ಬೆಂಗಳೂರಿನಲ್ಲಿ 'ಮಾದಕ' ಜಾಲ ಭೇದಿಸಿದ ಖಾಕಿ ಪಡೆ: 6 ಮಂದಿ ಡ್ರಗ್‌ ಪೆಡ್ಲರ್‌ಗಳ ಬಂಧನ

ಆರೋಪಿಗಳು ವಿಶಾಖಪಟ್ಟಣದ ಅರಕು ವ್ಯಾಲಿ ಪ್ರದೇಶದಿಂದ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿ ತಂದು, ಬೆಂಗಳೂರಿನ ಡ್ರಗ್‌​ ಪೆಡ್ಲರ್‌​ಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು.

ಬೆಂಗಳೂರಿನಲ್ಲಿ 'ಮಾದಕ' ಜಾಲ ಭೇದಿಸಿದ ಖಾಕಿ ಪಡೆ: 6 ಮಂದಿ ಡ್ರಗ್‌ ಪೆಡ್ಲರ್‌ಗಳ ಬಂಧನ
Linkup
: ಹೊರ ರಾಜ್ಯದಿಂದ ಗಾಂಜಾ ತಂದು ನಗರದ ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳಿಗೆ ಸರಬರಾಜು ಮಾಡುತ್ತಿದ್ದ ಆರು ಮಂದಿ ಡ್ರಗ್‌ ಪೆಡ್ಲರ್‌ಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ನಗರದ ಆಂಥೋನಿ, ಮಹೇಶ, ಅಂಬುಲಸಾಯಿ, ವಿಜಯ್‌, ಕವನ್‌ ಮತ್ತು ಪ್ರಸಾದ್‌ನನ್ನು ಬಂಧಿಸಿ, ಅವರಿಂದ ಸುಮಾರು 15 ಲಕ್ಷ ರೂ. ಬೆಲೆಬಾಳುವ 28 ಕೆ.ಜಿ ಗಾಂಜಾ, 8 ಮೊಬೈಲ್‌ ಫೋನ್‌ಗಳು, ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಿಸಿಬಿಯ ಎಸಿಪಿ ಕೆ.ಸಿ.ಗೌತಮ್‌ ತಿಳಿಸಿದ್ದಾರೆ. ಇನ್ಸ್‌ಪೆಕ್ಟರ್‌ ಜಿ. ಲಕ್ಷ್ಮಿಕಾಂತಯ್ಯ ನೇತೃತ್ವದ ತಂಡವು ಜುಲೈ 7ರಂದು ಎಚ್‌ಎಎಲ್‌ ಮತ್ತು ಕೆ.ಆರ್‌. ಪುರಂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಎರಡು ಜಾಲಗಳ ಮೇಲೆ ಪ್ರತ್ಯೇಕ ದಾಳಿ ನಡೆಸಿದಾಗ ಘಾನಾದ ಓರ್ವ ಪ್ರಜೆ, ಆಂಧ್ರ ಪ್ರದೇಶದ ಇಬ್ಬರು, ಬೆಂಗಳೂರಿನ ಮೂವರನ್ನು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ವಿಶಾಖಪಟ್ಟಣದ ಅರಕು ವ್ಯಾಲಿ ಪ್ರದೇಶದಿಂದ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿ ತಂದು, ಬೆಂಗಳೂರಿನ ಡ್ರಗ್‌ ಪೆಡ್ಲರ್‌ಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂಬುದು ಆರೋಪಿಗಳ ವಿಚಾರಣೆಯಿಂದ ತಿಳಿದು ಬಂದಿದೆ. ಇನ್ನೂ ಮೂವರು ಆಸಾಮಿಗಳು ಇವರೊಂದಿಗೆ ಕಾರ್ಯ ಪ್ರವೃತ್ತರಾಗಿರುವುದು ತಿಳಿದು ಬಂದಿದ್ದು, ಸದ್ಯ ಅವರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಸದ್ಯ ಆರೋಪಿಗಳ ವಿರುದ್ಧ ಎಚ್‌ಎಎಲ್‌ ಪೊಲೀಸ್‌ ಠಾಣೆ ಹಾಗೂ ಕೆ. ಆರ್‌. ಪುರಂ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.