ಸಂಪೂರ್ಣ ಲಾಕ್‌ಡೌನ್ ಒಂದೇ ಈಗಿರುವ ಮಾರ್ಗ: ರಾಹುಲ್ ಗಾಂಧಿ

ಕೇಂದ್ರ ಸರ್ಕಾರದ ವೈಫಲ್ಯದಿಂದಲೇ ದೇಶದಲ್ಲಿ ಕೋವಿಡ್ ಸಮಸ್ಯೆ ಇಷ್ಟು ಹದಗೆಟ್ಟಿದೆ. ಅದರ ನಿಷ್ಕ್ರಿಯತೆಯಿಂದಾಗಿ ಜನರು ಸಾಯುತ್ತಿದ್ದಾರೆ. ಈಗಿನ ಸ್ಥಿತಿಯಲ್ಲಿ ಕೋವಿಡ್ ನಿಯಂತ್ರಿಸಲು ಸಂಪೂರ್ಣ ಲಾಕ್‌ಡೌನ್ ಮಾತ್ರವೇ ಪರಿಹಾರ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಸಂಪೂರ್ಣ ಲಾಕ್‌ಡೌನ್ ಒಂದೇ ಈಗಿರುವ ಮಾರ್ಗ: ರಾಹುಲ್ ಗಾಂಧಿ
Linkup
ಹೊಸದಿಲ್ಲಿ: ಕೇಂದ್ರ ಸರ್ಕಾರವು ತೆಗೆದುಕೊಂಡಿರುವ ಕ್ರಮಗಳು ಭಾರತದಲ್ಲಿ ಇದುವರೆಗೂ ಕೋವಿಡ್-19 ಸಾಂಕ್ರಾಮಿಕವನ್ನು ನಿಯಂತ್ರಿಸುವಲ್ಲಿ ಶಕ್ತವಾಗಿಲ್ಲ ಎಂದು ಕಾಂಗ್ರೆಸ್ ನಾಯಕ ಕಿಡಿಕಾರಿದ್ದಾರೆ. ತನ್ನ ನಿಷ್ಕ್ರಿಯತೆಯ ಮೂಲಕ ಸರ್ಕಾರ ಜೀವಗಳ ಹಾನಿಗೆ ಕಾರಣವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 'ದೇಶದಲ್ಲಿ ಇಂದು ಕೋವಿಡ್ ಹರಡದಂತೆ ತಡೆಯಲು ಇರುವ ಏಕೈಕ ಮಾರ್ಗವೆಂದರೆ ಸಂಪೂರ್ಣ ಮಾತ್ರ. ಕೆಳಮಟ್ಟದಲ್ಲಿರುವ ವರ್ಗಗಳಿಗೆ 'ನ್ಯಾಯ್' ರಕ್ಷಣೆ ಒದಗಿಸುವ ಮೂಲಕ ಲಾಕ್‌ಡೌನ್ ಜಾರಿಗೊಳಿಸಬೇಕು. ಭಾರತ ಸರ್ಕಾರಕ್ಕೆ ಇದು ಅರ್ಥವಾಗುತ್ತಿಲ್ಲ ಎಂದು ಅವರು ಟ್ವಿಟ್ಟರ್‌ನಲ್ಲಿ ಕಿಡಿಕಾರಿದ್ದಾರೆ. ಕಳೆದ ವರ್ಷ ಲಾಕ್‌ಡೌನ್ ಜಾರಿಗೆ ತಂದಿದ್ದರ ಕುರಿತು ರಾಹುಲ್ ಗಾಂಧಿ ಟೀಕಾಪ್ರಹಾರ ನಡೆದಿದ್ದರು. ಈಗ ಅವರೇ ಸಂಪೂರ್ಣ ಲಾಕ್‌ಡೌನ್‌ಗೆ ಒತ್ತಾಯಿಸುತ್ತಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿವೆ. ಇದಕ್ಕೆ ರಾಹುಲ್ ಗಾಂಧಿ ಮತ್ತೊಂದು ಟ್ವೀಟ್‌ನಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. 'ಲಾಕ್‌ಡೌನ್ ಈಗ ಇರುವ ಏಕೈಕ ಆಯ್ಕೆ ಎಂದು ಏಕೆ ಹೇಳುತ್ತಿದ್ದೇನೆ ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ. ಭಾರತ ಸರ್ಕಾರದ ಕಾರ್ಯತಂತ್ರದ ಕೊರತೆ ಇದಕ್ಕೆ ಕಾರಣ. ಇಂದು ಬೇರೆ ಯಾವುದೇ ರೀತಿಯಲ್ಲಿ ತಡೆಯಲು ಸಾಧ್ಯವಾಗದಂತಹ ಹಂತಕ್ಕೆ ವೈರಸ್ ತಲುಪಲು ಅವರು ಅವಕಾಶ ನೀಡಿದರು, ಮುಖ್ಯವಾಗಿ ಅವರ ಚಟುವಟಿಕೆಗಳು ಸಹಾಯ ಮಾಡಿದವು. ಭಾರತದ ವಿರುದ್ಧ ಅಪರಾಧ ಎಸಗಲಾಗಿದೆ' ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ. ಕಳೆದ ವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, ಎರಡನೆ ಅಲೆಯ ಕಾಯಿಲೆಯಿಂದ ಎರಡು ಪಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರೂ ಸರ್ಕಾರಕ್ಕೆ ಕೊಂಚವೂ ಹೊಣೆಗಾರಿಕೆಯಿಲ್ಲ ಎಂದು ಆರೋಪಿಸಿದ್ದರು. ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಸಾಂಕ್ರಾಮಿಕದ ವಿಚಾರದಲ್ಲಿ ಅವರು ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.