ಅಣ್ಣಾವ್ರ ಅಪರೂಪದ ಫೋಟೋ ಹಂಚಿಕೊಂಡ ಪುನೀತ್; 'ಆ ಮಧುರ ಕ್ಷಣಗಳು ಇಂದಿಗೂ ಸವಿನೆನಪು' ಎಂದ ಅಪ್ಪು

'ನಟಸಾರ್ವಭೌಮ', 'ವರನಟ' ಡಾ. ರಾಜ್‌ಕುಮಾರ್ ಅವರ ಅಪರೂಪದ ಫೋಟೋವೊಂದನ್ನು ಅವರ ಪುತ್ರ, 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅವರು ಹಂಚಿಕೊಂಡಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ ಓದಿ.

ಅಣ್ಣಾವ್ರ ಅಪರೂಪದ ಫೋಟೋ ಹಂಚಿಕೊಂಡ ಪುನೀತ್; 'ಆ ಮಧುರ ಕ್ಷಣಗಳು ಇಂದಿಗೂ ಸವಿನೆನಪು' ಎಂದ ಅಪ್ಪು
Linkup
ಕನ್ನಡಿಗರ ಪಾಲಿನ ಆರಾಧ್ಯ ದೈವ ಎನಿಸಿಕೊಂಡವರು . ನಮ್ಮೊಂದಿಗೆ ಭೌತಿಕವಾಗಿ ಅಣ್ಣಾವ್ರ ಇಲ್ಲವಾಗಿ ಹಲವು ವರ್ಷಗಳೇ ಉರುಳಿವೆ. ಆದರೆ, ಅವರ ನೆನಪು ಮಾತ್ರ ಎಂದಿಗೂ ಹಸಿರು. ಅವರನ್ನು ನೆನಪು ಮಾಡಿಕೊಳ್ಳದ ದಿನಗಳೇ ಇಲ್ಲ ಎನ್ನಬಹುದು. ಅಂದಹಾಗೆ, ಈಗ ಅಣ್ಣಾವ್ರ ಬಗ್ಗೆ ಮಾತನಾಡುತ್ತಿರುವುದಕ್ಕೆ ಒಂದು ಕಾರಣ ಇದೆ. ಅದೇನೆಂದರೆ, 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ () ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಅದೀಗ ಸಖತ್ ವೈರಲ್ ಆಗುತ್ತಿದೆ. 33 ವರ್ಷಗಳ ಹಿಂದಿನ ಅಣ್ಣಾವ್ರ ಫೋಟೋತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ 33 ವರ್ಷ ಹಿಂದಿನ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ ಅಪ್ಪು. ಅದು ಅದು 1988ರಲ್ಲಿ ಕ್ಲಿಕ್ ಮಾಡಿದ ಫೋಟೋ. ಅಣ್ಣಾವ್ರು ಅಮೆರಿಕ ಪ್ರವಾಸದಲ್ಲಿ ಇದ್ದಾಗ, ಈ ಫೋಟೋವನ್ನು ತೆಗೆಯಲಾಗಿದೆ. ಆ ವೇಳೆ ಡಾ. ರಾಜ್‌ಕುಮಾರ್ () ಅವರು ವಿಶ್ವವಿಖ್ಯಾತ ನಯಾಗರ ಫಾಲ್ಸ್ ವೀಕ್ಷಣೆ ಮಾಡುತ್ತಿದ್ದರು. ಈ ವಿಶೇಷವಾದ ಫೋಟೋವನ್ನು ಹಂಚಿಕೊಂಡ ಪುನೀತ್, 'ಅಪ್ಪಾಜಿಯವರ ಜೊತೆ 1988 ರಲ್ಲಿ ನಯಾಗರ ಫಾಲ್ಸ್ ನಲ್ಲಿ ಕಳೆದ ಆ ಮಧುರ ಕ್ಷಣಗಳು, ಇಂದಿಗೂ ಸವಿನೆನಪು' ಎಂದು ಬರೆದುಕೊಂಡಿದ್ದಾರೆ. ಈ ಫೋಟೋವನ್ನು ಸಾವಿರಾರು ಮಂದಿ ಲೈಕ್ ಮಾಡಿ, ರೀ-ಟ್ವೀಟ್ ಮಾಡುತ್ತಿದ್ದಾರೆ. ಫೋಟೋ ನೋಡಿದ ಫ್ಯಾನ್ಸ್ ಹೇಳಿದ್ದೇನು?'