ಚೀನಾ- ಭಾರತ ವ್ಯಾಪಾರ ಈ ವರ್ಷದ ಮೊದಲಾರ್ಧದಲ್ಲಿ ಶೇ. 62.7ರಷ್ಟು ವೃದ್ಧಿ!

ಚೀನಾ ಗಡಿಪ್ರದೇಶ ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಲು ಭಾರತದ ಸರ್ಕಾರ ಹಲವು ಕ್ರಮ ಕೈಗೊಂಡಿತ್ತು. ಇದರ ಹೊರತಾಗಿಯೂ ಚೀನಾದೊಂದಿಗಿನ ವ್ಯಾಪಾರ ಈ ವರ್ಷದ ಮೊದಲಾರ್ಧದಲ್ಲಿ ಶೇ. 62.7ರಷ್ಟು ವೃದ್ಧಿಯಾಗಿದೆ.

ಚೀನಾ- ಭಾರತ ವ್ಯಾಪಾರ ಈ ವರ್ಷದ ಮೊದಲಾರ್ಧದಲ್ಲಿ ಶೇ. 62.7ರಷ್ಟು ವೃದ್ಧಿ!
Linkup
ನವದೆಹಲಿ: ಗಡಿಪ್ರದೇಶ ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಲು ಭಾರತದ ಸರ್ಕಾರ ಹಲವು ಕ್ರಮ ಕೈಗೊಂಡಿತ್ತು. ಇದರ ಹೊರತಾಗಿಯೂ ಚೀನಾದೊಂದಿಗೆ ಭಾರತದ ಈ ವರ್ಷದ ಮೊದಲಾರ್ಧದಲ್ಲಿ ಶೇ. 62.7ರಷ್ಟು ವೃದ್ಧಿಯಾಗಿದೆ. ಚೀನಾದ ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಕಸ್ಟಮ್ಸ್ (ಸಿಜಿಎಸಿ) ಬಿಡುಗಡೆ ಮಾಡಿರುವ ವರದಿಯಂತೆ, ಕಳೆದ ಜನವರಿ- ಜೂನ್ ಅವಧಿಯಲ್ಲಿ ಉಭಯ ದೇಶಗಳ ನಡುವಿನ ಒಟ್ಟು ವ್ಯಾಪಾರ 57.48 ಬಿಲಿಯನ್ ಡಾಲರ್‌ ಆಗಿದೆ. ಗಲ್ವಾನ್ ಕಣಿವೆಯಲ್ಲಿ ಚೀನಾದ ಆಕ್ರಮಣದ ನಂತರ, ಭಾರತವು ಆಮದುಗಳನ್ನು ಕಡಿಮೆ ಮಾಡಲು ಅನೇಕ ಕ್ರಮಗಳನ್ನು ತೆಗೆದುಕೊಂಡಿತು. ಅಲ್ಲದೆ, ಅನೇಕ ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು. ಇದೆಲ್ಲದರ ಹೊರತಾಗಿಯೂ, ಸುಮಾರು ಒಂದು ವರ್ಷದಲ್ಲಿ ದ್ವಿಪಕ್ಷೀಯ ವ್ಯಾಪಾರವು 2019ರ ಸಾಂಕ್ರಾಮಿಕ ಪೂರ್ವದ ಮಟ್ಟವನ್ನು ಮೀರಿದೆ. ಎರಡೂ ದೇಶಗಳು ವರ್ಷದ ಮೊದಲಾರ್ಧದಲ್ಲಿ ದ್ವಿಪಕ್ಷೀಯ ವ್ಯಾಪಾರ 44.72 ಬಿಲಿಯನ್ ಡಾಲರ್‌ ಎಂದು ದಾಖಲಿಸಿದೆ. ಚೀನಾದ ಏಜೆನ್ಸಿಗಳು ಬಿಡುಗಡೆ ಮಾಡಿದ ದತ್ತಾಂಶಗಳು, ಭಾರತದ ಆಮದು ಮುಖ್ಯವಾಗಿ ವೈದ್ಯಕೀಯ ಸಾಮಗ್ರಿಗಳ ಖರೀದಿಯ ಕಾರಣದಿಂದಾಗಿ ಈ ವರ್ಷ 42.76 ಬಿಲಿಯನ್ ಡಾಲರ್‌ ತಲುಪಿದೆ. ಇದು 2019ರಲ್ಲಿ ಇದೇ ಅವಧಿಯಲ್ಲಿ ದಾಖಲಾದ. 35.8 ಬಿಲಿಯನ್‌ ಡಾಲರ್‌ಗೆ ಹೋಲಿಸಿದರೆ ಶೇ. 60.4ರಷ್ಟು ಹೆಚ್ಚಾಗಿದೆ. ಏಪ್ರಿಲ್‌ ಒಂದೇ ತಿಂಗಳಲ್ಲಿ ಭಾರತ 26,000ಕ್ಕೂ ಹೆಚ್ಚು ವೆಂಟಿಲೇಟರ್‌ ಮತ್ತು ಆಮ್ಲಜನಕ ಉತ್ಪಾದಕಗಳನ್ನು ಆಮದು ಮಾಡಿಕೊಂಡಿದೆ ಎಂದು ದತ್ತಾಂಶ ಸೂಚಿಸಿದೆ. ಸಕಾರಾತ್ಮಕವಾಗಿ ಹೇಳುವುದಾದರೆ ಚೀನಾಕ್ಕೆ ಭಾರತದ ರಫ್ತು ಸಹ ಶೇ. 69.6ರಷ್ಟು ಹೆಚ್ಚಾಗಿದೆ. ಮುಖ್ಯವಾಗಿ ಕಬ್ಬಿಣದ ಅದಿರು, ಹತ್ತಿ ಮತ್ತು ಇತರ ಸರಕುಗಳ ರಫ್ತಿನಿಂದಾಗಿ 14.72 ಶತಕೋಟಿಗೆ ತಲುಪಿದೆ. ಈ ವರ್ಷದ ಜನವರಿ ಮತ್ತು ಏಪ್ರಿಲ್ ನಡುವೆ ಭಾರತವು ಒಟ್ಟು 20.28 ದಶಲಕ್ಷ ಟನ್ ಕಬ್ಬಿಣದ ಅದಿರನ್ನು ಚೀನಾಕ್ಕೆ ರಫ್ತು ಮಾಡಿದೆ ಎಂದು ಸಿಜಿಎಸಿ ಅಂಕಿಅಂಶಗಳು ಬಹಿರಂಗಪಡಿಸಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಸುಮಾರು ಶೇ.66 ಹೆಚ್ಚಾಗಿದೆ. ಇದು ಭಾರತದ ಒಟ್ಟು ಕಬ್ಬಿಣದ ಅದಿರಿನ ರಫ್ತಿನ ಸುಮಾರು ಶೇಕಡ 90ರಷ್ಟಿದೆ.