ಬೆಂಗಳೂರಿನಲ್ಲಿ 10 ದಿನಗಳಲ್ಲಿ 505 ಮಕ್ಕಳಿಗೆ ಕೊರೊನಾ ವೈರಸ್ ಸೋಂಕು..!

ಮಕ್ಕಳಿಗೆ ಲಸಿಕೆ ಹಾಕಲು ಆರಂಭಿಸಿಲ್ಲ. ಹೀಗಾಗಿ, ಹೊರಗೆ ತಿರುಗಾಡುವ ಪೋಷಕರು ಹೆಚ್ಚು ಜಾಗೃತರಾಗಿರಬೇಕು. ಮಾಸ್ಕ್‌ ಧರಿಸುವ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು.

ಬೆಂಗಳೂರಿನಲ್ಲಿ 10 ದಿನಗಳಲ್ಲಿ 505 ಮಕ್ಕಳಿಗೆ ಕೊರೊನಾ ವೈರಸ್ ಸೋಂಕು..!
Linkup
: ನಗರದಲ್ಲಿ ಜುಲೈ 22 ರಿಂದ ಆಗಸ್ಟ್ 10 ರವರೆಗೆ 19 ವರ್ಷದೊಳಗಿನ 995 ಮಕ್ಕಳಿಗೆ ಕೋವಿಡ್‌ ದೃಢಪಟ್ಟಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ. ಈ ತಿಂಗಳ ಮೊದಲ 10 ದಿನಗಳಲ್ಲೇ 505 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದ್ದು, ಬಹುತೇಕ ಎಲ್ಲರೂ ಮನೆಯಲ್ಲಿಯೇ ಪ್ರತ್ಯೇಕ ಆರೈಕೆಯಲ್ಲಿದ್ದಾರೆ. ಬಿಬಿಎಂಪಿ ನೀಡಿರುವ ಮಾಹಿತಿ ಪ್ರಕಾರ 9 ವರ್ಷದೊಳಗಿನ 88 ಮತ್ತು 10 ರಿಂದ 19 ವರ್ಷದೊಳಗಿನ 305 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಜುಲೈ ತಿಂಗಳ ಅಂತ್ಯದ 10 ದಿನಗಳಲ್ಲಿ 496 ಮಕ್ಕಳು ಸೋಂಕು ಬಾಧಿತರಾಗಿರುವುದು ಕಂಡು ಬಂದಿದೆ. ಕೋವಿಡ್‌ ಎರಡನೇ ಅಲೆಯಲ್ಲಿ ಸೋಂಕಿಗೆ ಒಳಗಾಗಿದ್ದ ಮಕ್ಕಳಿಗೆ ಹೋಲಿಸಿದರೆ, ಪ್ರಸ್ತುತ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ತುಂಬಾ ಕಡಿಮೆ ಇದೆ. 'ಎರಡನೇ ಅಲೆಯ ತೀವ್ರತೆ ಕಡಿಮೆಯಾಗಿದ್ದು, ಸೋಂಕಿತರ ಪೈಕಿ ಶೇ 99ರಷ್ಟು ಮಂದಿ ಹೋಮ್‌ ಐಸೋಲೇಷನ್‌ನಲ್ಲಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ 'ಎ ಸಿಂಪ್ಟಮ್ಯಾಟಿಕ್‌' ಸೋಂಕಿತ ಮಕ್ಕಳ ಸಂಖ್ಯೆಯೇ ಜಾಸ್ತಿ ಇದೆ. ಇಲ್ಲಿಯವರೆಗೆ ಯಾವುದೇ ಮಕ್ಕಳನ್ನು ಆಸ್ಪತ್ರೆ ಅಥವಾ ಆರೈಕೆ ಕೇಂದ್ರಗಳಿಗೆ ದಾಖಲಿಸಿಲ್ಲ. ಎಲ್ಲರೂ ಮನೆಯಲ್ಲಿಯೇ ಆರೈಕೆಯಲ್ಲಿದ್ದಾರೆ. ಸೋಂಕಿತ ಮಕ್ಕಳ ಪೈಕಿ 12 ರಿಂದ 19 ವರ್ಷದೊಳಗಿನ ಮಕ್ಕಳೇ ಅಧಿಕ ಸಂಖ್ಯೆಯಲ್ಲಿದ್ದಾರೆ' ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದರು. 'ಕಳೆದ ವರ್ಷ ಎಷ್ಟು ಮಕ್ಕಳಲ್ಲಿ ಸೋಂಕು ಪತ್ತೆಯಾಗಿತ್ತೋ, ಅಷ್ಟೇ ಪ್ರಮಾಣದ ಮಕ್ಕಳಲ್ಲಿ ಈ ಸಲವೂ ಸೋಂಕು ಕಾಣಿಸಿಕೊಂಡಿದೆ. ಈ ಸಂಖ್ಯೆಯಲ್ಲಿ ಹೆಚ್ಚಳವಾದರೆ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಹೀಗಾಗಿ, ಆತಂಕ ಪಡುವ ಅಗತ್ಯವಿಲ್ಲ' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು. 