ಡೆಲ್ಟಾ ಕೊರೊನಾ ವೈರಸ್ ಜತೆಗೇ ಮತ್ತೊಂದು ಭೀತಿ: ಕೇರಳದಲ್ಲಿ ಮೊದಲ ಜಿಕಾ ವೈರಸ್ ಪ್ರಕರಣ ಪತ್ತೆ

ಕೇರಳದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುವ ಮುನ್ನವೇ ಜಿಕಾ ವೈರಸ್ ಪ್ರಕರಣ ಖಚಿತವಾಗಿದೆ. ಗರ್ಭಿಣಿಯೊಬ್ಬರಲ್ಲಿ ಜಿಕಾ ವೈರಸ್ ಪತ್ತೆಯಾಗಿದ್ದು, ಒಟ್ಟು 13 ಮಾದರಿಗಳು ಜಿಕಾ ಶಂಕಿತ ಪ್ರಕರಣಗಳಾಗಿವೆ.

ಡೆಲ್ಟಾ ಕೊರೊನಾ ವೈರಸ್ ಜತೆಗೇ ಮತ್ತೊಂದು ಭೀತಿ: ಕೇರಳದಲ್ಲಿ ಮೊದಲ ಜಿಕಾ ವೈರಸ್ ಪ್ರಕರಣ ಪತ್ತೆ
Linkup
ತಿರುವನಂತಪುರಂ: ಎರಡನೆಯ ಅಲೆಯನ್ನು ಇನ್ನೂ ನಿಯಂತ್ರಣಕ್ಕೆ ತರುವಲ್ಲಿ ವಿಫಲವಾಗುತ್ತಿರುವ ಕೇರಳಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಒಂದು ಕಾಲದಲ್ಲಿ ಜಗತ್ತಿನಾದ್ಯಂತ ಭೀತಿ ಮೂಡಿಸಿದ್ದ ಜಿಕಾ ವೈರಸ್‌ ಮತ್ತೆ ಕಾಣಿಸಿಕೊಂಡಿದೆ. ಸೊಳ್ಳೆಯಿಂದ ಹರಡುವ ವೈರಾಣು ಸೋಂಕುವಿನ ಮೊದಲ ಪ್ರಕರಣ ದೃಢಪಟ್ಟಿದೆ. ಪಾಸಿಟಿವ್ ಎಂದು ಶಂಕಿಸಲಾಗಿರುವ 13 ಪ್ರಕರಣಗಳ ಮಾದರಿಗಳನ್ನು ಪುಣೆಯಲ್ಲಿನ ರಾಷ್ಟ್ರೀಯ ವೈರಾಣು ಸಂಸ್ಥೆಗೆ ರವಾನಿಸಲಾಗಿತ್ತು. ಇದರಲ್ಲಿ ತಿರುವನಂತಪುರಂನ ಪರಸ್ಸಲ ಮೂಲದ 24 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಜ್ವರ, ದೇಹದಲ್ಲಿ ತುರಿಕೆ ಹಾಗೂ ಉರಿ ಅನುಭವದ ಕಾರಣದಿಂದ ಖಾಸಗಿ ಆಸ್ಪತ್ರೆಗೆ ಈ ಗರ್ಭಿಣಿ ಜೂನ್ 28ರಂದು ದಾಖಲಾಗಿದ್ದರು. ಪ್ರಸವದ ಕೊನೆಯ ವಾರಗಳಲ್ಲಿದ್ದ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗು ಆರೋಗ್ಯಯುತವಾಗಿದೆ. ಆದರೆ, ಮಹಿಳೆಯಲ್ಲಿ ಜಿಕಾ ವೈರಸ್ ಸೋಂಕು ಖಚಿತವಾಗಿದೆ. ಈ ಮಹಿಳೆ - ತಮಿಳುನಾಡು ಗಡಿ ಸಮೀಪದಲ್ಲಿ ವಾಸಿಸುತ್ತಿದ್ದಾಳೆ. ಆದರೆ ಆಕೆಗೆ ಯಾವುದೇ ಪ್ರಯಾಣ ಇತಿಹಾಸವಿಲ್ಲ. ಆಕೆ ಜ್ವರದಿಂದ ಆಸ್ಪತ್ರೆಗೆ ದಾಖಲಾಗುವ ಒಂದು ವಾರಕ್ಕೂ ಮುನ್ನ ಆಕೆಯ ತಾಯಿ ಕೂಡ ಅದೇ ರೀತಿಯ ಲಕ್ಷಣಗಳೊಂದಿಗೆ ಜ್ವರಕ್ಕೆ ಚಿಕಿತ್ಸೆ ಪಡೆದಿದ್ದರು. ತಿರುವನಂತಪುರಂ ಜಿಲ್ಲೆಯಿಂದ 19 ಮಾದರಿಗಳನ್ನು ಪುಣೆಯ ವೈರಾಣು ಸಂಸ್ಥೆಗೆ ರವಾನಿಸಲಾಗಿದೆ. ಇವುಗಳಲ್ಲಿ 13 ಮಾದರಿಗಳು ಜಿಕಾ ವೈರಸ್ ಪಾಸಿಟಿವ್ ಇರಬಹುದು ಎಂದು ಶಂಕಿಸಲಾಗಿದೆ. ನಗರದ ಖಾಸಗಿ ಆಸ್ಪತ್ರೆಯೊಂದರ ಬಹುತೇಕ ಆರೋಗ್ಯ ಕಾರ್ಯಕರ್ತರಲ್ಲಿ ಇದೇ ರೀತಿಯ ಲಕ್ಷಣಗಳು ಕಂಡುಬಂದಿವೆ. ಮೊದಲು ಪತ್ತೆಯಾಗಿದ್ದು...