'ಪ್ರೇಮಂ' ಚಿತ್ರದ ಮಲರ್‌ ಪಾತ್ರಕ್ಕೆ ಸಾಯಿ ಪಲ್ಲವಿ ಮೊದಲ ಆಯ್ಕೆ ಅಲ್ಲ! ಹಾಗಾದ್ರೆ, ಫಸ್ಟ್ ಚಾಯ್ಸ್ ಯಾರು?

ನಿವಿನ್ ಪೌಲಿ ಅಭಿನಯದ 'ಪ್ರೇಮಂ' ಸಿನಿಮಾವು 2015ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಬಂಪರ್ ಬೆಳೆ ತೆಗೆದಿತ್ತು. ಅಲ್ಲದೆ, ಬೇರೆ ಬೇರೆ ಭಾಷೆಗಳಿಗೆ ರಿಮೇಕ್ ಕೂಡ ಆಗಿತ್ತು. ಇದೀಗ ಆ ಸಿನಿಮಾ ಬಗ್ಗೆ ನಿರ್ದೇಶಕರು ಒಂದು ಆಸಕ್ತಿಕರ ಮಾಹಿತಿ ಹಂಚಿಕೊಂಡಿದ್ದಾರೆ.

'ಪ್ರೇಮಂ' ಚಿತ್ರದ ಮಲರ್‌ ಪಾತ್ರಕ್ಕೆ ಸಾಯಿ ಪಲ್ಲವಿ ಮೊದಲ ಆಯ್ಕೆ ಅಲ್ಲ! ಹಾಗಾದ್ರೆ, ಫಸ್ಟ್ ಚಾಯ್ಸ್ ಯಾರು?
Linkup
2015ರಲ್ಲಿ ತೆರೆಕಂಡ '' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆಯಿತು. ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡಿದ್ದಲ್ಲದೆ, ಆ ಸಿನಿಮಾದಲ್ಲಿ ಬಣ್ಣ ಹಚ್ಚಿದ ಹೀರೋ ನಿವೀನ್ ಪೌಲಿ, ನಟಿಯರಾದ , ಮಡೊನ್ನಾ ಸೆಬಾಸ್ಟಿಯನ್‌, ಅನುಪಮಾ ಪರಮೇಶ್ವರನ್‌ಗೆ ಭಾರಿ ಬೇಡಿಕೆಯನ್ನು ತಂದುಕೊಟ್ಟಿತು. ಅದರಲ್ಲೂ ಮಲರ್ ಪಾತ್ರದ ಮಾಡಿದ್ದ ಸಾಯಿ ಪಲ್ಲವಿಗಂತೂ ದಕ್ಷಿಣ ಭಾರತದಲ್ಲೇ ಭಾರಿ ಬೇಡಿಕೆ ಸೃಷ್ಟಿಯಾಯಿತು. ಆದರೆ ನಿರ್ದೇಶಕ ಅಲ್ಫೋನ್ಸ್ ಪುತರ್ ಇದೀಗ ಮಲರ್ ಪಾತ್ರದ ಬಗ್ಗೆ ಒಂದು ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಮಲರ್‌ ಪಾತ್ರಕ್ಕೆ ಮೊದಲ ಆಯ್ಕೆ ಆಸಿನ್‌ 2001ರಿಂದ 2008ರವರೆಗೆ ತಮಿಳು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ್ದ ನಟಿ , ಆನಂತರ ಬಾಲಿವುಡ್‌ ಕದ ತಟ್ಟಿ, ಅಲ್ಲಿಯೂ ಫೇಮಸ್‌ ಆದರು. 2016ರಲ್ಲಿ ಮದುವೆಯಾದ ಅವರೀಗ ಸಿನಿಮಾದಿಂದ ದೂರ ಉಳಿಸಿದ್ದಾರೆ. ಆದರೆ, ಮೂಲತಃ ಕೇರಳದವರಾದ ಆಸಿನ್‌ರನ್ನು 'ಪ್ರೇಮಂ' ಸಿನಿಮಾದ ಮಲರ್ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನಿರ್ದೇಶಕರ ಉದ್ದೇಶವಾಗಿತ್ತಂತೆ. ಅದನ್ನು ನಟ ನಿವಿನ್‌ ಪೌಲಿ ಬಳಿಯೂ ಅವರು ಹೇಳಿದ್ದರು. ಆದರೆ, ಕೊನೆಗೆ ಸಾಯಿ ಪಲ್ಲವಿ ಆ ಜಾಗಕ್ಕೆ ಬಂದರು. ಸೊಶೀಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರ ಕಾಮೆಂಟ್‌ಗೆ ಉತ್ತರ ನೀಡುವಾಗ, ಈ ವಿಚಾರವನ್ನು ನಿರ್ದೇಶಕರು ಬಾಯಿಬಿಟ್ಟಿದ್ದಾರೆ. ಆಸಿನ್‌ ಸಂಪರ್ಕ ಸಾಧ್ಯವಾಗಿರಲಿಲ್ಲ! 'ನಾನು ಮಲಯಾಳಂ ವರ್ಷನ್ ಸ್ಕ್ರಿಪ್ಟ್ ಬರೆಯುವ ಹಂತದಲ್ಲೇ ಆಸಿನ್ ಅವರನ್ನು ಮಲರ್‌ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದೆ. ಅವರ ಪಾತ್ರ ಕೊಚ್ಚಿ ಮೂಲದ್ದಾಗಿತ್ತು. ಆದರೆ, ನಮಗೆ ಆಸಿನ್‌ರನ್ನು ತಲುಪಲು ಸಾಧ್ಯವಾಗಲೇ ಇಲ್ಲ. ನಿವಿನ್ ಕೂಡ ಸಂಪರ್ಕ ಮಾಡಲು ತುಂಬ ಪ್ರಯತ್ನ ಮಾಡಿದರು. ನಂತರ ನಮ್ಮ ಐಡಿಯಾವನ್ನು ಕೈಬಿಟ್ಟು ಮಲರ್ ಪಾತ್ರದ ಮೂಲ ತಮಿಳು ಮಾಡಿದೆವು. ಇದು ಸ್ಕ್ರಿಪ್ಟ್ ಬರೆಯುವ ಆರಂಭದಲ್ಲಿ ನಡೆದಿತ್ತು' ಎಂದು ಅಲ್ಫೋನ್ಸ್ ಪುತರ್ ಹೇಳಿದ್ದಾರೆ. ಇನ್ನು, 'ನಿಮ್ಮ ಸಿನಿಮಾಗಳಲ್ಲಿ ತಮಿಳಿನ ಪ್ರಭಾವ ಇರುತ್ತದೆ' ಎಂಬ ಪ್ರಶ್ನೆಯನ್ನು ಅಲ್ಫೋನ್ಸ್ ಪುತರ್‌ಗೆ ಆ ನೆಟ್ಟಿಗ ಕೇಳಿದ್ದ. ಅದಕ್ಕೂ ಉತ್ತರಿಸಿದ್ದ ಅವರು, 'ನಾನು ಓದಿದ್ದು ಎಲ್ಲವೂ ಊಟಿಯಲ್ಲೇ. ನನ್ನ ಸಿನಿಮಾ ಸಂಬಂಧಿತ ಓದನ್ನು ಕೂಡ ಚೆನ್ನೈನಲ್ಲೇ ಮಾಡಿದೆ. ಹಾಗಾಗಿ, ತಮಿಳಿನೊಂದಿಗೆ ನನಗೆ ಬಲವಾದ ಕನೆಕ್ಷನ್ ಇದೆ' ಎಂದು ಹೇಳಿದ್ದಾರೆ. 'ಪ್ರೇಮಂ' ತೆರೆಕಂಡು ಆರು ವರ್ಷಗಳ ನಂತರ ಫಹಾದ್ ಫಾಸಿಲ್‌, ನಯನತಾರಾ ಕಾಂಬಿನೇಷನ್‌ನಲ್ಲಿ 'ಪಾಟ್ಟು' ಎಂಬ ಸಿನಿಮಾವನ್ನು ಅಲ್ಫೋನ್ಸ್ ಪುತರ್‌ ಘೋಷಣೆ ಮಾಡಿದ್ದಾರೆ. ಅಲ್ಲದೆ, ರಜನಿಕಾಂತ್‌ಗೂ ಒಂದು ಸಿನಿಮಾ ಮಾಡಬೇಕು ಎಂಬುದು ಅಲ್ಫೋನ್ಸ್ ಬಯಕೆ.