ಬಮೂಲ್‌ಗೆ ಚಳಿಗಾಲದ ಹೊಡೆತ; ನಿತ್ಯ 1.5ಲಕ್ಷ ಲೀ. ಹಾಲಿನ ಉತ್ಪಾದನೆ ಕುಸಿತ!

​ ಕಳೆದ ವರ್ಷದ ಕೊರೊನಾ 1 ಮತ್ತು 2ನೇ ಅಲೆಯಲ್ಲಿ ಅನೇಕ ಹಳ್ಳಿಗಳಲ್ಲಿ ಕೊರೊನಾಕ್ಕೆ ಹೆದರಿ ರೈತರು ಉತ್ಪಾದಿಸಿದ ಹಾಲನ್ನು ಚರಂಡಿಗಳಲ್ಲಿ ಹರಿಸಿದ ಅನೇಕ ಉದಾಹರಣೆಗಳು ಬಮೂಲ್‌ ವ್ಯಾಪ್ತಿಯಲ್ಲಿ ಕಂಡುಬಂದಿದ್ದವು. ಈ ಬಾರಿ ಓಮಿಕ್ರಾನ್‌ ಆತಂಕವಿದ್ದರೂ, ಹೈನೋದ್ಯಮಕ್ಕೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಿದೆ.

ಬಮೂಲ್‌ಗೆ ಚಳಿಗಾಲದ ಹೊಡೆತ; ನಿತ್ಯ 1.5ಲಕ್ಷ ಲೀ. ಹಾಲಿನ ಉತ್ಪಾದನೆ ಕುಸಿತ!
Linkup
ನಾಗರಾಜು ಅಶ್ವತ್ಥ್, ಗ್ರಾಮಾಂತರಬೆಂಗಳೂರು: ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಬಮೂಲ್‌) ವ್ಯಾಪ್ತಿಯ ಹಾಲಿನ ಪೂರೈಕೆಗೆ ಚಳಿಗಾಲದ ಹೊಡೆತ ಸೃಷ್ಟಿಯಾಗಿದೆ. ಕಳೆದ ವರ್ಷ ಕಾಲು ಬಾಯಿ ರೋಗದ ಲಸಿಕೆಯಿಲ್ಲದ ಕುಂಠಿತಗೊಂಡಿದ್ದ ಹಾಲಿನ ಪೂರೈಕೆ ಪುನಃ ಇಳಿಕೆಯಾಗಿದ್ದು, ವ್ಯಾಪ್ತಿಯಲ್ಲಿ ನಿತ್ಯ 1.5ಲಕ್ಷ ಲೀ. ಹಾಲಿನ ಉತ್ಪಾದನೆ ಕುಸಿತ ಕಾಣುತ್ತಿದೆ. ಮಾರ್ಚ್ ನಿಂದ ಹಾಲಿನ ಪ್ರಮಾಣ ದ್ವಿಗುಣಗೊಳ್ಳುವ ನಿರೀಕ್ಷೆಯಿದ್ದು, ನಿತ್ಯ 20 ಲಕ್ಷ ಲೀ. ಉತ್ಪಾದನೆ ನಿರೀಕ್ಷೆಯನ್ನು ಹೊಂದಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆಗಳ ವ್ಯಾಪ್ತಿಯ ಒಟ್ಟು 12 ತಾಲೂಕುಗಳ 1.4ಲಕ್ಷ ಸಕ್ರಿಯ ಹಾಲು ಉತ್ಪಾದಕರನ್ನು ಹೊಂದಿದೆ. ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಆನೇಕಲ್‌, ದೊಡ್ಡಬಳ್ಳಾಪುರ, ನೆಲಮಂಗಲ, ದೇವನ ಹಳ್ಳಿ, ಹೊಸಕೋಟೆ, ರಾಮನಗರ, ಮಾಗಡಿ, ಚನ್ನಪಟ್ಟಣ, ಕನಕಪುರ ಕ್ಷೇತ್ರಗಳ ವ್ಯಾಪ್ತಿ ಒಳಗೊಂಡಿರುವ ಬಮೂಲ್‌ ಆರ್ಥಿಕವಾಗಿ ಲಾಭದತ್ತ ದಾಪುಗಾಲಿಡುತ್ತಿದ್ದು, ಕೊರೊನಾ ಹೊಡೆತ ಪರಿಣಾಮಕಾರಿಯಾಗಿ ಬಿದ್ದಿತ್ತು. ಪ್ರಸ್ತುತ, ಚೇತರಿಕೆಯತ್ತ ಮುಖ ಮಾಡುತ್ತಿದ್ದ ಹಾಲು ಉತ್ಪಾದನೆಗೆ ಚಳಿಗಾಲ ದೊಡ್ಡ ಹೊಡೆತ ನೀಡುತ್ತಿದ್ದು, ಲಕ್ಷಾಂತರ ಲೀ. ಹಾಲು ಉತ್ಪಾದನೆ ಕುಸಿತದಿಂದ ಪುನಃ ನಿರೀಕ್ಷಿತ ಪ್ರಮಾಣ ತಲುಪುವಲ್ಲಿ ಹಿನ್ನಡೆಯುಂಟಾಗುತ್ತಿದೆ. ಮಾರ್ಚ್ ಬಳಿಕ ಉತ್ತಮ ಹಾಲು ಉತ್ಪಾದನೆಯ ನಿರೀಕ್ಷೆಯಿದ್ದು, ಓಮಿಕ್ರಾನ್‌ ಹಾವಳಿ ಇಲ್ಲದಂತಾಗಲಿ ಎನ್ನುವುದು ರೈತರ ಆಶಯ. ಚರಂಡಿಯಲ್ಲಿ ಹರಿದಿದ್ದ ಹಾಲು ಕಳೆದ ವರ್ಷದ ಕೊರೊನಾ 1 ಮತ್ತು 2ನೇ ಅಲೆಯಲ್ಲಿ ಅನೇಕ ಹಳ್ಳಿಗಳಲ್ಲಿ ಕೊರೊನಾಕ್ಕೆ ಹೆದರಿ ರೈತರು ಉತ್ಪಾದಿಸಿದ ಹಾಲನ್ನು ಚರಂಡಿಗಳಲ್ಲಿ ಹರಿಸಿದ ಅನೇಕ ಉದಾಹರಣೆಗಳು ಬಮೂಲ್‌ ವ್ಯಾಪ್ತಿಯಲ್ಲಿ ಕಂಡುಬಂದಿದ್ದವು. ಈ ಬಾರಿ ಓಮಿಕ್ರಾನ್‌ ಆತಂಕವಿದ್ದರೂ, ಹೈನೋದ್ಯಮಕ್ಕೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಿದೆ. ಜತೆಗೆ, ರೈತರು 2 ಲಸಿಕೆಗಳನ್ನು, ತಮ್ಮ ರಾಸುಗಳಿಗೆ ಕಾಲು ಬಾಯಿ ಲಸಿಕೆಗಳನ್ನು ಒದಗಿಸಿ ಆರೋಗ್ಯಕ್ಕೆ ಆದ್ಯತೆ ನೀಡಬೇಕೆಂದು ಬಮೂಲ್‌ ಮನವಿ ಮಾಡಿಕೊಂಡಿದೆ.