ನಿಮ್ಮ ವಾಹನಕ್ಕೆ RTO ಫ್ಯಾನ್ಸಿ ನಂಬರ್ ಬೇಕಾ..? ಆಗಸ್ಟ್‌ 11ಕ್ಕೆ ನಡೆಯಲಿದೆ ಹರಾಜು

ಹಲವು ಆಕರ್ಷಕ ನೋಂದಣಿ ಸಂಖ್ಯೆಗಳನ್ನು ಹರಾಜಿನಲ್ಲಿ ಪಡೆಯಬಹುದಾಗಿದೆ. ಅಲ್ಲದೇ ಇತರೆ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಉಳಿದಿರುವ ಫ್ಯಾನ್ಸಿ ನಂಬರ್‌ಗಳನ್ನೂ ಸಹ ಇಲ್ಲಿ ಹರಾಜು ಹಾಕಲಾಗುತ್ತದೆ.

ನಿಮ್ಮ ವಾಹನಕ್ಕೆ RTO ಫ್ಯಾನ್ಸಿ ನಂಬರ್ ಬೇಕಾ..? ಆಗಸ್ಟ್‌ 11ಕ್ಕೆ ನಡೆಯಲಿದೆ ಹರಾಜು
Linkup
: ಸಾರಿಗೆ ಇಲಾಖೆಯು ಕೆಎ 05, ಎನ್‌ಡಿ (ಜಯನಗರ ) ಮುಂಗಡ ಶ್ರೇಣಿಯ ಆಕರ್ಷಕ ನೋಂದಣಿ ಸಂಖ್ಯೆಗಳನ್ನು ಆಗಸ್ಟ್ 11ರಂದು ಹಾಕಲಿದೆ. ಹರಾಜು ಪ್ರಕ್ರಿಯೆಯು ಮಧ್ಯಾಹ್ನ 12.30ಕ್ಕೆ ಶಾಂತಿ ನಗರದ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ. ಆಯ್ಕೆಯ ನೋಂದಣಿ ಸಂಖ್ಯೆ (ಫ್ಯಾನ್ಸಿ ನಂಬರ್‌) ಪಡೆಯಲು ಇಚ್ಛಿಸುವವರು ವಾಹನ ಮಾರಾಟ ಪತ್ರ (ನಮೂನೆU-21) ಅಥವಾ ಇನ್‌ವಾಯ್ಸ್‌ ಪ್ರತಿ, ಇಲ್ಲವೇ ವಾಹನ ಖರೀದಿ ಬುಕ್ಕಿಂಗ್‌ ರಸೀದಿ, ವಿಳಾಸದ ದಾಖಲೆಯೊಂದಿಗೆ ಹರಾಜಿನಲ್ಲಿ ಭಾಗವಹಿಸಹುದು. ಫ್ಯಾನ್ಸಿ ನಂಬರ್‌ ಪಡೆಯಲು ನಿಗದಿತ 75 ಸಾವಿರ ರೂ. ಶುಲ್ಕದ ಡಿಡಿಯನ್ನು ರಾಜ್ಯ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಸಲ್ಲಿಸಬೇಕು. ನಿಯಮಾನುಸಾರ 75 ಸಾವಿರ ರೂ. ಶುಲ್ಕದ ಡಿಡಿ ಸಲ್ಲಿಸದ ಅರ್ಜಿದಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. 1, 123, 1234, 10, 11, 111, 1111, 100, 1000, 9, 99, 90, 900, 909, 9999 ಸೇರಿದಂತೆ ಹಲವು ಆಕರ್ಷಕ ನೋಂದಣಿ ಸಂಖ್ಯೆಗಳನ್ನು ಹರಾಜಿನಲ್ಲಿ ಪಡೆಯಬಹುದಾಗಿದೆ. ಅಲ್ಲದೇ ಇತರೆ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಉಳಿದಿರುವ ಫ್ಯಾನ್ಸಿ ನಂಬರ್‌ಗಳನ್ನೂ ಸಹ ಇಲ್ಲಿ ಹರಾಜು ಹಾಕಲಾಗುತ್ತದೆ.