ಮುಂದಿನ ಭಾನುವಾರ ಕೆಂಗೇರಿ ಮೆಟ್ರೋ ರೈಲು ಮಾರ್ಗ ಉದ್ಘಾಟನೆ

ಈ ಮಾರ್ಗದಲ್ಲಿ ರೈಲು ಸಂಚಾರ ನಡೆಸುವುದರಿಂದ ಪ್ರತಿ ದಿನ 75 ಸಾವಿರಕ್ಕೂ ಅಧಿಕ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಮೈಸೂರು ರಸ್ತೆ ಯಾವಾಗಲೂ ವಾಹನ ನಿಬಿಡ ರಸ್ತೆ. ಪ್ರತಿ ದಿನ ಲಕ್ಷಗಟ್ಟಲೆ ವಾಹನಗಳು ಸಂಚರಿಸುತ್ತವೆ.

ಮುಂದಿನ ಭಾನುವಾರ ಕೆಂಗೇರಿ ಮೆಟ್ರೋ ರೈಲು ಮಾರ್ಗ ಉದ್ಘಾಟನೆ
Linkup
: ಬಹು ನಿರೀಕ್ಷಿತ - ಮೆಟ್ರೋ ರೈಲು ಮಾರ್ಗಕ್ಕೆ ಆಗಸ್ಟ್ 29ರಂದು ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು ಚಾಲನೆ ನೀಡಲಿದ್ದಾರೆ. ಇದೇ ತಿಂಗಳು 11 ಮತ್ತು 12ರಂದು ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗವನ್ನು ಪರಿಶೀಲನೆ ನಡೆಸಿದ್ದು, ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಿದ್ದರು. ಈ ಮಾರ್ಗದಲ್ಲಿ ರೈಲು ಸಂಚಾರ ನಡೆಸುವುದರಿಂದ ಪ್ರತಿ ದಿನ 75 ಸಾವಿರಕ್ಕೂ ಅಧಿಕ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಮೈಸೂರು ರಸ್ತೆ ಯಾವಾಗಲೂ ವಾಹನ ನಿಬಿಡ ರಸ್ತೆ. ಪ್ರತಿ ದಿನ ಲಕ್ಷಗಟ್ಟಲೆ ವಾಹನಗಳು ಸಂಚರಿಸುತ್ತವೆ. ಇದರಲ್ಲಿನ ಬಹಳಷ್ಟು ವಾಹನಗಳು ಸ್ಥಳೀಯ ಉದ್ಯೋಗಿಗಳದ್ದೇ ಆಗಿವೆ. ಮೆಟ್ರೋ ಮಾರ್ಗ ಆರಂಭದ ಬಳಿಕ ಈ ಮಾರ್ಗದಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಇದೆ. ವಿಸ್ತರಿಸಿದ ಮಾರ್ಗದಲ್ಲಿ ಸ್ವಯಂ ಚಾಲಿತ ಶುಲ್ಕ ಸಂಗ್ರಹ ವ್ಯವಸ್ಥೆಗಾಗಿ 'ಒನ್‌ ನೇಷನ್‌ ಒನ್‌ ಕಾರ್ಡ್‌' ಬಳಕೆಗೆ ಪೂರಕ ಕ್ರಮ ಕೈಗೊಳ್ಳಲಾಗಿದೆ. ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ ಹಾಗೂ ಕೆಂಗೇರಿ ಬಸ್‌ - ಟರ್ಮಿನಲ್‌ ನಿಲ್ದಾಣದಲ್ಲಿ ಎರಡು ಅಂತಸ್ತಿನ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ರಾಮನಗರ, ಬಿಡದಿ, ಚನ್ನಪಟ್ಟಣ ಮತ್ತಿತರರ ಪ್ರದೇಶದ ಜನರಿಗೂ ಬೆಂಗಳೂರು ನಗರ ಸಂಪರ್ಕ ಸುಲಭವಾಗಲಿದೆ. ಎರಡು ವರ್ಷ ವಿಳಂಬ: 7 ಕಿ. ಮೀ. ಉದ್ದದ (ರೀಚ್‌ -2) ವಿಸ್ತರಿತ ಮಾರ್ಗದಲ್ಲಿ 2019ರ ಕೊನೆಯ ವೇಳೆಗೆ ಸಂಚಾರ ಆರಂಭವಾಗಬೇಕಿತ್ತು. ನಂತರ 2021ರ ಫೆಬ್ರವರಿಯ ಗಡುವು ನಿಗದಿಪಡಿಸಲಾಗಿತ್ತು. ಆ ಗಡುವಿನ ಒಳಗೂ ಕಾಮಗಾರಿ ಮುಗಿದಿಲ್ಲ. ಆರು ನಿಲ್ದಾಣಗಳು: ವಿಸ್ತರಿತ ನೇರಳೆ ಮಾರ್ಗದಲ್ಲಿ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನ ಭಾರತಿ, ಪಟ್ಟಣಗೆರೆ, ಮೈಲಸಂದ್ರ ಮತ್ತು ಕೆಂಗೇರಿ ಬಸ್‌ ನಿಲ್ದಾಣ ಸೇರಿದಂತೆ ಒಟ್ಟು ಆರು ಮೆಟ್ರೋ ನಿಲ್ದಾಣಗಳಿವೆ. 7.53 ಕಿ.ಮೀ. ಉದ್ದದ ಮಾರ್ಗ: ನಾಯಂಡ ಹಳ್ಳಿಯಿಂದ ಕೆಂಗೇರಿವರೆಗಿನ ಮಾರ್ಗ 7.53 ಕಿ.ಮೀ. ಉದ್ದವಿದೆ. ಬೈಯಪ್ಪನ ಹಳ್ಳಿಯಿಂದ ಕೆಂಗೇರಿಗೆ ಪ್ರಯಾಣಿಸಲು 56 ರೂ. ದರ ನಿಗದಿಪಡಿಸಲಾಗಿದೆ. ಮೆಟ್ರೋ ಜಾಲದ ಅತಿ ಉದ್ದದ ಮಾರ್ಗ, ಕೆಂಗೇರಿಯಿಂದ ಸಿಲ್ಕ್ ಇನ್ಸ್‌ಟಿಟ್ಯೂಟ್‌ವರೆಗೆ 60 ರೂ. ದರ ನಿಗದಿಪಡಿಸಲಾಗಿದೆ.