ಬೆಂಗಳೂರು: ಫುಡ್‌ ಡೆಲಿವರಿ ಆ್ಯಪ್‌ ಮೂಲಕ ಡ್ರಗ್ಸ್‌ ಪಡೆದುಕೊಳ್ಳುತ್ತಿದ್ದ ಉದ್ಯಮಿ ಸೋನಿಯಾ!

ಫುಡ್‌ ಡೆಲಿವರಿ ಆ್ಯಪ್‌ ಮೂಲಕ ಉಡ್ಯಮಿ ಸೋನಿಯಾ ಅಗರ್‌ವಾಲ್ ಮಾದಕ ವಸ್ತುಗಳನ್ನು ತರಿಸುತ್ತಿದ್ದಳು ಎಂಬ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಕೇರಳದ ಡ್ರಗ್‌ ಪೆಡ್ಲರ್‌ ಅಬ್ದುಲ್‌​​​​ ಖಾದರ್‌ ಎಂಬ ವ್ಯಕ್ತಿಯ ಮೂಲಕ ಮಾದಕ ವಸ್ತುಗಳು ರವಾನೆಯಾಗುತ್ತಿದ್ದವು ಎಂದು ತನಿಖೆಯಲ್ಲಿ ತಿಳಿದಿದೆ.

ಬೆಂಗಳೂರು: ಫುಡ್‌ ಡೆಲಿವರಿ ಆ್ಯಪ್‌ ಮೂಲಕ ಡ್ರಗ್ಸ್‌ ಪಡೆದುಕೊಳ್ಳುತ್ತಿದ್ದ ಉದ್ಯಮಿ ಸೋನಿಯಾ!
Linkup
ಬೆಂಗಳೂರು: ಗೋವಿಂದಪುರ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡೆಲ್‌ ಹಾಗೂ ಉದ್ಯಮಿ ಸೋನಿಯಾ, ಫುಡ್‌ ಡೆಲಿವರಿ ಆ್ಯಪ್‌ ಮೂಲಕ ಮಾದಕ ವಸ್ತುಗಳನ್ನು ತರಿಸುತ್ತಿದ್ದಳು ಎಂಬ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಕೇರಳದ ಡ್ರಗ್‌ ಪೆಡ್ಲರ್‌ ಅಬ್ದುಲ್‌ ಖಾದರ್‌ ಎಂಬ ವ್ಯಕ್ತಿಯ ಮೂಲಕ ಮಾದಕ ವಸ್ತುಗಳು ರವಾನೆಯಾಗುತ್ತಿದ್ದವು. ಆ್ಯಪ್‌ನಲ್ಲಿ ನಗೆಸೂಸುವ ಸಿಂಬಲ್‌ ಕಳುಹಿಸಿದರೆ, ಎಕ್ಸ್‌ಟಾಸಿ ಮಾತ್ರೆ ಹಾಗೂ ಗಾಂಜಾ ಕಳುಹಿಸಿಕೊಡಲಾಗುತ್ತಿತ್ತು. ಫುಡ್‌ ಡೆಲಿವರಿ ಬ್ಯಾಗಲ್ಲಿ ಶರ್ಟ್‌, ಪ್ಯಾಂಟ್‌ ಜತೆ ಡ್ರಗ್ಸ್‌ ಸರಬರಾಜು ಮಾಡಲಾಗುತ್ತಿತ್ತು. ಶರ್ಟ್‌ನ ತೋಳಿನ ಭಾಗ, ಪ್ಯಾಂಟ್‌ನ ಕಾಲಿನ ಭಾಗದಲ್ಲಿ ಡ್ರಗ್ಸ್‌ ಬಚ್ಚಿಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದಪುರ ಠಾಣೆ ಪೊಲೀಸರು ಮೈಕೋ ಲೇಔಟ್‌ನಲ್ಲಿ ಅಬ್ದುಲ್‌ ಖಾದರ್‌ ಎಂಬಾತನನ್ನು ಬಂಧಿಸಿದ್ದಾರೆ. ಸದ್ಯ ಅಬ್ದುಲ್‌ ಖಾದರ್‌ ಜತೆಗೆ ಸಂಪರ್ಕದಲ್ಲಿದ್ದ ಸೆಲೆಬ್ರಿಟಿಗಳಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಬಾರೀ ಸದ್ದು ಮಾಡುತ್ತಿರುವ ಡ್ರಗ್ಸ್‌ ಪ್ರಕರಣ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು ಈಗಾಗಲೇ ನಟಿ ರಾಗಿಣಿ ಹಾಗೂ ಸಂಜನಾ ಅವರನ್ನು ಬಂಧಿಸಿದ್ದರು. ಇತ್ತೀಚೆಗೆ ಸೋನಿಯಾ ಬಂಧನ!ಡ್ರಗ್ಸ್‌ ಸೇವನೆ ಸಂಬಂಧ ಇತ್ತೀಚೆಗೆ ಉದ್ಯಮಿ ಹಾಗೂ ಮಾಡೆಲ್‌ ಸೋನಿಯಾ ಅಗರ್ವಾಲ್‌ರನ್ನು ಪೂರ್ವ ವಿಭಾಗ ಪೊಲೀಸರು ಬಂಧಿಸಿದ್ದರು. ಇವರ ಜೊತೆ ಮತ್ತಿಬ್ಬರನ್ನುಅರೆಸ್ಟ್‌ ಮಾಡಿದ್ದರು. ಬೆನ್ಸನ್‌ಟೌನ್‌ನ ಡಿಜೆ ವಚನ್‌ ಚಿನ್ನಪ್ಪ, ರಾಜಾಜಿನಗರದ ರಾಜ್‌ಕುಮಾರ್‌ ರಸ್ತೆಯಲ್ಲಿರುವ ರೂಪದರ್ಶಿ ಹಾಗೂ ಉದ್ಯಮಿ ಮತ್ತು ರಿಯಲ್‌ ಎಸ್ಟೇಟ್‌ ಉದ್ಯಮಿ ಭರತ್‌ ಎಂಬವರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಬಂಧಿಸಲಾಗಿತ್ತು. ಈ ವೇಳೆ ಉದ್ಯಮಿ ಸೋನಿಯಾ ಅಗರ್‌ವಾಲ್‌ ಮನೆಯಲ್ಲಿ 40 ಗ್ರಾಂ ಗಾಂಜಾ ಪತ್ತೆಯಾಗಿದೆ. ಇನ್ನು ಸೋನಿಯಾಳನ್ನು ಪೊಲೀಸರು ಬಂಧಿಸಲು ತೆರಳಿದಾಗ ಆಕೆ ವಾಶ್‌ರೂಂನಲ್ಲಿ ಅಡಗಿ ಕುತಿದ್ದರು ಎಂಬವುದು ತಿಳಿದುಬಂದಿದೆ. ಸ್ಯಾಂಡಲ್‌ವುಡ್‌ ಸ್ಟಾರ್‌, ಗಣ್ಯರ ಮಕ್ಕಳಿಗೆ ಶಾಕ್‌! ಆರ್ಗಾನಿಕ್‌ ಕಾಸ್ಮೆಟಿಕ್‌ ಕಂಪನಿ ಹೊಂದಿರುವ ಸೋನಿಯಾ ಅಗರ್‌ವಾಲ್‌ ಜತೆ ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳು, ರಾಜಕೀಯ ಮುಖಂಡರ ಮಕ್ಕಳು ಸಂಪರ್ಕದಲ್ಲಿದ್ದರು ಎಂದು ಹೇಳಲಾಗುತ್ತಿದೆ. ನಗರದ ಪ್ರತಿಷ್ಠಿತ ಹೋಟೆಲ್‌ಗಳು, ರೆಸಾರ್ಟ್‌ಗಳಲ್ಲಿ ಆಯೋಜಿಸುವ ಪಾರ್ಟಿಗಳಲ್ಲಿ ಅವರೆಲ್ಲರೂ ಸೋನಿಯಾ ಜತೆ ಪಾಲ್ಗೊಳ್ಳುತ್ತಿದ್ದರು. ಈಗಾಗಲೇ ಬಂಧನಕ್ಕೊಳಗಾಗಿರುವ ನೈಜೀರಿಯಾ ಪ್ರಜೆ ಥಾಮಸ್‌ ಕಲ್ಲು ಕೆಲ ಸೆಲೆಬ್ರಿಟಿಗಳು ಡ್ರಗ್ಸ್‌ ತೆಗೆದುಕೊಳ್ಳುತ್ತಿರುವ ಬಗ್ಗೆಯೂ ಬಾಯಿ ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ನಶೆ ಪಾರ್ಟಿಯಲ್ಲಿ ನಟಿಯರು ? ಸ್ಯಾಂಡಲ್‌ವುಡ್‌ ಮಾದಕ ನಟಿಯರಾದ ಸಂಜಾನ ಗಲ್ರಾನಿ, ರಾಗಿಣಿ ದ್ವಿವೇದಿ ಅವರ ತಲೆ ಕೂದಲನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೊಳಪಡಿಸಿದಾಗ ಇಬ್ಬರು ನಟಿಯರು ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಇಬ್ಬರು ನಟಿಯರು, ಸೋನಿಯಾ ಅಗರ್‌ವಾಲ್‌, ವಚನ್‌ ಚಿನ್ನಪ್ಪ, ಭರತ್‌ ಆಯೋಜಿಸುತ್ತಿದ್ದ ಡ್ರಗ್ಸ್‌ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎಂಬ ಶಂಕೆ ಇದ್ದು, ಈ ಸಂಬಂಧ ತನಿಖೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.