ಫಾಕ್ಸ್‌ಕಾನ್‌, ವಿಸ್ಟ್ರಾನ್‌ ಸೇರಿ 16 ಕಂಪನಿಗಳಿಂದ ಕೇಂದ್ರದ ಉತ್ಪಾದನೆ ಆಧರಿತ ಇನ್ಸೆಂಟಿವ್‌ ಯೋಜನೆಗೆ ಅರ್ಜಿ

ಐಫೋನ್‌ ಉತ್ಪಾದಕ ಫಾಕ್ಸ್‌ಕಾನ್‌, ವಿಸ್ಟ್ರಾನ್‌ ಹಾಗೂ ಕಂಪ್ಯೂಟರ್‌ ವಲಯದ ಡೆಲ್‌, ಲಾವಾ ಸೇರಿದಂತೆ 16 ಕಂಪನಿಗಳು ಕೇಂದ್ರ ಸರಕಾರದ ಉತ್ಪಾದನೆ ಆಧರಿತ ಇನ್ಸೆಂಟಿವ್‌ ಯೋಜನೆಗೆ ಸೇರಿಕೊಳ್ಳಲು ಅರ್ಜಿ ಸಲ್ಲಿಸಿವೆ.

ಫಾಕ್ಸ್‌ಕಾನ್‌, ವಿಸ್ಟ್ರಾನ್‌ ಸೇರಿ 16 ಕಂಪನಿಗಳಿಂದ ಕೇಂದ್ರದ ಉತ್ಪಾದನೆ ಆಧರಿತ ಇನ್ಸೆಂಟಿವ್‌ ಯೋಜನೆಗೆ ಅರ್ಜಿ
Linkup
ಹೊಸದಿಲ್ಲಿ: ಐಫೋನ್‌ ಉತ್ಪಾದಕ ಫಾಕ್ಸ್‌ಕಾನ್‌ ಮತ್ತು ವಿಸ್ಟ್ರಾನ್‌, ಕಂಪ್ಯೂಟರ್‌ ವಲಯದ ಡೆಲ್‌, ಲಾವಾ ಸೇರಿದಂತೆ 16 ಕಂಪನಿಗಳು ಕೇಂದ್ರ ಸರಕಾರದ ಉತ್ಪಾದನೆ ಆಧರಿತ ಇನ್ಸೆಂಟಿವ್‌ ಯೋಜನೆಗೆ () ಸೇರಿಕೊಳ್ಳಲು ಅರ್ಜಿ ಸಲ್ಲಿಸಿವೆ. ಈ ಯೋಜನೆಯಿಂದ ಅಂದಾಜು 37,500 ನೇರ ಉದ್ಯೋಗ ಸೃಷ್ಟಿಯಾಗಲಿದೆ. ಪಿಎಲ್‌ಐ ಯೋಜನೆಯ ಹಾರ್ಡ್‌ವೇರ್‌ ಉತ್ಪಾದನೆ ವಿಭಾಗದಲ್ಲಿ ಈ ಕಂಪನಿಗಳು ಅರ್ಜಿ ಸಲ್ಲಿಸಿವೆ. ಮೇಕ್‌ ಇನ್‌ ಇಂಡಿಯಾ ಅಭಿಯಾನಕ್ಕೆ ಇದು ಪುಷ್ಠಿ ನೀಡಲಿದೆ. ಸ್ಥಳೀಯ ಉದ್ಯೋಗ ಸೃಷ್ಟಿಗೂ ಕಾರಣವಾಗಲಿದೆ.

ಈ ಕಂಪನಿಗಳು 1.35 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ ಉತ್ಪಾದನೆಗೆ ಉದ್ದೇಶಿಸಿವೆ. ಡಿಕ್ಸಾನ್‌, ಇನ್ಫೋಪವರ್‌, ಮೈಕ್ರೊಮ್ಯಾಕ್ಸ್‌, ಸಿರ್ಮಾ, ಆರ್ಬಿಕ್‌, ನಿಯೊಲಿಂಕ್‌, ಆಪ್ಟಿಮಸ್‌, ನೆಟ್‌ವೆಬ್‌, ವಿವಿಡಿಎನ್‌, ಸ್ಮೈಲ್‌ ಎಲೆಕ್ಟ್ರಾನಿಕ್ಸ್‌, ಪನಾಚೆ ಡಿಜಿಲೈಫ್‌, ಎಚ್‌ಎಲ್‌ಬಿಎಸ್‌, ಆರ್‌ಡಿಪಿ ವರ್ಕ್ ಸ್ಟೇಶನ್ಸ್‌ ಕೂಡ ಅರ್ಜಿ ಸಲ್ಲಿಸಿವೆ.