ದೇಶದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರ ಮತ್ತೆ ಏರಿಕೆ; ವಾಹನ ಸವಾರರ ಜೇಬಿಗೆ ಬಿತ್ತು ಬರೆ

Today Petrol Diesel Price: ಕಳೆದ ಕೆಲ ಸಮಯದಿಂದ ದೇಶದಲ್ಲಿ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಬಂದಿದೆ. ಈಗಾಗಲೇ ಪೆಟ್ರೋಲ್​, ಡೀಸೆಲ್​ ಬೆಲೆ ಶತಕದ ಗಡಿ ದಾಟಿದೆ. ದಿನನಿತ್ಯ ಬೆಲೆ ಏರಿಕೆಯ ನೋವು ಅನುಭವಿಸ್ತಿರೋ ಗ್ರಾಹಕರು ‘ಹಿಂಗಾದ್ರೆ ಜೀವ್ನ ಹೆಂಗೆ ಗುರೂ’ ಅಂತಾನೆ ಸರ್ಕಾರಕ್ಕೆ ಉಗಿಯುತ್ತಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ​​ಬೆಲೆ ಪರಿಷ್ಕರಣೆಗೊಂಡ ಬಳಿಕ ಇಂದು ಪೆಟ್ರೋಲ್​, ಡೀಸೆಲ್​ ದರದ ವಿವರ ಇಲ್ಲಿ ಕೊಡಲಾಗಿದೆ.

ದೇಶದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರ ಮತ್ತೆ ಏರಿಕೆ; ವಾಹನ ಸವಾರರ ಜೇಬಿಗೆ ಬಿತ್ತು ಬರೆ
Linkup
ಹೊಸದಿಲ್ಲಿ: ಪೆಟ್ರೋಲ್‌, ಡೀಸೆಲ್‌ ದರ ಕಂಡು ಜನ ಸಾಮಾನ್ಯರು ನಿಗಿ ನಿಗಿ ಕೆಂಡವಾಗುತ್ತಿರುವಾಗಲೇ ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯಾಗಿದೆ. ದಿನ ನಿತ್ಯ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಕಾಣುತ್ತಿದ್ದು, ಇಂದು ಮತ್ತೆ ಈ ದರದಲ್ಲಿ ಏರಿಕೆ ಕಂಡಿದೆ. ಅಕ್ಟೋಬರ್‌ 20ನೆಯ ದಿನವಾದ ಇಂದು (ಬುಧವಾರ) ಕೂಡ ತೈಲ ದರ ಏರಿಕೆಯಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗಿನ ವೇಳೆಗೆ ಪ್ರತೀ ಒಂದು ಲೀಟರ್ ಪೆಟ್ರೋಲ್‌ಗೆ 36 ಪೈಸೆ ಏರಿದರೆ, ಪ್ರತೀ ಒಂದು ಲೀಟರ್‌ ಡೀಸೆಲ್‌ ದರದಲ್ಲಿ 38 ಪೈಸೆ ಏರಿಕೆ ಕಂಡಿದೆ. ಶಾಕಿಂಗ್ ವಿಚಾರ ಅಂದ್ರೆ ಇಲ್ಲಿಯ ತನಕ ನಮ್ಮ ಕರ್ನಾಟಕ ರಾಜ್ಯದಲ್ಲಿ ಪೆಟ್ರೋಲ್‌ ಮಾತ್ರ ನೂರರ ಗಡಿ ದಾಟಿದ್ದರೆ, ಕಳೆದ ನಾಲ್ಕೈದು ದಿನಗಳಿಂದ ಡೀಸೆಲ್‌ ದರ ಕೂಡ ₹100ರ ಗಡಿ ದಾಟಿದೆ. ಇಂದು ಕೂಡ ಏರಿಕೆಯಾಗುವ ಮೂಲಕ ಕಳೆದ ಅನೇಕ ಸಮಯದಿಂದ ಪ್ರತಿ ನಿತ್ಯ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಕಂಡಂತೆ ಆಗಿದೆ. ಇನ್ನು ಜನರ ಅತ್ಯವಶ್ಯಕ ವಸ್ತುವಾಗಿರುವ ಇಂಧನ ದರ ಏರಿಕೆಯಿಂದ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇನ್ನೊಂದೆಡೆ ರಾಜ್ಯ ಹಾಗೂ ಕೇಂದ್ರಗಳು ಪೆಟ್ರೋಲ್‌, ಡೀಸೆಲ್‌ ಮೇಲೆ ವಿಧಿಸಿರುವ ಸುಂಕವನ್ನು ಕಡಿತಗೊಳಿಸುವಂತೆ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಸುಂಕ ಕಡಿತಗೊಳಿಸುವುದಿಲ್ಲ ಎಂದು ಈಗಾಗಲೇ ಕೇಂದ್ರ ಸ್ಪಷ್ಟನೆ ನೀಡಿದೆ. ಶ್ರೀಮಂತರೇನೋ ಸರಿ, ಆದರೆ ಬಡವರು ಮಾತ್ರ ಇದೇನಾ ನಿಮ್ಮ ಅಚ್ಛೇದಿನ್ ಅಂತಾ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹಿಡಿ ಶಾಪ ಹಾಕ್ತಿದ್ದಾರೆ. ಇನ್ನು ಈಗಾಗಲೇ ಶತಕದ ಗಡಿ ದಾಟಿದ್ದು, ಡೀಸೆಲ್ ಬೆಲೆ ಕೂಡ ನೂರಕ್ಕೆ ತಲುಪಿರೋದು ಸಾಮಾನ್ಯ ಜನರಿಗಂತೂ ಗಾಯದ ಮೇಲೆ ಉಪ್ಪು ನೀರು ಸುರಿದಂತೆ ಆಗಿದೆ. ನಿತ್ಯ ನಿರಂತರ ಬೆಲೆ ಏರಿಕೆಯಾಗುತ್ತಿರುವುದರ ಪರಿಣಾಮ ವಾಹನ ಸವಾರರಂತೂ ಅತ್ತ ಉಗಿಯಲೂ ಆಗದೆ, ಇತ್ತ ನುಂಗಲೂ ಆಗದಂತಹ ನೋವಿನ ಪರಿಸ್ಥಿತಿಯಲ್ಲಿದ್ದಾರೆ. ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಪ್ರಮುಖ ಮಹಾ ನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ.ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಪೆಟ್ರೋಲ್: ₹106.19, ಡೀಸೆಲ್: ₹94.92 ಪಶ್ಚಿಮ ಬಂಗಾಳದ ಕೋಲ್ಕೊತ್ತಾ ಪೆಟ್ರೋಲ್ : ₹106.77, ಡೀಸೆಲ್ : ₹98.03 ಮಹಾರಾಷ್ಟ್ರ ರಾಜಧಾನಿ ಮುಂಬಯಿ ಪೆಟ್ರೋಲ್ : ₹112.11, ಡೀಸೆಲ್ : ₹102.89 ತಮಿಳುನಾಡು ರಾಜಧಾನಿ ಚೆನ್ನೈ ಪೆಟ್ರೋಲ್ : ₹103.31, ಡೀಸೆಲ್ : ₹99.26 ಸಿಲಿಕಾನ್ ಸಿಟಿ ಬೆಂಗಳೂರು ಪೆಟ್ರೋಲ್: ₹109.89, ಡೀಸೆಲ್: ₹100.75 ಕಡಲನಗರಿ ಮಂಗಳೂರು ಪೆಟ್ರೋಲ್: ₹109.50, ಡೀಸೆಲ್: ₹100.35 ಅರಮನೆ ನಗರಿ ಮೈಸೂರು ಪೆಟ್ರೋಲ್: ₹109.39, ಡೀಸೆಲ್: ₹100.28