ಭಾರತದಲ್ಲಿ ಕೊರೊನಾ ಅಬ್ಬರ, ಚೀನಾದ ರಫ್ತು ಏಪ್ರಿಲ್‌ನಲ್ಲಿ ಭಾರಿ ಏರಿಕೆ

ಅಮೆರಿಕದಲ್ಲಿ ಆರ್ಥಿಕತೆ ಚೇತರಿಸಿರುವುದಲ್ಲದೆ, ಕಾರ್ಖಾನೆಗಳಲ್ಲಿ ಚಟುವಟಿಕೆ ಚುರುಕಾಗಿರುವುದರಿಂದಲೂ ರಫ್ತು ಹೆಚ್ಚಳವಾಗಿದೆ. ಚೀನಾದಿಂದ ಅಮೆರಿಕಕ್ಕೆ ಸರಕುಗಳ ರಫ್ತು ಗಣನೀಯವಾಗಿ ಸುಧಾರಿಸಿದೆ.

ಭಾರತದಲ್ಲಿ ಕೊರೊನಾ ಅಬ್ಬರ, ಚೀನಾದ ರಫ್ತು ಏಪ್ರಿಲ್‌ನಲ್ಲಿ ಭಾರಿ ಏರಿಕೆ
Linkup
ಹೊಸದಿಲ್ಲಿ: ಭಾರತ ಕೊರೊನಾದಿಂದ ನಲುಗುತ್ತಿರುವಾಗಲೇ ಚೀನಾದ ಏಪ್ರಿಲ್‌ನಲ್ಲಿ ಅನಿರೀಕ್ಷಿತವಾಗಿ ಭಾರಿ ಏರಿಕೆ ಕಂಡಿದೆ. ಅಮೆರಿಕದಲ್ಲಿ ಆರ್ಥಿಕತೆ ಚೇತರಿಸಿರುವುದು, ಕಾರ್ಖಾನೆಗಳಲ್ಲಿ ಚಟುವಟಿಕೆ ಚುರುಕಾಗಿರುವುದೂ ರಫ್ತು ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಚೀನಾದಿಂದ ಅಮೆರಿಕಕ್ಕೆ ಸರಕುಗಳ ರಫ್ತು ಗಣನೀಯವಾಗಿ ಸುಧಾರಿಸಿದೆ. ಡಾಲರ್‌ಗಳ ಲೆಕ್ಕದಲ್ಲಿ ಚೀನಾದ ರಫ್ತು ಏಪ್ರಿಲ್‌ನಲ್ಲಿ ಬರೋಬ್ಬರಿ 263 ಶತಕೋಟಿ ಡಾಲರ್‌ಗೆ (19 ಲಕ್ಷ ಕೋಟಿ ರೂ.) ಏರಿಕೆಯಾಗಿದೆ. ಭಾರತದಲ್ಲಿ ಕೋವಿಡ್‌-19 ಹೆಚ್ಚಳವಾಗಿರುವುದರಿಂದಲೂ ಹಲವಾರು ಬಿಸಿನೆಸ್‌ ಆರ್ಡರ್‌ಗಳು ಚೀನಾಕ್ಕೆ ವರ್ಗಾವಣೆಯಾಗಿದೆ ಎಂದು ರಫ್ತುದಾರರು ತಿಳಿಸಿದ್ದಾರೆ. ಆರಂಭದಲ್ಲಿ ಚೀನಾದಲ್ಲಿ ಕೋವಿಡ್‌-19 ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ ಹಲವು ಕಂಪನಿಗಳು ಭಾರತದತ್ತ ಮುಖ ಮಾಡಿದ್ದವು. ಈ ಸಂದರ್ಭದಲ್ಲಿ ಭಾರತದ ರಫ್ತು ಒಂದಿಷ್ಟು ಹೆಚ್ಚಾಗಿತ್ತು. ಜತೆಗೆ ಹಲವು ಕಂಪನಿಗಳು ಚೀನಾದಿಂದ ಕಾಲ್ಕಿತ್ತು ಭಾರತಕ್ಕೆ ವಲಸೆಯೂ ಬಂದಿದ್ದವು. ಆದರೆ ಇದರ ಪೂರ್ಣ ಪ್ರಯೋಜನ ಪಡೆಯಲು ಭಾರತ ವಿಫಲವಾಗಿತ್ತು. ಆದರೆ ಈಗ ಭಾರತದಲ್ಲಿ ಕೊರೊನಾದ ಅಬ್ಬರ ಜೋರಾಗಿರುವ, ಇದರ ಪೂರ್ಣ ಪ್ರಯೋಜನವನ್ನು ಬಾಚಿಕೊಳ್ಳಲು ಹೊರಟಂತೆ ಕಾಣಿಸುತ್ತಿದೆ. ಕಳೆದ ಜನವರಿ-ಮಾರ್ಚ್‌ ಅವಧಿಯೂ ಚೀನಾದ ಆರ್ಥಿಕತೆಯ ಬೆಳವಣಿಗೆ ದಾಖಲೆಯ ಶೇ.18ರಷ್ಟಿತ್ತು.