ಬಜೆಟ್‌ ಗುರಿ ಮೀರಿ ಬಂಡವಾಳ ವೆಚ್ಚ ಹೆಚ್ಚಿಸುವಂತೆ ನಿರ್ಮಲಾ ಸೀತಾರಾಮನ್‌ ಸೂಚನೆ

ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ಈ ವರ್ಷ ಬಜೆಟ್‌ ಗುರಿ ಮೀರಿ ಬಂಡವಾಳ ವೆಚ್ಚ ಮಾಡುವಂತೆ ನಾನಾ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೂಚಿಸಿದ್ದಾರೆ.

ಬಜೆಟ್‌ ಗುರಿ ಮೀರಿ ಬಂಡವಾಳ ವೆಚ್ಚ ಹೆಚ್ಚಿಸುವಂತೆ ನಿರ್ಮಲಾ ಸೀತಾರಾಮನ್‌ ಸೂಚನೆ
Linkup
ಹೊಸದಿಲ್ಲಿ: ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ಪ್ರಸಕ್ತ ಸಾಲಿನಲ್ಲಿ ಬಜೆಟ್‌ ಗುರಿ ಮೀರಿ ಮಾಡುವಂತೆ ಹಣಕಾಸು ಸಚಿವೆ ಅವರು ನಾನಾ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೂಚಿಸಿದ್ದಾರೆ. ಬಜೆಟ್‌ ಘೋಷಣೆಗಳ ಅನುಷ್ಠಾನದ ಬಗ್ಗೆ ಸಚಿವಾಲಯಗಳ ಹಿರಿಯ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿರುವ ಹಣಕಾಸು ಸಚಿವರು, ಮೂಲ ಸೌಕರ್ಯ ವಲಯಕ್ಕೆ ಹೂಡಿಕೆ ವೆಚ್ಚ ಹೆಚ್ಚಳ ಮಾಡುವಂತೆ ಸೂಚಿಸಿದ್ದಾರೆ. ಹಾಗೂ ಕೇಂದ್ರೀಯ ಸಾರ್ವಜನಿಕ ಉದ್ದಿಮೆಗಳು ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ (ಎಂಎಸ್‌ಎಂಇ) ಕೊಡಬೇಕಿರುವ ಬಾಕಿಯನ್ನು ಜುಲೈ 31ರೊಳಗೆ ನೀಡಬೇಕು ಎಂದು ಸೂಚಿಸಿದ್ದಾರೆ. ಕೋವಿಡ್‌ ಬಿಕ್ಕಟ್ಟಿನ ನಂತರ ಆರ್ಥಿಕತೆಯ ಚೇತರಿಕೆಗೆ ಉತ್ಪಾದಕ ಚಟುವಟಿಕೆಗಳಿಗೆ ಬಂಡವಾಳ ವೆಚ್ಚವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಮುಖ್ಯವಾಗಿ ಮೂಲ ಸೌಕರ್ಯ ವಲಯಕ್ಕೆ ಹೆಚ್ಚಿನ ಖರ್ಚು ಮಾಡಬೇಕಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸೂಕ್ತ ಯೋಜನೆಗಳನ್ನು ಜಾರಿಗೊಳಿಸಲೂ ಸಚಿವರು ಸೂಚಿಸಿದ್ದಾರೆ. 2021-22ರ ಕೇಂದ್ರ ಬಜೆಟ್‌ ಪ್ರಕಾರ ಬಂಡವಾಳ ವೆಚ್ಚವಾಗಿ 5.54 ಲಕ್ಷ ಕೋಟಿ ರೂ.ಗಳ ಗುರಿಯನ್ನು ನಿಗದಿಪಡಿಸಲಾಗಿತ್ತು. 2020-21ಕ್ಕೆ ಹೋಲಿಸಿದರೆ ಇದು ಶೇ.34.5ರಷ್ಟು ಏರಿಕೆಯಾಗಿದೆ. ಮೂಲ ಸೌಕರ್ಯ ವೆಚ್ಚದಲ್ಲಿ ಕೇವಲ ಕೇಂದ್ರ ಸರಕಾರದ ಬಜೆಟ್‌ ವೆಚ್ಚ ಮಾತ್ರ ಇರುವುದಿಲ್ಲ. ರಾಜ್ಯ ಸರಕಾರಗಳು ಹಾಗೂ ಖಾಸಗಿ ವಲಯಗಳು ಮೂಲಸೌಕರ್ಯಕ್ಕೆ ಮಾಡುವ ವೆಚ್ಚ, ಬಜೆಟ್‌ ಹೊರತುಪಡಿಸಿದ ಮೂಲಗಳಿಂದಲೂ ಹೊಂದಿಸುವ ವೆಚ್ಚವನ್ನೂ ಒಳಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ. ಹಣಕಾಸು ಇಲಾಖೆ, ಸಾರ್ವಜನಿಕ ಉದ್ದಿಮೆ, ಉಕ್ಕು, ಪೆಟ್ರೋಲಿಯಂ, ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು.