ಜಿಎಸ್‌ಟಿಗೆ 4 ವರ್ಷ: ದೇಶದ ಆರ್ಥಿಕತೆಯಲ್ಲಿ ಮೈಲುಗಲ್ಲು ಎಂದು ಶ್ಲಾಘಿಸಿದ ಪ್ರಧಾನಿ ಮೋದಿ

ಜಿಎಸ್‌ಟಿ ಜಾರಿಗೆ ಬಂದು ನಾಲ್ಕು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಪ್ರಮುಖರು ಈ ತೆರಿಗೆ ವ್ಯವಸ್ಥೆಯ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಜಿಎಸ್‌ಟಿಗೆ 4 ವರ್ಷ: ದೇಶದ ಆರ್ಥಿಕತೆಯಲ್ಲಿ ಮೈಲುಗಲ್ಲು ಎಂದು ಶ್ಲಾಘಿಸಿದ ಪ್ರಧಾನಿ ಮೋದಿ
Linkup
ಹೊಸದಿಲ್ಲಿ: ಕೇಂದ್ರದ ಎನ್‌ಡಿಎ ಸರಕಾರವು ವ್ಯಾಪಕ ವಿರೋಧ, ಗೊಂದಲಗಳ ನಡುವೆಯೇ ಸರಕು ಮತ್ತು ಸೇವಾ (ಜಿಎಸ್‌ಟಿ) ಜಾರಿಗೆ ತಂದು ಜುಲೈ 1ರಂದು (ಬುಧವಾರ) ನಾಲ್ಕು ವರ್ಷಗಳಾಗುತ್ತಿದೆ. 2017ರ ಜುಲೈ 1ರಂದು ಕೇಂದ್ರ ಸರಕಾರ ಕಾಯ್ದೆಯನ್ನು ಅನುಷ್ಠಾನಗೊಳಿಸಿತ್ತು. ಜಿಎಸ್‌ಟಿಗೆ ನಾಲ್ಕು ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಅವರು ಈ ತೆರಿಗೆ ವ್ಯವಸ್ಥೆಯ ಸಾಧನೆಯನ್ನು ಶ್ಲಾಘಿಸಿದ್ದಾರೆ. 'ಭಾರತದ ಆರ್ಥಿಕ ಭೂಪ್ರದೇಶದಲ್ಲಿ ಜಿಎಸ್‌ಟಿ ಒಂದು ಮೈಲುಗಲ್ಲಾಗಿದೆ. ಇದು ತೆರಿಗೆಗಳ ಸಂಖ್ಯೆ, ಅನುಮೋದನೆಯ ಹೊರೆ ಮತ್ತು ಜನಸಾಮಾನ್ಯರ ಮೇಲಿನ ಒಟ್ಟಾರೆ ತೆರಿಗೆ ಹೊರೆಗಳನ್ನು ತಗ್ಗಿಸಿದೆ. ಇದರ ನಡುವೆ ಪಾರದರ್ಶಕತೆ, ಅಂಗೀಕಾರ ಮತ್ತು ಒಟ್ಟಾರೆ ಸಂಗ್ರಹದಲ್ಲಿ ಗಣನೀಯ ಏರಿಕೆ ಕಾಣುತ್ತಿದೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 'ಜನರು ಪಾವತಿಸಬೇಕಾದ ತೆರಿಗೆಯ ದರವನ್ನು ಜಿಎಸ್‌ಟಿ ತಗ್ಗಿಸಿದೆ. ಆದಾಯ ತಟಸ್ಥ ದರವು ಆರ್‌ಎನ್‌ಆರ್ ಸಮಿತಿಯ ಶಿಫಾರಸಿನಂತೆ ಶೇ 15.3ರಷ್ಟಿದೆ. ಇದಕ್ಕೆ ಹೋಲಿಸಿದರೆ ಆರ್‌ಬಿಐ ಪ್ರಕಾರ ಪ್ರಸ್ತುತ ಶೇ 11.6ರಷ್ಟು ಮಾತ್ರ ಜಿಎಸ್‌ಟಿ ದರವಿದೆ' ಎಂದು ಹಣಕಾಸು ಸಚಿವೆ ತಿಳಿಸಿದ್ದಾರೆ. 'ಜಿಎಸ್‌ಟಿ ಜಾರಿಗೊಳಿಸಿದ ದಿನದಿಂದ ಇಂದಿಗೆ ನಾಲ್ಕು ವರ್ಷಗಳನ್ನು ಪೂರೈಸಿದೆ. ಜಿಎಸ್‌ಟಿಯು ಸಂಕೀರ್ಣ ಪರೋಕ್ಷ ತೆರಿಗೆ ರಚನೆಯನ್ನು ಸರಳ, ಪಾರದರ್ಶಕ ಮತ್ತು ತಂತ್ರಜ್ಞಾನ-ಚಾಲಿತ ತೆರಿಗೆ ಆಡಳಿತಕ್ಕೆ ಬದಲಾಯಿಸಿದೆ ಹಾಗೂ ಭಾರತವನ್ನು ಏಕೈಕ ಸಾಮಾನ್ಯ ಮಾರುಕಟ್ಟೆಯನ್ನಾಗಿ ಸಮಗ್ರಗೊಳಿಸಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ. - ಎಂಬ ಹ್ಯಾಷ್ ಟ್ಯಾಗ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಜಿಎಸ್‌ಟಿ ಪರ ಮತ್ತು ವಿರೋಧದ ಚರ್ಚೆಗಳು ನಡೆಯುತ್ತಿವೆ.