ಜಿಕಾ ವೈರಸ್ ಹರಡುವ ಸೊಳ್ಳೆಗಳು ಹಗಲಿನ ವೇಳೆ ಸಕ್ರಿಯವಾಗಿರುತ್ತವೆ. ಇದು 1947ರಲ್ಲಿ ಉಗಾಂಡದಲ್ಲಿ ಮೊದಲು ಮಂಗಗಳಲ್ಲಿ ಕಂಡುಬಂದಿತ್ತು. 1952ರಲ್ಲಿ ಉಗಾಂಡ ಮತ್ತು ತಾಂಜಾನಿಯಾ ಗಣರಾಜ್ಯ ಒಕ್ಕೂಟದ ಜನರಲ್ಲಿ ಪತ್ತೆಯಾಗಿತ್ತು. ಏಷ್ಯಾ, ಆಫ್ರಿಕಾ, ಅಮೆರಿಕ ಮತ್ತು ಪೆಸಿಫಿಕ್ ದ್ವೀಪಗಳಲ್ಲಿ ಇದು ಸಾಂಕ್ರಾಮಿಕವಾಗಿ ವ್ಯಾಪಿಸಿತ್ತು. ಲಕ್ಷಣಗಳೇನು?ಜಿಕಾ ವೈರಸ್ ಹರಡಲು ಕಾರಣ ಏಡಿಸ್ ಈಜಿಪ್ತಿ ಎಂಬ . ಏಡಿಸ್ ಈಜಿಪ್ತಿ ಪ್ರಭೇದದ ಸೊಳ್ಳೆಗಳು ಡೆಂಘಿ, ಚಿಕೂನ್ ಗುನ್ಯಾ ಮತ್ತು ಹಳದಿ ಜ್ವರದಂತಹ ಸಮಸ್ಯೆಗಳಿಗೂ ಕಾರಣವಾಗುತ್ತವೆ. ಜಿಕಾ ವೈರಸ್ ಸೋಂಕು ತಗುಲಿದವರಲ್ಲಿ ಜ್ವರ, ಸ್ನಾಯು ಸೆಳೆತ, ಕೀಲು ನೋವು, ದೇಹದಲ್ಲಿ ತುರಿಕೆ ಮತ್ತು ಉರಿ, ಬಳಲಿಕೆ, ತಲೆ ನೋವಿನ ಲಕ್ಷಣಗಳು ಕಂಡುಬರುತ್ತವೆ. 3-14 ದಿನಗಳರೆಗೆ ಜಿಕಾ ವೈರಸ್ ಪರಿಣಾಮ ತೀವ್ರವಾಗಿರುತ್ತದೆ. ಈ ವೈರಸ್ ತಗುಲಿದ್ದರೂ ಬಹುಪಾಲು ಜನರಿಗೆ ಅದರ ನೈಜ ಲಕ್ಷಣಗಳು ಉಂಟಾಗುವುದೇ ಇಲ್ಲ. ಜ್ವರ, ತುರಿಕೆ, ತಲೆನೋವಿನಂತಹ ಸಾಮಾನ್ಯ ಲಕ್ಷಣಗಳು ಕಾಣಿಸುತ್ತವೆ. ಆದರೆ ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣ ಹಾಗೂ ನವಜಾತ ಶಿಶುಗಳಲ್ಲಿ ಅಸಹಜ ಬೆಳವಣಿಗೆ ಮತ್ತು ತಲೆ ಕಿರಿದಾಗುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ತತ್ತರಿಸಿ ಹೋಗಿದ್ದ ಬ್ರೆಜಿಲ್2016ರಲ್ಲಿ ಬ್ರೆಜಿಲ್‌ನಲ್ಲಿ ಜಿಕಾ ವೈರಸ್ ಅಪಾಯಕಾರಿ ಮಟ್ಟದಲ್ಲಿ ಹರಡಿತ್ತು. ಈ ಸೋಂಕಿಗೆ ನೂರಾರು ಮಂದಿ ಬಲಿಯಾಗಿದ್ದರೆ, 1600ಕ್ಕೂ ಅಧಿಕ ಶಿಶುಗಳು ವಿಚಿತ್ರ ಹಾಗೂ ಕುಗ್ಗಿದ ತಲೆಯೊಂದಿಗೆ ಜನಿಸಿದ್ದವು. 2017ರ ಜನವರಿಯಲ್ಲಿ ಅಹಮದಾಬಾದ್‌ನಲ್ಲಿ ದೇಶದ ಮೊದಲ ಸ್ಥಳೀಯ ಜಿಕಾ ವೈರಸ್ ಪಿಡುಗು ಪತ್ತೆಯಾಗಿತ್ತು. 2017ರ ಜುಲೈನಲ್ಲಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಎರಡನೆಯ ಪ್ರಕರಣ ದಾಖಲಾಗಿತ್ತು.