ಶಾರುಖ್ ಮಗನೊಂದಿಗೆ ಹಡಗಿನಲ್ಲಿ ಸಿಕ್ಕಿಬಿದ್ದ ಮಾಡೆಲ್: ಯಾರು ಈ ಮುನ್ಮೂನ್ ಧಮೇಚಾ?

ಅಕ್ಟೋಬರ್ 3ರಂದು ಎನ್‌ಸಿಬಿ ತಂಡವು ಮುಂಬಯಿಯ ಕ್ರೂಸ್ ಹಡಗಿನ ಮೇಲೆ ನಡೆಸಿದ ದಾಳಿ ವೇಳೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜತೆಗೆ ಅವರ ಸ್ನೇಹಿತರನ್ನು ಬಂಧಿಸಿತ್ತು. ಅವರಲ್ಲಿ ರೂಪದರ್ಶಿ ಮುನ್ಮೂನ್ ಧಮೇಚಾ ಕೂಡ ಒಬ್ಬರು. ಯಾರು ಈ ಮುನ್ಮೂನ್? ಇಲ್ಲಿದೆ ವಿವರ

ಶಾರುಖ್ ಮಗನೊಂದಿಗೆ ಹಡಗಿನಲ್ಲಿ ಸಿಕ್ಕಿಬಿದ್ದ ಮಾಡೆಲ್: ಯಾರು ಈ ಮುನ್ಮೂನ್ ಧಮೇಚಾ?
Linkup
ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಅಕ್ಟೋಬರ್ 3ರಂದು ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿ ನಟ ಶಾರುಖ್ ಖಾನ್ ಮಗ , ಅವರ ಸ್ನೇಹಿತ ಅರ್ಬಾಜ್ ಸೇಠ್ ಮರ್ಚೆಂಟ್ ಹಾಗೂ ಎಂಬುವವರನ್ನು ಬಂಧಿಸಿತ್ತು. ಕಾರ್ಡೆಲಿಯಾ ಕ್ರೂಸಸ್ ಎಂಪ್ರೆಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಕೊಕೇನ್, ಹಶೀಶ್, ಎಂಡಿಎಂಎ ಮುಂತಾದ ಅಕ್ರಮ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಅವರೊಂದಿಗೆ ಒಟ್ಟು 20 ಜನರನ್ನು ಬಂಧಿಸಲಾಗಿತ್ತು. ಆರ್ಯನ್ ಹಾಗೂ ಅರ್ಬಾಜ್ ಮರ್ಚೆಂಟ್ ಜತೆಗೆ ಮುನ್ಮೂನ್ ಧಮೇಚಾ ಅವರ ಜಾಮೀನು ಅರ್ಜಿ ಕೂಡ ಎರಡು ಬಾರಿ ತಿರಸ್ಕೃತಗೊಂಡಿದೆ. ಈ ಪ್ರಕರಣದ ಬಳಿಕ ಮುನ್ಮೂನ್ ಹೆಸರು ಎಲ್ಲೆಡೆ ಕೇಳುಬರುತ್ತಿದೆ. ಯಾರೀಕೆ ಮುನ್ಮೂನ್? ಆಕೆಯ ಹಿನ್ನೆಲೆ ಏನು? ಮುನ್ಮೂನ್ ಧಮೇಚಾ ಒಬ್ಬ ಫ್ಯಾಷನ್ . 39 ವರ್ಷ ವಯಸ್ಸಿನ ಅವಿವಾಹಿತೆ ಮುನ್ಮೂನ್, ಮಧ್ಯಪ್ರದೇಶದ ಉದ್ಯಮ ಕುಟುಂಬದಿಂದ ಬಂದವರು. ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ನಿವಾಸಿಯಾಗಿದ್ದರೂ ಅವರ ಕುಟುಂಬದ ಯಾರೊಬ್ಬರೂ ಈಗ ಮಧ್ಯಪ್ರದೇಶದಲ್ಲಿನ ಮನೆಯಲ್ಲಿ ನೆಲೆಸಿಲ್ಲ. ಕೆಲವು ವರ್ಷಗಳ ಹಿಂದೆ ಅವರು ತಂದೆ ಅಮಿತ್ ಕುಮಾರ್ ಧಮೇಚಾ ಕಳೆದುಕೊಂಡಿದ್ದರು. ಅವರ ತಾಯಿ ಕೂಡ ಕಳೆದ ವರ್ಷ ನಿಧನರಾಗಿದ್ದರು. ಮುನ್ಮೂನ್‌ಗೆ ಪ್ರಿನ್ಸ್ ಧಮೇಚಾ ಎಂಬ ಸಹೋದರ ಇದ್ದಾರೆ. ಅವರು