'ಬ್ಲಾಕ್‌ಬಸ್ಟರ್‌ ಡೈರೆಕ್ಟರ್‌' ಪ್ರಶಾಂತ್‌ ನೀಲ್‌ಗೆ ವಿಶ್‌ ಮಾಡಿದ ಪ್ರಭಾಸ್‌ & ಜೂ. ಎನ್‌ಟಿಆರ್

'ಉಗ್ರಂ'ನಿಂದ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿದ ಪ್ರಶಾಂತ್ ನೀಲ್, 2ನೇ ಸಿನಿಮಾ ಕೆಜಿಎಫ್ ಮಾಡಿದ ಮೇಲೆ ಇಡೀ ದೇಶವೇ ತಿರುಗಿ ನೋಡುವಂತಹ ನಿರ್ದೇಶಕರಾಗಿ ಬೆಳೆದರು. ಈಗ ಅವರ ಹೊಸ ಸಿನಿಮಾಗಳ ಮೇಲೆ ಎಲ್ಲರ ಕಣ್ಣು ಇದೆ. ಅಂದಹಾಗೆ, ಇಂದು ಅವರಿಗೆ ಜನ್ಮದಿನದ ಸಂಭ್ರಮ.

'ಬ್ಲಾಕ್‌ಬಸ್ಟರ್‌ ಡೈರೆಕ್ಟರ್‌' ಪ್ರಶಾಂತ್‌ ನೀಲ್‌ಗೆ ವಿಶ್‌ ಮಾಡಿದ ಪ್ರಭಾಸ್‌ & ಜೂ. ಎನ್‌ಟಿಆರ್
Linkup
ಪ್ರಶಾಂತ್‌ ನೀಲ್- ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಮೇಲಕ್ಕೆ ಕೊಂಡೊಯ್ದ ನಿರ್ದೇಶಕ ಎಂದರೆ ತಪ್ಪಾಗಲಾರದು. ತಾವು ನಿರ್ದೇಶಿಸಿದ 2ನೇ ಸಿನಿಮಾ 'ಕೆಜಿಎಫ್‌' ಮೂಲಕ ಕನ್ನಡ ಚಿತ್ರೋದ್ಯಮದತ್ತ ಅಕ್ಕಪಕ್ಕದ ಭಾಷೆಗಳ ಚಿತ್ರರಂಗಗಳು ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್. ಇದೀಗ 'ಕೆಜಿಎಫ್‌: ಚಾಪ್ಟರ್ 2' ಸಿದ್ಧಗೊಳಿಸಿ, ಕೋಟ್ಯಂತರ ಸಿನಿಪ್ರಿಯರನ್ನು ತುದಿಗಾಲ ಮೇಲೆ ನಿಲ್ಲಿಸಿದ್ದಾರೆ ಈ ಫಿಲ್ಮ್ ಮೇಕರ್‌. ಇಂತಹ ಬ್ಲಾಕ್‌ಬಸ್ಟರ್ ಡೈರೆಕ್ಟರ್‌ಗೆ ಇಂದು (ಜೂ.4) ಹುಟ್ಟುಹಬ್ಬದ ಸಂಭ್ರಮ. ವಿಶೇಷವೆಂದರೆ, ಹುಟ್ಟುಹಬ್ಬಕ್ಕೆ ಪಕ್ಕದ ರಾಜ್ಯಗಳ ಸ್ಟಾರ್ ನಟರು ಕೂಡ ವಿಶ್ ಮಾಡಿದ್ದಾರೆ. ಪ್ರಶಾಂತ್ ನೀಲ್‌ಗೆ ಪ್ರಭಾಸ್‌ ವಿಶ್ 'ಪ್ಯಾನ್ ಇಂಡಿಯಾ ಸ್ಟಾರ್' ಪ್ರಭಾಸ್‌ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಿದ್ದಾರೆ. ಹೊಂಬಾಳೆ ಸಂಸ್ಥೆಯೇ ಈ ಸಿನಿಮಾಗೆ ಹಣ ಹಾಕುತ್ತಿದೆ. 'ಸಲಾರ್‌' ಶೀರ್ಷಿಕೆಯ ಈ ಸಿನಿಮಾದಿಂದ ಮೊದಲ ಬಾರಿಗೆ ಪ್ರಭಾಸ್‌ - ಪ್ರಶಾಂತ್ ನೀಲ್ ಒಂದಾಗಿದ್ದಾರೆ. ಇಂದು ನೀಲ್ ಜನ್ಮದಿನ ಇರುವುದರಿಂದ ಶುಭಾಶಯಗಳನ್ನು ತಿಳಿಸಿದ್ದಾರೆ ಪ್ರಭಾಸ್‌. