ಅಬುಧಾಬಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ವ್ಯಕ್ತಿಗೆ 40 ಕೋಟಿ ರೂ. ಲಾಟರಿ ಜಾಕ್‌ಪಾಟ್‌!

ಬಡವರಿಗೆ ದೇವರ ದಯೆ ಖಂಡಿತವಾಗಿಯೂ ಒಂದಲ್ಲ ಒಂದು ದಿನ ಇರಲಿದೆ ಎನ್ನುವುದಕ್ಕೆ ಅಬುಧಾಬಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿಯೇ ಕಾರಣ. ಕಳೆದ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಈಗ ಲಾಟರಿ ಮೂಲಕ ಅದೃಷ್ಟ ಒಲಿದಿದೆ. ಲಾಟರಿಯಲ್ಲಿ 40 ಕೋಟಿ ಬಹುಮಾನ ಸಿಕ್ಕಿದೆ.

ಅಬುಧಾಬಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ವ್ಯಕ್ತಿಗೆ 40 ಕೋಟಿ ರೂ. ಲಾಟರಿ ಜಾಕ್‌ಪಾಟ್‌!
Linkup
ಅಬುಧಾಬಿ: ಅರಬ್‌ ಸಂಯುಕ್ತ ಸಂಸ್ಥಾನದಲ್ಲಿ 37 ವರ್ಷದ ಭಾರತೀಯ ಹಾಗೂ ಆತನ 9 ಸಹಚರರು ಬರೋಬ್ಬರಿ 40 ಕೋಟಿ ರೂ. ಲಾಟರಿ ಬಹುಮಾನ ಗೆಲ್ಲುವ ಮೂಲಕ ಕೋವಿಡ್‌ ಸಂಕಷ್ಟದ ಸಮಯದಲ್ಲೂ ಜಾಕ್‌ಪಾಟ್‌ ಗಿಟ್ಟಿಸಿದ್ದಾರೆ. ಮೂಲದ ರಂಜಿತ್‌ ಸೋಮರಾಜನ್‌ ಅಬುಧಾಬಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಕಳೆದ 3 ವರ್ಷಗಳಿಂದ ಲಾಟರಿ ಟಿಕೆಟ್‌ ಖರೀದಿಸುತ್ತಿದ್ದರು. ಇವರು ತಮ್ಮ 9 ಸಹಚರರೊಟ್ಟಿಗೆ ಈ ಬಾರಿ ಲಾಟರಿ ಖರೀದಿಸಿದ್ದರು. ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬಂದ ಕೂಡಲೇ ಲಕ್ಕಿ ಡ್ರಾನಲ್ಲಿ ಅದೃಷ್ಟ ಖುಲಾಯಿಸಿರುವ ಸುದ್ದಿ ಅವರಿಗೆ ಮುಟ್ಟಿದೆ. ''ನನಗೆ ಈ ಬಾರಿ ಜಾಕ್‌ಪಾಟ್‌ ಹೊಡೆಯುತ್ತದೆಂದು ಎಣಿಸಿರಲಿಲ್ಲ. ಎರಡನೇ ಅಥವಾ ಮೂರನೇ ಬಹುಮಾನ ಬರಬಹುದೆಂದು ಭಾವಿಸಿದ್ದೆ,''ಎಂದು ಸೋಮರಾಜನ್‌ ಹೇಳಿದ್ದಾರೆ. 2008ರಿಂದಲೂ ಅವರು ದುಬೈನಲ್ಲಿ ಟ್ಯಾಕ್ಸಿ ಸೇರಿದಂತೆ ವಿವಿಧ ವಾಹನಗಳ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಅವರ ಸಂಬಳ ಕಡಿತಗೊಂಡಿತ್ತು. ಹೀಗಾಗಿ 9 ಜನರೊಂದಿಗೆ ಸೇರಿ ಜೂನ್‌ 29ರಂದು ಲಾಟರಿ ಖರೀದಿಸಿದ್ದರು.