ಆದಾಯ ತೆರಿಗೆ ಇಲಾಖೆ ಆದೇಶದ ವಿರುದ್ಧ ಹೋದ ನಟ ಸೂರ್ಯಗೆ ಕೊನೆಗೂ ಏನಾಯ್ತು?

ತಮಿಳು ನಟ ಸೂರ್ಯ ಅವರು ತೆರಿಗೆ ಕಟ್ಟಬೇಕು ಎಂದು ಆದಾಯ ಇಲಾಖೆ ಆದೇಶ ನೀಡಿತ್ತು. ಆ ಆದೇಶದಲ್ಲಿ ವಿನಾಯಿತಿ ನೀಡಬೇಕು ಎಂದು ಸೂರ್ಯ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆನಂತರದಲ್ಲಿ ಏನಾಗಿದೆ?

ಆದಾಯ ತೆರಿಗೆ ಇಲಾಖೆ ಆದೇಶದ ವಿರುದ್ಧ ಹೋದ ನಟ ಸೂರ್ಯಗೆ ಕೊನೆಗೂ ಏನಾಯ್ತು?
Linkup
ಖ್ಯಾತ ತಮಿಳು ನಟ ಅವರು 3 ಕೋಟಿ ರೂಪಾಯಿ ತೆರಿಗೆ ಕಟ್ಟುವಂತೆ ಆದಾಯ ತೆರಿಗೆ ಇಲಾಖೆ ಆದೇಶ ನೀಡಿತ್ತು. ಈ ತೆರಿಗೆಯಲ್ಲಿ ಸ್ವಲ್ಪ ವಿನಾಯಿತಿ ನೀಡಿ ಎಂದು ನಟ ಸೂರ್ಯ ಅವರು ಮದ್ರಾಸ್ ಮೊರೆ ಹೋಗಿದ್ದರು. ಸೂರ್ಯ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಅರ್ಜಿ ತಿರಸ್ಕಾರ 2007-08, 2008-09ರಲ್ಲಿನ ಆಸ್ತಿಯಲ್ಲಿ ಸೂರ್ಯ ಅವರು 3,11,96000 ರೂಪಾಯಿಯನ್ನು ಕಟ್ಟಬೇಕು ಎಂದು ಆದಾಯ ತೆರಿಗೆ ಇಲಾಖೆ 2011ರಲ್ಲಿ ಹೇಳಿತ್ತು. ಆದಾಯ ತೆರಿಗೆ ಇಲಾಖೆಯ ವಾದ ಕೇಳಿದ ನಂತರದಲ್ಲಿ ನ್ಯಾಯಾಧೀಶ ಸುಬ್ರಹ್ಮಣಿಯಮ್ ಅವರು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಮೂರು ವರ್ಷಗಳ ನಂತರದಲ್ಲಿ ಮೇಲ್ಮನವಿ ಸಲ್ಲಿಸಿದಲ್ಲಿ, ವಿನಾಯಿತಿ ನೀಡಬೇಕು ಎಂದು ಸೂರ್ಯ ಅರ್ಜಿಯಲ್ಲಿ ತಿಳಿಸಿದ್ದಾರೆ. ಆದರೆ ಆದಾಯ ಇಲಾಖೆಯು, ಬಡ್ಡಿ ವಿನಾಯಿತಿ ನೀಡಲು ಸೂರ್ಯ ಸಹಕರಿಸುತ್ತಿಲ್ಲ ಎಂದು ಹೇಳಿದೆ. ಬಡ್ಡಿ ಮರುಪಾವತಿ ಮಾಡಬೇಕಿದೆ ಸೂರ್ಯ ಒಡೆತನದ 2ಡಿ ಎಂಟರ್‌ಟೇನ್‌ಮೆಂಟ್ ಸಿಇಒ ರಾಜ್‌ಶೇಖರ್ ಪಾಂಡಿಯನ್ ಮಾತನಾಡಿ, "ತೆರಿಗೆ ಹಾಗೂ ಬಡ್ಡಿಯನ್ನು ಪಾವತಿಸಲಾಗಿದೆ, ಸರಿಹೊಂದಿಸಲಾಗಿದೆ. ನಮ್ಮ ಕಡೆಯಿಂದ ಇನ್ನೇನೂ ಪಾವತಿ ಮಾಡಬೇಕಾಗಿಲ್ಲ. ಮೂಲ ಆದೇಶದ ಸ್ವೀಕೃತಿ ಮತ್ತು ಪರಿಶೀಲನೆಯ ಮೇಲೆ ಮೇಲ್ಮನವಿಗೆ ಆದ್ಯತೆ ನೀಡಲಾಗುತ್ತದೆ. ಇಲಾಖೆಯಿಂದ ಬಡ್ಡಿ ಮರುಪಾವತಿ ಆಗಬೇಕಿದೆ" ಎಂದು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. 2010ರಲ್ಲಿ ಸೂರ್ಯ ಹಾಗೂ ಅವರ ಆತ್ಮೀಯರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿತ್ತು. ಸಾಲು ಸಾಲು ಸಿನಿಮಾಗಳಲ್ಲಿ ಸೂರ್ಯ ಬ್ಯುಸಿ ಕನ್ನಡಿಗ ಕ್ಯಾಪ್ಟನ್ ಜಿಆರ್ ಗೋಪಿನಾಥ್ ಜೀವನ ಕಥೆ ಆಧರಿಸಿದ, 'ಸೂರರೈ ಪೊಟ್ರು' ಸಿನಿಮಾದ ಹಿಂದಿ ರಿಮೇಕ್ ಹಕ್ಕನ್ನು ಸಹನಿರ್ಮಾಪಕರಿಗೆ ತಿಳಿಸದೆ ಸೂರ್ಯ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. 'ರಾಕೆಟ್ರಿ', 'ಜೈ ಭೀಮ್', 'Etharkkum Thunindhavan' ಸಿನಿಮಾಗಳಲ್ಲಿ ಸೂರ್ಯ ನಟಿಸುತ್ತಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ಹೊಸ ಸಿನಿಮಾಗಳ ಪೋಸ್ಟರ್ ರಿಲೀಸ್ ಆಗಿತ್ತು.