ಬೆಡ್‌ ನೀಡದ ಹಿನ್ನೆಲೆ ಕೊರೊನಾ ಸೋಂಕಿತ ಸಾವು ಪ್ರಕರಣ: ಮಹಾವೀರ್ ಜೈನ್ ಆಸ್ಪತ್ರೆಗೆ ಶೋಕಾಸ್ ನೋಟಿಸ್ ಜಾರಿ

ಕೊರೊನಾ ಸೋಂಕಿತನಿಗೆ ಬೆಡ್ ನೀಡದೆ ಹಿನ್ನೆಲೆ ವ್ಯಕ್ತಿ ಸಾವನಪ್ಪಿರುವ ಪ್ರಕರಣ ತೀವ್ರತೆ ಪಡೆದುಕೊಂಡಿದೆ. ಇದೀಗ ಈ ಸಂಬಂಧ ಬೆಂಗಳೂರಿನ ವಸಂತನಗರದಲ್ಲಿರುವ ಮಹಾವೀರ್ ಜೈನ್ ಆಸ್ಪತ್ರೆಗೆ ಬಿಬಿಎಂಪಿ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದ್ದಾರೆ.

ಬೆಡ್‌ ನೀಡದ ಹಿನ್ನೆಲೆ ಕೊರೊನಾ ಸೋಂಕಿತ ಸಾವು ಪ್ರಕರಣ: ಮಹಾವೀರ್ ಜೈನ್ ಆಸ್ಪತ್ರೆಗೆ ಶೋಕಾಸ್ ನೋಟಿಸ್ ಜಾರಿ
Linkup
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಒಂದು ದಿನದ ಅಂತರದಲ್ಲಿ 2 ಸಾವಿರಕ್ಕೂ ಹೆಚ್ಚು ಕೇಸ್ ಪತ್ತೆಯಾಗುತ್ತಿವೆ. ಇಂತಹ ಸಮಯದಲ್ಲಿ ಕೊರೊನಾ ಸೋಂಕಿತನಿಗೆ ಬೆಡ್ ನೀಡದೆ ಬೆಂಗಳೂರಿನ ವಸಂತನಗರದಲ್ಲಿರುವ ಮಹಾವೀರ್ ಜೈನ್ ಆಸ್ಪತ್ರೆ ಉದ್ದಟತನ ಮೆರೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಆಸ್ಪತ್ರೆಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಕೊರೊನಾ ಸೋಂಕಿತನಿಗೆ ಬೆಡ್ ನೀಡದೆ ಮಹಾವೀರ್ ಜೈನ್ ಆಸ್ಪತ್ರೆ ದರ್ಪ ಮೆರೆದಿದೆ. ಹಾಗೂ ಕೊರೊನಾ ಸೋಂಕಿತ ಆಸ್ಪತ್ರೆಗೆ ಹೋಗಿದ್ದ ವೇಳೆ ಮಹಾವೀರ್ ಜೈನ್ ಆಸ್ಪತ್ರೆ ಈತನಿಗೆ ಬೆಡ್ ನೀಡಲು ನಿರಾಕರಿಸಿದೆ. ಆಸ್ಪತ್ರೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಸೋಂಕಿತ ಮೃತಪಟ್ಟಿದ್ದಾನೆ. ಹೀಗಾಗಿ 24 ಗಂಟೆಗಳ ಒಳಗೆ ವಿವರಣೆ ನೀಡುವಂತೆ ಬಿಬಿಎಂಪಿ CHO ಆಸ್ಪತ್ರೆಗೆ ನೋಟಿಸ್ ನೀಡಿದ್ದಾರೆ. ಈ ಸಂಬಂಧ ಸಚಿವ ಡಾ ಸುಧಾಕರ್‌ ಕೂಡ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ. ಅಲ್ಲದೇ ಬಿಬಿಎಂಪಿ NDMAಯಡಿ ಆಸ್ಪತ್ರೆ ವಿರುದ್ಧ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ. ಘಟನೆ ವಿವರ! ಬನಶಂಕರಿ ಮೂಲದ ತಬರೇಜ್ ಎಂಬ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಬೆಡ್ ಬ್ಲಾಕ್ ಮಾಡಿದ್ದರು. ಆದರೆ ಬೆಡ್ ಬ್ಲಾಕ್ ಆದರು ಕೂಡಾ ರೋಗಿಯನ್ನ ದಾಖಲಿಸಿಕೊಳ್ಳದೆ. ಸೂಕ್ತ ಚಿಕಿತ್ಸೆ ನೀಡದ ಕಾರಣ ಸೋಂಕಿತ ಮೃತಪಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ನಾಳೆಯೊಳಗೆ ಸೂಕ್ತ ಕಾರಣ ನೀಡದೆ ಹೋದರೆ ಆಸ್ಪತ್ರೆ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.