ನಯಾಗರ ಜಲಪಾತಕ್ಕೆ ಸಮನಾದುದು ಯಾವುದೂ ಇಲ್ಲ... ಹಾಗೆಯೇ ಅಣ್ಣಾವ್ರಿಗೆ ಸಮನಾದ ನಟ ಯಾರೂ ಇಲ್ಲ...', 'ಅಪ-ಮಗ ಸಂಭಂದ ಅಂದ್ರೆ, ನಿಮ್ಮ ಹಾಗೂ ರಾಜ್‌ಕುಮಾರ್ ಅವರ ಸಂಬಂಧ ಹಾಗೇ ಇರಬೇಕು. ಇದು ಜಗ ಮೆಚ್ಚಿದ ಅಪ್ಪ-ಮಗನ ಸಂಬಂಧ..', 'ಅಪ್ಪಾಜಿ ಅವರ ಹೆಸರು ಹೇಳುವುದೇ ನಮ್ಮ ಭಾಗ್ಯ.. ಅವರ ಮಗನಾಗಿ ಹುಟ್ಟಿದ್ದೀರಾ ಅಂದ್ರೆ, ನೀವು ಅದಕ್ಕೆ ಸರ್ವ ಗುಣದಲ್ಲೂ ಅರ್ಹ ರಾಗಿದ್ದೀರಾ.. ಅದಕ್ಕೆ ದೇವರು ನಿಮ್ಮನ್ನು ಆಯ್ಕೆ ಮಾಡಿದ್ದಾನೆ.. ಅದಕ್ಕೆ ತಕ್ಕ ಹಾಗೆ ನೀವು ಅವರ ಹೆಸರನ್ನು ಉಳಿಸಿ,ಬೆಳೆಸುತ್ತಾ ಇದ್ದೀರಿ ಅನ್ನುವುದೇ ನಮಗೆಲ್ಲ ಹೆಮ್ಮೆ..' ಎಂದೆಲ್ಲ ಫ್ಯಾನ್ಸ್ ಈ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ಅಪ್ಪು ಫುಲ್‌ ಬ್ಯುಸಿಸದ್ಯ ಸಿನಿಮಾ ವಿಚಾರಕ್ಕೆ ಬರುವುದಾದರೆ, ಪುನೀತ್ ಸಖತ್ ಬ್ಯುಸಿ ಆಗಿದ್ದಾರೆ. 'ಜೇಮ್ಸ್' ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ, ಡಾರ್ಲಿಂಗ್ ಕೃಷ್ಣ ಹೀರೋ ಆಗಿರವ 'ಲಕ್ಕಿ ಮ್ಯಾನ್' ಸಿನಿಮಾದಲ್ಲಿ ಒಂದು ವಿಶೇಷ ಅತಿಥಿ ಪಾತ್ರ ಮಾಡಿದ್ದಾರೆ. ನಿರ್ದೇಶಕ ಪವನ್‌ ಕುಮಾರ್ ಜೊತೆಗಿನ 'ದ್ವಿತ್ವ' ಶೂಟಿಂಗ್ ಆರಂಭಗೊಳ್ಳಬೇಕಿದೆ. ಇದು ಹೊಂಬಾಳೆ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಪುನೀತ್ ನಟನೆಯ 4ನೇ ಸಿನಿಮಾವಾಗಿದ್ದು, ಶೀಘ್ರದಲ್ಲೇ ಅದೇ ಬ್ಯಾನರ್‌ನಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ಸಂತೋಷ್ ಆನಂದ್‌ರಾಮ್ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಜೊತೆಗೆ ನಿರ್ದೇಶಕರಾದ ದಿನಕರ್ ತೂಗುದೀಪ ಮತ್ತು ಎಸ್‌. ಕೃಷ್ಣ ಅವರ ಜೊತೆಗೂ ಅಪ್ಪು ಸಿನಿಮಾ ಮಾಡೋದು ಖಚಿತವಾಗಿದೆ.