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶಾಂತ್ ನೀಲ್ ಅವರ ಫೋಟೋವನ್ನು ಶೇರ್ ಮಾಡಿಕೊಂಡಿರುವ , 'ಜನ್ಮದಿನದ ಶುಭಾಶಯಗಳು ಪ್ರಶಾಂತ್ ನೀಲ್. ನಿಮ್ಮ ದಿನ ಉತ್ತಮವಾಗಿರಲಿ' ಎಂದು ಹಾರೈಸಿದ್ದಾರೆ. ಸದ್ಯ 'ಸಲಾರ್‌'ಗೆ ಮೊದಲ ಹಂತದ ಶೂಟಿಂಗ್ ಮುಕ್ತಾಯವಾಗಿದೆ. ಆ ದಿನಕ್ಕಾಗಿ ಕಾಯುತ್ತಿರುವ ಎನ್‌ಟಿಆರ್‌ ಪ್ರಭಾಸ್‌ರಂತಹ ಪ್ಯಾನ್ ಇಂಡಿಯಾ ಸ್ಟಾರ್ ಜೊತೆಗಿನ ಸಿನಿಮಾ ಮುಗಿಯುತ್ತಿದ್ದಂತೆಯೇ, ತೆಲುಗಿನ ಮತ್ತೋರ್ವ ಸ್ಟಾರ್ ನಟ ಜೂ.ಎನ್‌ಟಿಆರ್ ಜೊತೆಗೆ ಪ್ರಶಾಂತ್ ನೀಲ್ ಸಿನಿಮಾ ಮಾಡಲಿದ್ದಾರೆ. ಆ ಹಿನ್ನೆಲೆಯಲ್ಲಿ ಜೂ.ಎನ್‌ಟಿಆರ್ ಕೂಡ ಪ್ರಶಾಂತ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. 'ಜನ್ಮದಿನದ ಶುಭಾಶಯಗಳು ಸಹೋದರ ಪ್ರಶಾಂತ್ ನೀಲ್‌. ಎಂದಿನಂತೆಯೇ ನೀವು ಅದ್ಭುತವಾಗಿರಿ. ನಿಮ್ಮ ಸೈನ್ಯವನ್ನು ಸೇರಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಆ ದೇವರು ಒಳ್ಳೆಯದು ಮಾಡಲಿ' ಎಂದು ಟ್ವೀಟ್ ಮೂಲಕ ಹಾರೈಸಿದ್ದಾರೆ. ಅಂದಹಾಗೆ, ಪ್ರಶಾಂತ್ ನೀಲ್-ಎನ್‌ಟಿಆರ್ ಕಾಂಬಿನೇಷನ್‌ನ ಸಿನಿಮಾಕ್ಕೆ ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ ಹಣ ಹಾಕಲಿದೆ. ಇನ್ನು, ಪ್ರಶಾಂತ್‌ಗೆ ತೆಲುಗಿನ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಶುಭಾಶಯ ತಿಳಿಸಿವೆ. ಮೈತ್ರಿ ಮೂವೀ ಮೇಕರ್ಸ್, 'ಆರ್‌ಆರ್‌ಆರ್' ಸಿನಿಮಾ ನಿರ್ಮಾಣ ಮಾಡುತ್ತಿರುವ ಡಿವಿವಿ ಎಂಟರ್‌ಟೇನ್‌ಮೆಂಟ್ ಸಂಸ್ಥೆ, ದಿಲ್ ರಾಜು ಅವರು ಶ್ರೀವೆಂಕಟೇಶ್ವರ ಕ್ರಿಯೇಷನ್ಸ್, ಕನ್ನಡದ ಹೊಂಬಾಳೆ ಫಿಲ್ಮ್ಸ್‌ ಸೇರಿದಂತೆ ಅನೇಕರು ಪ್ರಶಾಂತ್‌ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿವೆ.