ಡಾ.ರಾಜ್‌ಕುಮಾರ್ ಪುಣ್ಯಸ್ಮರಣೆ: ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ 'ವರನಟ' ಅಜರಾಮರ

ಇಂದು ಕನ್ನಡ ಚಿತ್ರರಂಗದ ವರನಟ, ನಟ ಸಾರ್ವಭೌಮ, ಡಾ.ರಾಜ್‌ಕುಮಾರ್ ಅವರ 15ನೇ ವರ್ಷದ ಪುಣ್ಯಸ್ಮರಣೆ.

ಡಾ.ರಾಜ್‌ಕುಮಾರ್ ಪುಣ್ಯಸ್ಮರಣೆ: ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ 'ವರನಟ' ಅಜರಾಮರ
Linkup
ಅದು ಏಪ್ರಿಲ್ 12, 2006.. ಕನ್ನಡಿಗರು ನಿರೀಕ್ಷಿಸದ ಕಹಿ ಸುದ್ದಿ ಅಂದು ಬರಸಿಡಿಲಿನಂತೆ ಬಡಿಯಿತು. ಅಭಿಮಾನಿಗಳ ಆರಾಧ್ಯದೈವ ಅಂದು ಬಾರದ ಲೋಕಕ್ಕೆ ಪಯಣಿಸಿದರು. ಅಣ್ಣಾವ್ರು ಇಹಲೋಕ ತ್ಯಜಿಸಿ ಇಂದಿಗೆ 15 ವರ್ಷಗಳಾಗಿವೆ. ಇಂದು ಕನ್ನಡ ಚಿತ್ರರಂಗದ ವರನಟ, ನಟ ಸಾರ್ವಭೌಮ, ಡಾ.ರಾಜ್‌ಕುಮಾರ್ ಅವರ 15ನೇ ವರ್ಷದ . ಪ್ರತಿ ವರ್ಷ ಡಾ.ರಾಜ್‌ಕುಮಾರ್ ಪುಣ್ಯಸ್ಮರಣೆಯಂದು ಸಾವಿರಾರು ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ತೆರಳಿ, ಪುಣ್ಯಭೂಮಿಗೆ ನಮನ ಸಲ್ಲಿಸುತ್ತಿದ್ದರು. ಅನ್ನದಾನ, ರಕ್ತದಾನ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿತ್ತು. ಆದರೆ, ಕಳೆದ ವರ್ಷ ಕೊರೊನಾ ಲಾಕ್‌ಡೌನ್‌ನಿಂದ ಅದು ಸಾಧ್ಯವಾಗಿರಲಿಲ್ಲ. ಈ ವರ್ಷವೂ ಕೊರೊನಾ ಎರಡನೇ ಅಲೆ ಎದ್ದಿರುವುದರಿಂದ, ಅದನ್ನು ನಿಯಂತ್ರಿಸಲು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಹೀಗಾಗಿ, ಕುಟುಂಬಸ್ಥರು ಮತ್ತು ಅಭಿಮಾನಿಗಳು ಸರಳವಾಗಿ ಪುಣ್ಯಸ್ಮರಣೆ ಕಾರ್ಯಕ್ರಮ ನೆರವೇರಿಸಲು ತೀರ್ಮಾನ ಮಾಡಿದ್ದಾರೆ. ಕಂಠೀರವ ಸ್ಟುಡಿಯೋಗೆ ತೆರಳಿ ಡಾ.ರಾಜ್‌ ಪುಣ್ಯಭೂಮಿಗೆ ಕುಟುಂಬಸ್ಥರು ಪುಷ್ಪ ನಮನ ಸಲ್ಲಿಸಲಿದ್ದಾರೆ. ಡಾ.ರಾಜ್‌ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನಿಗಳು ಅನ್ನದಾನ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಬಡರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.