ಪಿಎಲ್‌ಎ ಯೋಜನೆ ಪರಿಣಾಮ, ಮೊಬೈಲ್‌ ರಫ್ತು 4,300 ಕೋಟಿ ರೂ.ಗೆ ಏರಿಕೆ

ಸರಕಾರ ಉತ್ಪಾದನೆ ಆಧರಿತ ಉತ್ತೇಜನ ನೀತಿ (ಪಿಎಲ್‌ಐ) ಯೋಜನೆಯನ್ನು ಜಾರಿಗೊಳಿಸಿರುವ ಬೆನ್ನಿಗೆ, ಭಾರತದ ಮೊಬೈಲ್‌ ಫೋನ್‌ ರಫ್ತು ಕಳೆದ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ 4,300 ಕೋಟಿ ರೂ.ಗೆ ಏರಿಕೆಯಾಗಿದೆ.

ಪಿಎಲ್‌ಎ ಯೋಜನೆ ಪರಿಣಾಮ, ಮೊಬೈಲ್‌ ರಫ್ತು 4,300 ಕೋಟಿ ರೂ.ಗೆ ಏರಿಕೆ
Linkup
ಹೊಸದಿಲ್ಲಿ: ಕೋವಿಡ್‌ ಎರಡನೆಯ ಅಲೆಯ ಹೊಡೆತದ ಹೊರತಾಗಿಯೂ ಭಾರತದ ಕಳೆದ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ 4,300 ಕೋಟಿ ರೂ.ಗೆ ಏರಿಕೆಯಾಗಿದೆ. ಭಾರತದಿಂದ ಮೊಬೈಲ್‌ ರಫ್ತು ವೇಗವಾಗಿ ವೃದ್ಧಿಸುತ್ತಿದೆ ಎಂದು ಇಂಡಿಯಾ ಸೆಲ್ಯುಲಾರ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ಅಸೋಸಿಯೇಶನ್‌ (ಐಸಿಇಎ) ಅಧ್ಯಕ್ಷ ಪಂಕಜ್‌ ಮೊಹಿಂದ್ರೋ ತಿಳಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,300 ಕೋಟಿ ರೂ. ಮೌಲ್ಯದ ಮೊಬೈಲ್‌ ರಫ್ತಾಗಿತ್ತು. ಸರಕಾರ ಉತ್ಪಾದನೆ ಆಧರಿತ ಉತ್ತೇಜನ ನೀತಿ (ಪಿಎಲ್‌ಐ) ಯೋಜನೆಯನ್ನು ಜಾರಿಗೊಳಿಸಿದ್ದು, ಇದು ಉತ್ಪಾದನೆ ಮತ್ತು ರಫ್ತು ಹೆಚ್ಚಳಕ್ಕೆ ಸಹಕರಿಸಿದೆ ಎಂದು ಅವರು ತಿಳಿಸಿದ್ದಾರೆ. ಎಲೆಕ್ಟ್ರಾನಿಕ್‌ ವಸ್ತುಗಳ ರಫ್ತು ಕೂಡ ಏಪ್ರಿಲ್‌-ಜೂನ್‌ ಅವಧಿಯಲ್ಲಿ ಶೇ.100ರಷ್ಟು ವೃದ್ಧಿಸಿದ್ದು, 20,000 ಕೋಟಿ ರೂ. ಮೌಲ್ಯವನ್ನು ಕ್ರಮಿಸಿದೆ ಎಂದರು. ಇದರ ಪರಿಣಾಮ 2021-22ರ ಏಪ್ರಿಲ್‌-ಜೂನ್‌ ಅವಧಿಯಲ್ಲಿ ಆಮದು ಮೌಲ್ಯ 600 ಕೋಟಿ ರೂ.ಗೆ ಇಳಿಕೆಯಾಗಿದೆ. 2020-21ರ ಇದೇ ಅವಧಿಯಲ್ಲಿ 3,100 ಕೋಟಿ ರೂ. ಮೌಲ್ಯದ ಆಮದು ನಡೆದಿತ್ತು ಎಂದು ವಿವರಿಸಿದರು. ಐಸಿಇಎ ವರದಿಯ ಪ್ರಕಾರ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಲ್ಯಾಪ್‌ಟಾಪ್‌ ಮತ್ತು ಟ್ಯಾಬ್ಲೆಟ್‌ಗಳ ಆಮದಿನಲ್ಲಿ ಶೇ.50 ಏರಿಕೆಯಾಗಿದ್ದು, 10,000 ಕೋಟಿ ರೂ.ಗೆ ವೃದ್ಧಿಸಿದೆ.