ದಿಲ್ಲಿಯಲ್ಲಿ ಉದ್ಯೋಗಿ. ಪ್ರಾಥಮಿಕ ಶಾಲಾ ಶಿಕ್ಷಣಗಳನ್ನು ಮುನ್ಮೂನ್ ಸಾಗರ್ ಜಿಲ್ಲೆಯಲ್ಲಿಯೇ ಪಡೆದಿದ್ದರು. ಆದರೆ ಸ್ಥಳೀಯರಿಗೆ ಅವರು ಅಷ್ಟೇನೂ ಪರಿಚಿತರಲ್ಲ. ಕೆಲ ಸಮಯ ರಾಜಧಾನಿ ಭೋಪಾಲ್‌ನಲ್ಲಿ ಕೆಲ ಕಾಲ ವಾಸಿಸಿದ್ದ ಅವರು, ಆರು ವರ್ಷಗಳ ಹಿಂದೆ ಸಹೋದರನೊಂದಿಗೆ ದಿಲ್ಲಿಗೆ ಸ್ಥಳಾಂತರ ಹೊಂದಿದ್ದರು. ಮಾಡೆಲ್ ಆಗಿದ್ದರೂ ಮುನ್ಮೂನ್ ಬಹಳ ಜನಪ್ರಿಯರೇನಲ್ಲ. ಮುನ್ಮೂನ್ ಅವರಿಗೆ ಮಾಡೆಲಿಂಗ್‌ನಲ್ಲಿ ಹೇಳಿಕೊಳ್ಳುವಂತಹ ಅವಕಾಶಗಳೇನೂ ಇರಲಿಲ್ಲ. ತಮ್ಮ ಕೆಲವು ಮಾಡೆಲಿಂಗ್ ಪ್ರಾಜೆಕ್ಟ್‌ಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಿದ್ದರು. ಹೆಚ್ಚಿನ 'ಜನಪ್ರಿಯತೆ'! ಆದರೆ ಬಂಧನದ ಬಳಿಕ ಬಹಳ 'ಖ್ಯಾತಿ' ಗಳಿಸಿರುವುದಕ್ಕೆ ಜನಪ್ರಿಯ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿನ ಅವರ ಹಿಂಬಾಲಕರ ಸಂಖ್ಯೆ ಸಾಕ್ಷಿಯಾಗಿದೆ. ಅವರ ಬಂಧನದ ಸಮಯದಲ್ಲಿ ಅವರಿಗೆ ಸುಮಾರು 11 ಸಾವಿರ ಹಿಂಬಾಲಕರಿದ್ದರು. ಕೆಲವೇ ದಿನಗಳಲ್ಲಿ ಆ ಸಂಖ್ಯೆ 33.4 ಸಾವಿರಕ್ಕೆ ಏರಿಕೆಯಾಗಿದೆ. ತಮ್ಮ ಫ್ಯಾಷನ್ ಕಾರ್ಯಕ್ರಮಗಳು, ನಟ-ನಟಿಯರ ಜತೆಗಿರುವ ಹಾಗೂ ಪ್ರವಾಸದ ಚಿತ್ರಗಳ ಜತೆಗೆ ಕೆಲವು ರೀಲ್ಸ್‌ಗಳನ್ನು ಕೂಡ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಜಾಲತಾಣದಲ್ಲಿ ಖ್ಯಾತನಾಮ ತಾರೆಗಳಾರೂ ಅವರನ್ನು ಹಿಂಬಾಲಿಸುತ್ತಿಲ್ಲ. ಅಕ್ಷಯ್ ಕುಮಾರ್, ವಿಕ್ಕಿ ಕೌಶಲ್, ಕರೀನಾ ಕಪೂರ್ ಮುಂತಾದವರನ್ನು ಫಾಲೋ ಮಾಡುತ್ತಿದ್ದಾರೆ. ಮುನ್ಮೂನ್ ಅವರ ಖಾಸಗಿ ಜೀವನದ ವಿಚಾರ ಹೆಚ್ಚು ಬೆಳಕಿಗೆ ಬಂದಿಲ್ಲ. 39 ವರ್ಷವಾದರೂ ಅವರು ಅವಿವಾಹಿತರಾಗಿಯೇ ಇದ್ದಾರೆ ಎನ್ನಲಾಗಿದೆ. ಅವರು ಲಿವ್ ಇನ್ ರಿಲೇಷನ್‌ಶಿಪ್ ಅಥವಾ ಪ್ರಿಯಕರನನ್ನು ಹೊಂದಿದ್ದಾರೆಯೇ ಎನ್ನುವುದು ದೃಢಪಟ್ಟಿಲ್ಲ. ಅವರಿಗೆ ಈ ಮಾದಕವಸ್ತು ಜಾಲ ಮತ್ತು ಪಾರ್ಟಿಗಳ ನಂಟು ಇದೆಯೇ? ಅವರೂ ಡ್ರಗ್ಸ್‌ ಖರೀದಿ ಅಥವಾ ಸಾಗಣೆಯಲ್ಲಿ ತೊಡಗಿದ್ದಾರೆಯೇ? ಈ ಘಟನೆಯಲ್ಲಿ ಅವರ ಪಾತ್ರವೇನು ಎಂಬ ಬಗ್ಗೆ ತನಿಖಾಧಿಕಾರಿಗಳು ಇನ್ನೂ ಮಾಹಿತಿ ನೀಡಬೇಕಿದೆ.