ಪವನ್‌ ಕಲ್ಯಾಣ್ & ಪ್ರಕಾಶ್ ರೈ ನಟನೆಗೆ ಮನಸೋತ ಮಹೇಶ್ ಬಾಬು! ಏನ್‌ ಹೇಳಿದ್ರು 'ಪ್ರಿನ್ಸ್'?

'ಪವರ್ ಸ್ಟಾರ್‌' ಪವನ್‌ ಕಲ್ಯಾಣ್ ನಟನೆಯ 'ವಕೀಲ್ ಸಾಬ್‌' ಸಿನಿಮಾ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಕೊರೊನಾದ ಆತಂಕದ ನಡುವೆಯೂ ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ! ಮಹೇಶ್ ಬಾಬು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

ಪವನ್‌ ಕಲ್ಯಾಣ್ & ಪ್ರಕಾಶ್ ರೈ ನಟನೆಗೆ ಮನಸೋತ ಮಹೇಶ್ ಬಾಬು! ಏನ್‌ ಹೇಳಿದ್ರು 'ಪ್ರಿನ್ಸ್'?
Linkup
ರಾಜಕೀಯದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದ 'ಪವರ್ ಸ್ಟಾರ್‌' ಪವನ್‌ ಕಲ್ಯಾಣ್, ಮೂರು ವರ್ಷಗಳ ಬಳಿಕ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. 'ವಕೀಲ್‌ ಸಾಬ್‌' ಅವತಾರದಲ್ಲಿ ಬಾಕ್ಸ್‌ ಆಫೀಸ್‌ ಅನ್ನು ಶೇಕ್ ಮಾಡುತ್ತಿದ್ದಾರೆ. ಏಪ್ರಿಲ್ 9ರಂದು ತೆರೆಕಂಡಿರುವ ಈ ಸಿನಿಮಾಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಅಭಿಮಾನಿಗಳು ಮಾತ್ರವಲ್ಲದೆ, ಚಿತ್ರರಂಗದ ಗಣ್ಯರು ಕೂಡ '' ವಾದಕ್ಕೆ ಫಿದಾ ಆಗಿದ್ದಾರೆ. ನಟ 'ಪ್ರಿನ್ಸ್' ಸಿನಿಮಾ ನೋಡಿ ಖುಷಿಯಾಗಿ, ಟ್ವೀಟ್ ಮಾಡಿದ್ದಾರೆ. ಇದು ಎಂಥ ಕಮ್‌ಬ್ಯಾಕ್‌!!ಈಚೆಗೆ 'ವಕೀಲ್ ಸಾಬ್' ಸಿನಿಮಾ ನೋಡಿರುವ ಮಹೇಶ್‌ ಬಾಬು, 'ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ಟಾಪ್ ಫಾರ್ಮ್‌ನಲ್ಲಿದ್ದಾರೆ. 'ವಕೀಲ್ ಸಾಬ್' ಚಿತ್ರದಲ್ಲಿ ಅವರು ಪವರ್ಫುಲ್ ಎನಿಸುವ ಅಭಿನಯ ನೀಡಿದ್ದಾರೆ. ಇದು ಎಂಥ ಕ್ಲೈಮ್ಯಾಕ್ಸ್' ಎಂದಿರುವ ಮಹೇಶ್ ಬಾಬು, ನಟ ಅಭಿನಯ ಕಂಡು ಬ್ರಿಲಿಯಂಟ್ ಎಂದು ಕೊಂಡಾಡಿದ್ದಾರೆ. ಜೊತೆಗೆ ಚಿತ್ರದಲ್ಲಿ ಮುಖ್ಯಪಾತ್ರ ಮಾಡಿರುವ ಅಂಜಲಿ, ನಿವೇದಾ ಥಾಮಸ್, ಅನನ್ಯಾ ಅವರ ನಟನೆ ಹೃದಯಸ್ಪರ್ಶಿ ಆಗಿದೆ ಎಂದಿದ್ದಾರೆ ಮಹೇಶ್‌. ಸಂಗೀತ ನಿರ್ದೇಶಕ ಥಮನ್, ನಿರ್ದೇಶಕ ವೇಣು ಶ್ರೀರಾಮ್ ಅವರಿಗೂ ಮಹೇಶ್ ಮೆಚ್ಚುಗೆ ಸಂದಾಯವಾಗಿದೆ. ಮಹೇಶ್‌ಗೆ ಥ್ಯಾಂಕ್ಸ್ ಹೇಳಿದ ಪ್ರಕಾಶ್ ಇನ್ನು, ನಟ ಪ್ರಕಾಶ್ ರೈ ಮತ್ತು ಮಹೇಶ್‌ ಬಾಬು ನಡುವೆ ಉತ್ತಮ ಒಡನಾಟ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ 'ವಕೀಲ್ ಸಾಬ್‌' ಸಿನಿಮಾ ನೋಡಿ ಮಹೇಶ್ ಮೆಚ್ಚುಗೆ ಮಾತುಗಳನ್ನಾಡಿರುವುದಕ್ಕೆ ಪ್ರತಿಯಾಗಿ, ಧನ್ಯವಾದಗಳನ್ನು ಪ್ರಕಾಶ್ ರೈ‌ ಅರ್ಪಿಸಿದ್ದಾರೆ. 'ಧನ್ಯವಾದಗಳು ಮಹೇಶ್‌. ನಿಮ್ಮಿಂದ ಈ ಮಾತುಗಳನ್ನು ಕೇಳಿ ಖುಷಿಯಾಯ್ತು' ಎಂದಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ರೈ, ನಂದಗೋಪಾಲ್ ಎಂಬ ಎದುರಾಳಿ ವಕೀಲನ ಪಾತ್ರ ಮಾಡಿದ್ದಾರೆ. ಸೆಕೆಂಡ್ ಹಾಫ್‌ನಲ್ಲಿ ಬರುವ ಪ್ರಕಾಶ್ ರೈ ಮತ್ತು ಪವನ್ ಕಲ್ಯಾಣ್‌ ಅವರ ಮುಖಾಮುಖಿ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿವೆ. ಪಿಂಕ್ ರಿಮೇಕ್ ವಕೀಲ್ ಸಾಬ್‌ಅಂದಹಾಗೆ, ಅಮಿತಾಭ್ ಬಚ್ಚನ್‌ ನಟಿಸಿದ್ದ 'ಪಿಂಕ್‌' ಸಿನಿಮಾವನ್ನು ತೆಲುಗಿನಲ್ಲಿ 'ವಕೀಲ್ ಸಾಬ್' ಆಗಿ ರಿಮೇಕ್ ಮಾಡಲಾಗಿದೆ. ತೆಲುಗಿನ ನೇಟಿವಿಟಿ ಹಾಗೂ ಪವನ್‌ ಕಲ್ಯಾಣ್ ಇಮೇಜ್‌ಗೆ ತಕ್ಕಂತೆ ಕಥೆಯೊಳಗೆ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಚಿತ್ರವನ್ನು ದಿಲ್ ರಾಜು ನಿರ್ಮಿಸಿದ್ದು, ವೇಣು ಶ್ರೀರಾಮ್ ನಿರ್ದೇಶನ ಮಾಡಿದ್ದಾರೆ. ತೆರೆಕಂಡ ಎರಡೇ ದಿನಕ್ಕೆ 50 ಕೋಟಿ ರೂ. ಗಳಿಕೆ ಕಂಡಿದೆ ವಕೀಲ್ ಸಾಬ್‌!