ಪಶು ಸಂಗೋಪನೆಗೆ ಆರ್ಥಿಕ ನೆರವು: ಶೇ.2ರೂ ಬಡ್ಡಿದರದಲ್ಲಿ 2 ಲಕ್ಷ ಸಾಲ; ಅರ್ಜಿ ಸಲ್ಲಿಸಲು ನ.20 ಕೊನೆ ದಿನ!

​​ಶೇ. 2ರ ಬಡ್ಡಿ ದರದಲ್ಲಿ ಸಾಲ ಸಿಗುವ ಈ ಯೋಜನೆಯನ್ನು ಪಡೆಯಲು ಕುರಿ ಮೇಕೆ, ಕೋಳಿ ಸಾಕಣಿಕೆ ಮಾಡುತ್ತಿರುವ ಪ್ರಗತಿಪರ ರೈತರು ನ. 20ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ​ಕೊಟ್ಟಿಗೆ, ಅರೆಕೊಟ್ಟಿಗೆ ಪದ್ಧತಿಯಲ್ಲಿ ಕುರಿ ಮೇಕೆ ಸಾಕಾಣಿಕೆ ಮಾಡುತ್ತಿರುವ ರೈತರು ಹಾಗೂ ಕೋಳಿ ಸಾಕಾಣಿಕೆ ಮಾಡುತ್ತಿರುವ ರೈತರು ಕೆಸಿಸಿ ಯೋಜನೆಯಡಿ ಆರ್ಥಿಕ ನೆರವು ಪಡೆಯಬಹುದಾಗಿದೆ.

ಪಶು ಸಂಗೋಪನೆಗೆ ಆರ್ಥಿಕ ನೆರವು: ಶೇ.2ರೂ ಬಡ್ಡಿದರದಲ್ಲಿ 2 ಲಕ್ಷ ಸಾಲ; ಅರ್ಜಿ ಸಲ್ಲಿಸಲು ನ.20 ಕೊನೆ ದಿನ!
Linkup
ಎಂ.ಪ್ರಶಾಂತ್‌ ಸೂಲಿಬೆಲೆಬೆಂಗಳೂರು ಗ್ರಾಮಾಂತರ: ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯೋಜನೆಯಡಿ ಕಸುಬಿನಲ್ಲಿ ತೊಡಗಿರುವ ರೈತರ ದುಡಿಮೆ ಬಂಡವಾಳಕ್ಕೆ ಆರ್ಥಿಕ ನೆರೆವು ನೀಡುವ ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಶೇ. 2ರ ಬಡ್ಡಿ ದರದಲ್ಲಿ ಸಿಗುವ ಈ ಯೋಜನೆಯನ್ನು ಪಡೆಯಲು ಕುರಿ ಮೇಕೆ, ಕೋಳಿ ಸಾಕಣಿಕೆ ಮಾಡುತ್ತಿರುವ ಪ್ರಗತಿಪರ ರೈತರು ನ. 20ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಶೇ. 3ರಷ್ಟು ಸಹಾಯಧನ ಈ ಯೋಜನೆಯಡಿ ಶೇ. 2ರ ಬಡ್ಡಿಯಲ್ಲಿ 2 ಲಕ್ಷದವರೆಗೆ ಸಾಲ ನೀಡುತ್ತಿದ್ದು, ಸಾಲ ನಿಗಧಿತ ಅವಧಿಯಲ್ಲಿ ಮರು ಪಾವತಿಸಿದರೆ ಶೇ.3ರಷ್ಟು ಹೆಚ್ಚುವರಿಯಾಗಿ ಸಹಾಯಧನ ಸೌಲಭ್ಯ ಪಡೆಯಬಹುದಾಗಿದೆ. ಈಗಾಗಲೇ ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವ ಹೈನುಗಾರರಿಗೆ ದುಡಿಮೆ ಬಂಡವಾಳಕ್ಕೆ ಆರ್ಥಿಕ ನೆರೆವು ಒದಗಿಸಲು ಅರ್ಜಿಗಳನ್ನು ಬ್ಯಾಂಕ್‌ಗೆ ಸಲ್ಲಿಸಿದ್ದು, ಇದನ್ನು ಹೊರತುಪಡಿಸಿ ಕುರಿ, ಮೇಕೆ ಘಟಕ ಹಾಗೂ ಕೋಳಿ ಸಾಕಾಣಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೂ ಕೆಸಿಸಿ ಸೌಲಭ್ಯ ವಿಸ್ತರಿಸಲು