'ಮಕ್ಕಳಿಗೆ ಲಸಿಕೆ ಹಾಕಲು ಆರಂಭಿಸಿಲ್ಲ. ಹೀಗಾಗಿ, ಹೊರಗೆ ತಿರುಗಾಡುವ ಪೋಷಕರು ಹೆಚ್ಚು ಜಾಗೃತರಾಗಿರಬೇಕು. ಮಾಸ್ಕ್‌ ಧರಿಸುವ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು. ಇದರಿಂದ ಮಕ್ಕಳು ಸಹ ಸುರಕ್ಷಿತವಾಗಿರುತ್ತಾರೆ' ಎಂದರು. ಒಂದೇ ಮೊಬೈಲ್‌ ಸಂಖ್ಯೆಗೆ 12 ಅಪರಿಚಿತರ ಕೋವಿಡ್‌ ಟೆಸ್ಟ್‌ ನೋಂದಣಿ: ಒಂದೇ ಮೊಬೈಲ್‌ ಸಂಖ್ಯೆಯನ್ನು 12 ಮಂದಿ ಅಪರಿಚಿತರ ಕೋವಿಡ್‌ ಟೆಸ್ಟ್‌ಗೆ ನೋಂದಣಿ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನಗರದ ವಕೀಲೆಯೊಬ್ಬರು ಆಗಸ್ಟ್ 5ರಂದು ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಂಡ ಬಳಿಕ ಈ ಸಮಸ್ಯೆ ಕಂಡುಬಂದಿದೆ. ಕೋವಿಡ್‌ ಪರೀಕ್ಷೆಗೆ ಮೂಗು, ಗಂಟಲು ದ್ರವದ ಮಾದರಿ ನೀಡಿದ ಸ್ವಲ್ಪ ಸಮಯದಲ್ಲೇ ನನ್ನ ಮೊಬೈಲ್‌ ಸಂಖ್ಯೆಗೆ ಹಲವು ಅಪರಿಚಿತರ ಆರ್‌ಟಿಪಿಸಿಆರ್‌ ಪರೀಕ್ಷಾ ಫಲಿತಾಂಶದ ವರದಿಗಳು ಎಸ್‌ಎಂಎಸ್‌ ಮೂಲಕ ಬಂದವು. ನನ್ನ ಫಲಿತಾಂಶವು ನೆಗೆಟಿವ್‌ ಬಂದರೂ ಆಗಸ್ಟ್ 7 ಮತ್ತು 9ರಂದು ಬಂದ ಎಸ್‌ಎಂಎಸ್‌ನಲ್ಲಿ ಇಬ್ಬರು ಅಪರಿಚಿತರಿಗೆ ಪಾಸಿಟಿವ್‌ ಬಂದಿರುವುದು ಗೊತ್ತಾಯಿತು. ಅದರಲ್ಲಿ ಒಬ್ಬರು 26 ವರ್ಷದ ಮಹಿಳೆ, ಮತ್ತೊಬ್ಬರು 44 ವರ್ಷದ ವ್ಯಕ್ತಿ ಎಂದು ವಕೀಲೆ ತಿಳಿಸಿದ್ದಾರೆ. ಎಸ್‌ಎಂಎಸ್‌ಗಳು ಬಂದ ಕೂಡಲೇ ಪಾಲಿಕೆಯಿಂದ ನನಗೆ ಹಲವು ದೂರವಾಣಿ ಕರೆಗಳು ಬರಲಾರಂಭಿಸಿದವು. ಅಪರಿಚಿತ ವ್ಯಕ್ತಿಗಳು ತನಗೆ ತಿಳಿದಿಲ್ಲವೆಂದು ಹೇಳಿದರೂ ಕರೆಗಳು ಬರುವುದು ನಿಲ್ಲಲಿಲ್ಲ. ಇದಾದ ಬಳಿಕವೂ ಮತ್ತಿಬ್ಬರು ವ್ಯಕ್ತಿಗಳ ವರದಿಯು ಪಾಸಿಟಿವ್‌ ಆಗಿರುವ ಎಸ್‌ಎಂಎಸ್‌ ಬಂದಿತು. ಡೇಟಾ ದೋಷದಿಂದ ಆ ರೀತಿ ಆಗಿರುವುದಾಗಿ ಪಾಲಿಕೆಯ ವಾರ್‌ ರೂಂ ಸಿಬ್ಬಂದಿ ತಿಳಿಸಿದರು. ಆದರೆ, ಪರೀಕ್ಷೆಗಾಗಿ ಸ್ವ್ಯಾಬ್ ಸಂಗ್ರಹಿಸುವಾಗ ಮೊಬೈಲ್‌ ಸಂಖ್ಯೆ ಪರಿಶೀಲಿಸಲು ಒಟಿಪಿ ಅಗತ್ಯವಿದೆ. ಹಾಗಿದ್ದರೂ ತಪ್ಪಾಗಿ ಮೊಬೈಲ್‌ ಸಂಖ್ಯೆ ನೋಂದಣಿಯಾಗಿದ್ದು ಹೇಗೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಹೇಳಿದರು.