ನಟಿ ಕಾಜಲ್ ಅಗರ್ವಾಲ್ ಬಚ್ಚಿಟ್ಟ ವಿಷಯವನ್ನು ರಿವೀಲ್ ಮಾಡಿದ ಪತಿ ಗೌತಮ್ ಕಿಚಲು

'ಮಗಧೀರ' ಸಿನಿಮಾ ನಟಿ ಕಾಜಲ್ ಅಗರ್ವಾಲ್ ತಾಯಿಯಾಗುತ್ತಿರುವ ವಿಚಾರವನ್ನು ಅವರ ಪತಿ ಗೌತಮ್ ಕಿಚಲು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಹೇಳಿದ್ದಾರೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ನಟಿ ಕಾಜಲ್ ಅಗರ್ವಾಲ್ ಬಚ್ಚಿಟ್ಟ ವಿಷಯವನ್ನು ರಿವೀಲ್ ಮಾಡಿದ ಪತಿ ಗೌತಮ್ ಕಿಚಲು
Linkup
'ಮಗಧೀರ' ಸಿನಿಮಾ ಕಾಜಲ್ ಅಗರ್ವಾಲ್ ಅವರು ತಾಯಿಯಾಗುತ್ತಿದ್ದಾರಂತೆ. ಈ ವಿಷಯವನ್ನು ಅವರು ಮುಚ್ಚಿಟ್ಟರೂ ಕೂಡ, ಪತಿ ಗೌತಮ್ ಅವರು ಹೊಸ ವರ್ಷದ ಶುಭಾಶಯದ ಜೊತೆಗೆ ರಿವೀಲ್ ಮಾಡಿದ್ದಾರೆ. 2022ರನ್ನು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಕಾಜಲ್, ಗೌತಮ್ ಹೇಳಿದ್ದೇನು? ಪತಿಯ ಜೊತೆಗಿನ ಫೋಟೋ ಹಂಚಿಕೊಂಡಿರುವ ಗೌತಮ್ ಅವರು, "2022ರನ್ನು ಎದುರು ನೋಡುತ್ತಿದ್ದೇವೆ" ಎಂದು ಕ್ಯಾಪ್ಶನ್ ನೀಡಿರುವ ಅವರು ಗರ್ಭಿಣಿ ಇಮೋಜಿ ಹಂಚಿಕೊಂಡಿದ್ದಾರೆ. ನಟಿ ಅವರು "ಹೊಸ ಆರಂಭವನ್ನು ಎದುರು ನೋಡುತ್ತಿದ್ದೇವೆ. 2021ಕ್ಕೆ ಧನ್ಯವಾದಗಳು, ಜ್ಞಾನ, ಪ್ರೀತಿ, ಕಾಳಜಿ ಮೂಲಕ 2022 ಬರಮಾಡಿಕೊಳ್ಳೋಣ" ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಕಾಜಲ್ ಅಗರ್ವಾಲ್ ಮದುವೆಯಲ್ಲಿ ಕಲಾವಿದರ ಗೈರು ಮುಂಬೈನ ತಾಜ್ ಹೋಟೆಲ್‌ನಲ್ಲಿ ಬಹುಕಾಲದ ಗೆಳೆಯ ಗೌತಮ್‌ ಕಿಚಲು ಅವರನ್ನು ಕಾಜಲ್ ಮದುವೆಯಾಗಿದ್ದಾರೆ. ಕೊರೊನಾ ಕಾರಣದಿಂದ ಕುಟುಂಬಸ್ಥರ ಮಧ್ಯೆ ಇವರಿಬ್ಬರ ವಿವಾಹ ನಡೆದಿತ್ತು. ದಕ್ಷಿಣ ಭಾರತದ ಈ ಖ್ಯಾತ ನಟಿಯ ಮದುವೆಯಲ್ಲಿ ಕಲಾವಿದರು ಭಾಗವಹಿಸಿರಲಿಲ್ಲ, ಆ ನಂತರ ಆರತಕ್ಷತೆ ಕಾರ್ಯಕ್ರಮ ಕೂಡ ಇಟ್ಟುಕೊಂಡಿರಲಿಲ್ಲ. ಮದುವೆ ನಂತರದಲ್ಲಿ ಕಾಜಲ್ ದಂಪತಿ ಮಾಲ್ಡೀವ್ಸ್‌ಗೆ ಹನಿಮೂನ್‌ಗೆ ತೆರಳಿತ್ತು, ಅಲ್ಲಿನ ಫೋಟೋಗಳನ್ನು ಕಾಜಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಗೌತಮ್ ಅವರು ಕಾಜಲ್‌ಗೆ ಪ್ರೇಮ ನಿವೇದನೆ ಮಾಡಿದ್ದು ಹೇಗೆ? "ತುಂಬ ಭಾವನಾತ್ಮಕ, ಹೃದಯಸ್ಪರ್ಶಿ ಸಂಭಾಷಣೆಯ ಮೂಲಕ ಗೌತಮ್ ನನಗೆ ಪ್ರಪೋಸ್‌ ಮಾಡಿದ್ದರು. ಅವರ ಭಾವನೆಗಳ ಬಗ್ಗೆ ಅವರಿಗೆ ನಿಖರತೆ, ಸ್ಪಷ್ಟತೆ ಇತ್ತು. ಅವರ ಜೊತೆ ಬದುಕುವ ಬಗ್ಗೆ ನನಗೂ ಭರವಸೆ ಮೂಡಿತು" ಎಂದು ಪ್ರೇಮ ನಿವೇದನೆ ಮಾಡಿದ್ದ ಕುರಿತು ಕಾಜಲ್ ಹೇಳಿದ್ದರು. ಕಾಜಲ್ ಈಗ ಗರ್ಭಿಣಿ ಆರಂಭದಲ್ಲಿ ಗೌತಮ್‌ ಕಿಚಲು ಜೊತೆ ಕಾಜಲ್ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದಲೂ ಹರಿದಾಡುತ್ತಿತ್ತಾದರೂ ಅದಕ್ಕೆ ಕಾಜಲ್‌ ಪ್ರತಿಕ್ರಿಯೆ ನೀಡಿರಲಿಲ್ಲ. ಮದುವೆ ಇನ್ನೇನು ಹತ್ತಿರ ಇದೆ ಎಂದಾಗ ಕಾಜಲ್ ಅಧಿಕೃತ ಹೇಳಿಕೆ ನೀಡಿದ್ದರು. ಕೆಲ ತಿಂಗಳುಗಳಿಂದ ಶೂಟಿಂಗ್, ನಟನೆಯಿಂದ ದೂರ ಇರುವ ಕಾಜಲ್ ಗರ್ಭಿಣಿ ಎಂದು ಅನೇಕ ಬಾರಿ ಗಾಸಿಪ್‌ಗಳು ಹರಡಿತ್ತು, ಅದಕ್ಕೆ ಕಾಜಲ್ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಅವರ ಪತಿ ಈ ವಿಷಯವನ್ನು ಅಧಿಕೃತಪಡಿಸಿದ್ದಾರೆ. ಕಾಜಲ್ ಅಗರ್ವಾಲ್ ನಟನೆಯ ರಿಲೀಸ್ ಆಗಬೇಕಿರುವ ಸಿನಿಮಾಗಳು ಯಾವುದು? ಚಿರಂಜೀವಿ ಜೊತೆ 'ಆಚಾರ್ಯ' ಸಿನಿಮಾದಲ್ಲಿ ಕಾಜಲ್ ನಟಿಸಬೇಕಿತ್ತು, ಆದರೆ ಮದುವೆ ಕಾರಣಕ್ಕೆ ಈ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನಲಾಗಿತ್ತು. ಕಾಜಲ್ ನಟನೆಯ 'ಮೋಸಗಾಳ್ಳು' ಸಿನಿಮಾ ರಿಲೀಸ್ ಆಗಿದೆ. ಕಮಲ್ ಹಾಸನ್ ಜೊತೆ 'ಇಂಡಿಯನ್ 2', 'ಮುಂಬೈ ಸಾಗಾ', , 'ಹೇ ಸಿನಾಮಿಕಾ' ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. 2021ರಲ್ಲಿ ಕಾಜಲ್ ನಟನೆಯ ಯಾವ ಸಿನಿಮಾಗಳೂ ರಿಲೀಸ್ ಆಗಿಲ್ಲ. ಆದರೆ Live Telecast ಎಂಬ ವೆಬ್ ಸಿರೀಸ್ ತೆರೆ ಕಂಡಿತ್ತು. ಸ್ಯಾಂಡಲ್‌ವುಡ್ ನಟ ರಮೇಶ್ ಅರವಿಂದ್ ನಿರ್ದೇಶನದ 'ಪ್ಯಾರೀಸ್ ಪ್ಯಾರೀಸ್' ಸಿನಿಮಾದಲ್ಲೂ ಕಾಜಲ್‌ ಬಣ್ಣ ಹಚ್ಚಿದ್ದಾರೆ. ಈಗಾಗಲೇ ತೆಲುಗಿನ ಸ್ಟಾರ್ ನಟರ ಜೊತೆ ಕಾಜಲ್ ತೆರೆ ಹಂಚಿಕೊಂಡಿದ್ದಾರೆ.