ನಿಮ್ಮಲ್ಲಿ ಹಳೆಯ 5, 10 ರೂ. ನಾಣ್ಯ ಇದ್ಯಾ? ಇದ್ರೆ ನೀವೂ ಲಕ್ಷಾಧೀಶ ಆಗ್ಬೋದು!

ಮಾತಾ ವೈಷ್ಣೋದೇವಿ ಚಿತ್ರ ಮುದ್ರಿಸಿರುವ 5 ಮತ್ತು 10 ರೂಪಾಯಿ ನಾಣ್ಯಗಳಿದ್ದರೆ, ನೀವು ಲಕ್ಷಾಧೀಶರಾಗುವ ದಿನಗಳು ಹತ್ತಿರವಿದೆ ಎಂದುಕೊಳ್ಳಿ. ಇಂತಹ ನಾಣ್ಯಗಳಿಂದ ಲಕ್ಷಾಂತರ ರೂಪಾಯಿ ಗಳಿಸುವುದು ಹೇಗೆ ಎಂಬ ಪೂರ್ಣ ವಿವರ ಇಲ್ಲಿದೆ.

ನಿಮ್ಮಲ್ಲಿ ಹಳೆಯ 5, 10 ರೂ. ನಾಣ್ಯ ಇದ್ಯಾ? ಇದ್ರೆ ನೀವೂ ಲಕ್ಷಾಧೀಶ ಆಗ್ಬೋದು!
Linkup
ಬೆಂಗಳೂರು: ನಿಮ್ಮ ಜೇಬಲ್ಲಿ ಕೆಲವೇ ನಾಣ್ಯಗಳಿದ್ದರೆ ಸಾಕು ಲಕ್ಷಾಧೀಶರಾಗಬಹುದು! ಹೀಗೊಂದು ಕನಸು ಕಾಣಬಹುದಷ್ಟೇ ಎಂದುಕೊಳ್ತೀರಾ? ಇದು ಕಲ್ಪನೆಯಲ್ಲಿ ನಿಮ್ಮಲ್ಲಿ ಮಾತಾ ವೈಷ್ಣೋದೇವಿ ಚಿತ್ರ ಮುದ್ರಿಸಿರುವ 5 ಮತ್ತು 10 ರೂಪಾಯಿ ನಾಣ್ಯಗಳಿದ್ದರೆ, ನೀವು ಲಕ್ಷಾಧೀಶರಾಗುವ ದಿನಗಳು ಹತ್ತಿರವಿದೆ ಎಂದುಕೊಳ್ಳಿ. ಇಂತಹ ನಾಣ್ಯ ಹೊಂದಿರುವವರು ಲಕ್ಷಾಂತರ ರೂಪಾಯಿ ಗಳಿಸಿರುವ ಬಗ್ಗೆ ವರದಿಯಾಗಿವೆ. ನಾಣ್ಯಗಳು ಅದೃಷ್ಟದ ಸಂಕೇತ ಹಿಂದೂ ಸಂಪ್ರದಾಯದ ಪ್ರಕಾರ ವೈಷ್ಣೋದೇವಿ ಚಿತ್ರ ಹೊಂದರುವ ನಾಣ್ಯಗಳು ಅದೃಷ್ಟದ ಸಂಕೇತ ಎಂದು ನಂಬುತ್ತಾರೆ. ಇಂತಹ ನಾಣ್ಯಗಳನ್ನು ತಮ್ಮ ಪರ್ಸ್‌ ಅಥವಾ ವ್ಯಾಲೆಟ್‌ನಲ್ಲಿ ಇಟ್ಟುಕೊಳ್ಳುತ್ತಾರೆ. ಇಂತಹ ನಾಣ್ಯಗಳು ನಿಮ್ಮ ಬಳಿ ಇದ್ದರೆ ನಿಮಗೆ ಎಂದಿಗೂ ನಷ್ಟ ಸಂಭವಿಸುವುದಿಲ್ಲ ಎಂಬ ನಂಬಿಕೆ ಇದೆ. ಇದಿಷ್ಟೇ ಅಲ್ಲದೆ, ಈ ನಾಣ್ಯಗಳ ಬಗ್ಗೆ ಅದೆಷ್ಟೋ ನಂಬಿಗಳಿವೆ. ಹೀಗಾಗಿ ಜನರು ಈ ನಾಣ್ಯಗಳನ್ನು ಕೊಳ್ಳಲು ಮುಗಿಬೀಳುತ್ತಿದ್ದಾರೆ. ಹರಾಜು ಕೂಗುವ ಮೂಲಕ ಸ್ಪರ್ಧಾತ್ಮಕ ಬೆಲೆಯಲ್ಲಿ ಈ ನಾಣ್ಯಗಳನ್ನು ಕೊಳ್ಳುತ್ತಿದ್ದಾರೆ. ₹10 ಮತ್ತು ₹5 ನಾಣ್ಯಗಳೆರಡನ್ನೂ ಭಾರತ ಸರಕಾರ 2002ರಲ್ಲಿ ಬಿಡುಗಡೆ ಮಾಡಿತು. ನಾಣ್ಯಗಳಿಂದ ಲಕ್ಷ ಸಂಪಾದಿಸುವುದು ಹೇಗೆ? ನಿಮಗೀಗ ಕೇವಲ 10 ರೂಪಾಯಿ ನಾಣ್ಯದಿಂದ 10 ಲಕ್ಷ ಸಂಪಾದಿಸುವುದಾದರೂ ಹೇಗೆ ಎಂಬ ಪ್ರಶ್ನೆ ಬಂದಿರಬಹುದು. indiamart.com ವೆಬ್‌ಸೈಟ್‌ನಲ್ಲಿ ಇಂತಹ ನಾಣ್ಯಗಳನ್ನು ಕೊಳ್ಳಲು ಹಲವು ಜನ ಬಿಡ್ ಮಾಡುತ್ತಾರೆ. ನೀವು ಈ ವೆಬ್‌ಸೈಟ್‌ಗೆ ಭೇಟಿ ಮಾಡಿ ನೋಂದಣಿ ಮಾಡಿಕೊಳ್ಳಬೇಕು. ನಂತರ ನಿಮ್ಮ ಬಳಿ ಇರುವ ನಾಣ್ಯದ ಎರಡೂ ಮುಖಗಳ ಫೋಟೋ ಅಪ್‌ಲೋಡ್‌ ಮಾಡಬೇಕು. ನಂತರ ಜನರು ನಿಮ್ಮ ನಾಣ್ಯವನ್ನು ಕೊಳ್ಳಲು ಬಿಡ್‌ ಮಾಡುತ್ತಾರೆ. ಯಾರು ಹೆಚ್ಚು ಹಣಕ್ಕೆ ಬಿಡ್‌ ಮಾಡುತ್ತಾರೋ ಅವರಿಗೆ ನಾಣ್ಯ ಮಾರಬಹುದು. ಬ್ರಿಟಿಷರ ಕಾಲದ ನಾಣ್ಯಗಳಿಗೂ ಭಾರೀ ಬೇಡಿಕೆ ಇದೆ. ಅಂದಿನ ಕಾಲದ ನೋಟುಗಳಲ್ಲಿ ಅಶೋಕ ಚಕ್ರವನ್ನು ಮುದ್ರಿಸಲಾಗುತ್ತಿತ್ತು. ನೀವು ಇಂತಹ ನೋಟುಗಳನ್ನು ಹೊಂದಿದ್ದರೆ ಅದೃಷ್ಟ ನಿಮ್ಮನ್ನು ಹುಡುಕಿ ಬಂತೆಂದೇ ಅರ್ಥ. ಒಂದು ನೋಟಿ 20ರಿಂದ 25 ಸಾವಿರ ರೂಪಾಯಿಗೆ ವಿನಿಮಯವಾಗುತ್ತವೆ. ಮನೆಯಲ್ಲೇ ಕುಳಿತು ಮಾರಾಟ ಮಾಡುವ ಸೌಲಭ್ಯ ಇರುವುದು ಮತ್ತೊಂದು ಅನುಕೂಲವಾಗಿದೆ.