ನ. 18ರಂದು ನಡೆದ ಜಿಲ್ಲಾಧಿಕಾರಿ ಸಭೆಯಲ್ಲಿ ಸೂಚಿಸಿರುವ ಹಿನ್ನಲೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಜಿಲ್ಲಾಪಶು ಸಂಗೋಪನೆ ಇಲಾಖೆ ಮುಂದಾಗಿದೆ. ಕುರಿ, ಮೇಕೆ ಸಾಕಾಣಿಕೆಗೂ ನೆರವು ಕೊಟ್ಟಿಗೆ, ಅರೆಕೊಟ್ಟಿಗೆ ಪದ್ಧತಿಯಲ್ಲಿ ಕುರಿ ಮೇಕೆ ಸಾಕಾಣಿಕೆ ಮಾಡುತ್ತಿರುವ ರೈತರು ಹಾಗೂ ಕೋಳಿ ಸಾಕಾಣಿಕೆ ಮಾಡುತ್ತಿರುವ ರೈತರು ಕೆಸಿಸಿ ಯೋಜನೆಯಡಿ ಆರ್ಥಿಕ ನೆರವು ಪಡೆಯಬಹುದಾಗಿದೆ. 2019-20 ಸಾಲಿನಿಂದ ಕೇಂದ್ರ ಸರಕಾರ ಕೆಸಿಸಿ ಸೌಲಭ್ಯವನ್ನು ಪಶುಪಾಲಕರಿಗೆ ವಿಸ್ತರಿಸಿದೆ. ಈ ಕಾರ‍್ಯಕ್ರಮ ಹೈನುಗಾರಿಕೆ, ಕುರಿ, ಕೋಳಿ ಮೇಕೆ, ಕೋಳಿ ಸಾಕಾಣಿಕೆ ಕಸುಬುಗಳಲ್ಲಿ ತೊಡಗಿಕೊಂಡಿರುವ ರೈತರಿಗೆ ಅಲ್ಪಾವಧಿ ದುಡಿಯುವ ಬಂಡವಾಳಕ್ಕೆ ಆರ್ಥಿಕ ನೆರವು ನೀಡುವ ಸದುದ್ದೇಶ ಹೊಂದಿದೆ. ಈ ಯೋಜನೆಯಡಿ ಅವರ ಅಗತ್ಯಕ್ಕೆ ತಕ್ಕಂತೆ ದುಡಿಯುವ ಬಂಡವಾಳಕ್ಕೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಯಾರು ಅರ್ಹರುಪಶು ಪಾಲಕರು, ಸ್ವಸಹಾಯ ಗುಂಪುಗಳು, ಜಂಟಿ ಹೊಣೆಗಾರಿಕೆ ಗುಂಪುಗಳು ಮತ್ತು ಮಹಿಳಾ ಸಂಘಗಳು ಹೈನುಗಾರಿಕೆ ಎರಡು ಮಿಶ್ರತಳಿ ಹಸು ಘಟಕ ನಿರ್ವಹಣೆಗೆ 28 ಸಾವಿರ. ಸುಧಾರಿತ ತಳಿಯ ಎಮ್ಮೆ ಘಟಕ ಎರಡಕ್ಕೆ 32 ಸಾವಿರ, ಕುರಿ ಮೇಕೆಯ ತಳಿ ಸಂವರ್ಧನೆ ಘಟಕ ಎಂಟು ತಿಂಗಳ ಅವಧಿಗೆ 48 ಸಾವಿರ, ಕುರಿ ಮರಿಗಳ ಕೊಬ್ಬಿಸುವಿಕೆ ಘಟಕಕ್ಕೆ 26 ಸಾವಿರ, ಕೋಳಿ ಸಾಕಾಣಿಕೆ ಮಾಂಸದ ಕೋಳಿ ಘಟಕದಲ್ಲಿ ಒಂದು ಬ್ಯಾಚ್‌ ನಲ್ಲಿ 60 ದಿನಗಳವರೆಗೆ ಪ್ರತಿ ಕೋಳಿಗೆ 80 ರೂ. ಮೊಟ್ಟೆ ಕೋಳಿ ಘಟಕಕ್ಕೆ ಮೊದಲ 20 ವಾರಗಳವರಿಗೆ ಪ್ರತಿ ಕೋಳಿಗೆ 180 ರೂ. ಒಂದು ವರ್ಷದಲ್ಲಿ ಒಂದು ಬ್ಯಾಚ್‌ಗೆ ಮಾತ್ರ ಆರ್ಥಿಕ ಸೌಲಭ್ಯ ಸಿಗಲಿದೆ. ಸಲ್ಲಿಸಬೇಕಿರುವ ದಾಖಲೆಗಳು ಬ್ಯಾಂಕ್‌ ಕೆಸಿಸಿ ಖಾತೆಯ ವಿವರ, ಮತದಾರರ ಚೀಟಿ, ಆಧಾರ್‌ ಕಾರ್ಡ್‌, ಅರ್ಜಿದಾರರ ಭಾವಚಿತ್ರ, ದುಡಿಯುವ ಬಂಡವಾಳಕ್ಕೆ ಅಗತ್ಯವಿರುವ ಸಾಲ ಪಡೆಯಲು ಉದ್ದೇಶಿಸಿರುವ ಪಶುಪಾಲನಾ ಚಟುವಟಿಕೆಗಳ ವಿವರ.