎಫ್‌ಸಿ'ಗಳಲ್ಲಿ ₹84,000 ಕೋಟಿಗೂ ಹೆಚ್ಚು ವಸೂಲಾಗದ ಸಾಲICRA ರೇಟಿಂಗ್ಸ್‌ನ ಹಿರಿಯ ಅಧಿಕಾರಿಯ ಪ್ರಕಾರ, ವಸತಿ ಹಣಕಾಸು ಕಂಪನಿಗಳು ಸೇರಿದಂತೆ ಟಾಪ್ 30 ಎನ್‌ಬಿಎಫ್‌ಸಿಗಳಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ಸುಮಾರು ₹84,000 ಕೋಟಿಯಷ್ಟು ವಸೂಲಾಗದ ಸಾಲ (ಎನ್‌ಪಿಎ) ಇದೆ ಎಂದಿದ್ದಾರೆ. ಎನ್‌ಬಿಎಫ್‌ಸಿ ( )ಗಳು ಸೇರಿದಂತೆ ಎಲ್ಲ ಸಾಲದಾತ ಸಂಸ್ಥೆಗಳು 90 ದಿನಗಳಿಗಿಂತ ಹೆಚ್ಚು ಅವಧಿವರೆಗೆ ಬಾಕಿಯಿರುವ ಕೆಟ್ಟ ಸಾಲಗಳನ್ನು (ಬ್ಯಾಡ್‌ ಲೋನ್‌) ಗುರುತಿಸಬೇಕು. ಮತ್ತು ಪೂರ್ಣ ಸಾಲದ ಮೊತ್ತವನ್ನು ಪಾವತಿಸಿದ ನಂತರವೇ ಅಂತಹ ಖಾತೆಗಳನ್ನು ಅಪ್‌ಗ್ರೇಡ್ ಮಾಡುವಂತೆ ಆರ್‌ಬಿಐ ನವೆಂಬರ್ 12 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ, ನಿರ್ದೇಶಿಸಿದೆ. ಬ್ಯಾಂಕ್‌ಗಳು ಈ ನಿಯಮವನ್ನು ಈಗಾಗಲೇ ಅನುಸರಿಸುತ್ತಿವೆ. ವಸೂಲಾಗದ ಸಾಲ (ಎನ್‌ಪಿಎ) ವಿಚಾರದಲ್ಲಿ ನಿರ್ದಿಷ್ಟ ಮಿತಿಯನ್ನು ಮೀರುವ ಅಥವಾ ಅವರ ಬಂಡವಾಳ ಅರ್ಹತಾ ಅನುಪಾತ ಕುಸಿತವಾದರೆ ಬ್ಯಾಂಕೇತರ ಸಾಲದಾರರನ್ನು ಕಠಿಣ ದಂಡನೆಗೆ ಒಳಪಡಿಸಲು ಬ್ಯಾಂಕೇತರ ಹಣಕಾಸು ಕಂಪನಿಗಳ (ಎನ್‌ಬಿಎಫ್‌ಸಿ) ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ಕಠಿಣ ಸ್ವರೂಪದ ನಿರ್ಬಂಧಿತ ಕ್ರಮಗಳ (ಪಿಸಿಎ) ಚೌಕಟ್ಟನ್ನು ಬಿಡುಗಡೆ ಮಾಡಿದೆ. ತನ್ನ ವೆಬ್‌ಸೈಟ್‌ನಲ್ಲಿ ಈ ಕುರಿತು ಅಧಿಸೂಚನೆ ಪ್ರಕಟಿಸಿರುವ ಆರ್‌ಬಿಐ, ಎನ್‌ಬಿಎಫ್‌ಸಿಗಳಿಗಾಗಿ (NBFCs) ಮೊದಲ ಬಾರಿಗೆ ರೂಪಿಸಲಾಗಿರುವ ವಿನೂತನ ಚೌಕಟ್ಟು ಮುಂದಿನ ವರ್ಷದ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿತ್ತು. ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ '' ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.