ನಕಲಿ ಲಸಿಕೆ ಗುರುತಿಸುವುದು ಹೇಗೆ?: ಸರಕಾರದ ಮಾರ್ಗಸೂಚಿಯಲ್ಲಿರುವ ಸೂಚನೆಗಳಿವು...

ಜಗತ್ತಿನ ವಿವಿಧೆಡೆ ಅಸಲಿ ಕೋವಿಡ್ ಲಸಿಕೆಗಳನ್ನು ಹೋಲುವ ನಕಲಿ ಲಸಿಕೆಗಳ ಹಾವಳಿ ತೀವ್ರವಾಗುತ್ತಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸುತ್ತಿದೆ. ಜನರಿಗೆ ನಕಲಿ-ಅಸಲಿ ವ್ಯತ್ಯಾಸ ತಿಳಿಯಲು ಅನುಕೂಲವಾಗುವಂತೆ ಕೇಂದ್ರ ಸರಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ನಕಲಿ ಲಸಿಕೆ ಗುರುತಿಸುವುದು ಹೇಗೆ?: ಸರಕಾರದ ಮಾರ್ಗಸೂಚಿಯಲ್ಲಿರುವ ಸೂಚನೆಗಳಿವು...
Linkup
ಹೊಸದಿಲ್ಲಿ: ದಕ್ಷಿಣ ಏಷ್ಯಾ ಹಾಗೂ ಆಫ್ರಿಕಾದ ಕೆಲವು ರಾಷ್ಟ್ರಗಳಲ್ಲಿ ನಕಲಿ ಕೊರೊನಾ ನಿರೋಧಕ ಲಸಿಕೆಗಳ ಹಾವಳಿ ಹೆಚ್ಚುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಆತಂಕ ವ್ಯಕ್ತಪಡಿಸಿರುವ ಬೆನ್ನಿಗೇ ಅಸಲಿ ಮತ್ತು ನಕಲಿ ಲಸಿಕೆಗಳ ನಡುವೆ ವ್ಯತ್ಯಾಸ ಪತ್ತೆ ಮಾಡಲು ಜನರಿಗೆ ಅನುಕೂಲವಾಗುವಂತಹ ಮಾರ್ಗಸೂಚಿಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಸದ್ಯ ದೇಶದಲ್ಲಿಜನರಿಗೆ ನೀಡಲಾಗುತ್ತಿರುವ ಕೋವಿಶೀಲ್ಡ್‌, ಕೊವ್ಯಾಕ್ಸಿನ್‌ ಮತ್ತು ಸ್ಪುಟ್ನಿಕ್‌-ವಿ ಲಸಿಕೆಗಳ ಅಸಲಿಯತ್ತು ಪತ್ತೆ ಮಾಡುವುದು ಹೇಗೆಂಬುದನ್ನು ಕೇಂದ್ರ ಆರೋಗ್ಯ ಸಚಿವಾಲಯವು ವಿವರಿಸಿದೆ. ಕೋವಿಶೀಲ್ಡ್‌: ಲಸಿಕೆಯ ಬಾಟಲಿ ಮೇಲಿನ ಲೇಬಲ್‌ ದಟ್ಟ ಹಸಿರು ಬಣ್ಣದ್ದಾಗಿದ್ದು, ಐಎಸ್‌ಐ ಗುರುತು ಹೊಂದಿರುತ್ತದೆ. ಬಾಟಲಿಯ ಮುಚ್ಚಳದ ಭಾಗದ ಅಲ್ಯೂಮಿನಿಯಂ ಸೀಲ್‌ನ ಬಣ್ಣ ಕೂಡ ದಟ್ಟ ಹಸಿರು ಇರುತ್ತದೆ. ಬ್ರ್ಯಾಂಡ್‌ ಹೆಸರು ಮತ್ತು ಟ್ರೇಡ್‌ಮಾರ್ಕ್ ಲಸಿಕೆಯ ಬಾಟಲಿಯ ಮೇಲೆ ನಮೂದಾಗಿರುತ್ತದೆ. ಲಸಿಕೆಯ ಹೆಸರು ಬಿಳಿ ಬಣ್ಣದಲ್ಲಿದ್ದು, ದಪ್ಪ ಅಕ್ಷರಗಳಲ್ಲಿಇರುವುದಿಲ್ಲ. ಕೊವ್ಯಾಕ್ಸಿನ್‌: ಲಸಿಕೆಯ ಲೇಬಲ್‌ ಮೇಲೆ ಡಿಎನ್‌ಎ ಮಾದರಿಯ ಸುರುಳಿಯ ಆಕಾರದ ಕಾಣಸಿಗುತ್ತದೆ. ಯುವಿ ಲೈಟ್‌ಗೆ ಬಾಟಲಿಯನ್ನು ಹಿಡಿದಾಗ ಮಾತ್ರವೇ ಇದು ಕಾಣಿಸುತ್ತದೆ. ಕೊವ್ಯಾಕ್ಸಿನ್‌ ಹೆಸರಿನ ಅಕ್ಷರಗಳ ಪೈಕಿ 'ಎಕ್ಸ್‌' ಗೆ ಮಾತ್ರವೇ ಹಸಿರು ಬಣ್ಣದ ಶೇಡ್‌ ಇರಲಿದೆ. ಸ್ಪುಟ್ನಿಕ್‌ ವಿ: ಲಸಿಕೆಯ ಪ್ಯಾಕ್‌ನ ಮುಂಬದಿ ಮತ್ತು ಹಿಂಬದಿಯಲ್ಲಿಮಾತ್ರವೇ ಇಂಗ್ಲಿಷ್‌ನಲ್ಲಿ ಲೇಬಲ್‌ ಇರಲಿದೆ. ಉಳಿದ ಕಡೆಗಳಲ್ಲಿರಷ್ಯಾದ ಅಕ್ಷರಗಳ ಮುದ್ರಣವಿರಲಿದೆ. ಭಾರತದಲ್ಲಿ ಪ್ರಸ್ತುತ ಮೂರು ಲಸಿಕೆಗಳು ಲಭ್ಯವಿವೆ- , ಕೋವ್ಯಾಕ್ಸಿನ್ ಮತ್ತು ಸ್ಪುಟ್ನಿಕ್. ಮುಂದಿನ ದಿನಗಳಲ್ಲಿ ಮತ್ತೆ ಮೂರು ಲಸಿಕೆಗಳು ಸೇರ್ಪಡೆಯಾಗಲಿವೆ. ಇವುಗಳಲ್ಲಿ ಝೈಡಸ್ ಕ್ಯಾಡಿಲಾದ ಕೂಡ ಸೇರಿದೆ. ಇನ್ನೆರಡು ಜಿನೋವಾ ಮತ್ತು ಬಯಾಲಾಜಿಕಲ್ ಇವಾನ್ ಲಸಿಕೆಗಳಾಗಿವೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ.