ಧ್ರುವಸರ್ಜಾ ಅವರಿಗಿಂದು ಜನ್ಮದಿನದ ಸಂಭ್ರಮ. ತಮ್ಮ 33ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗಿಂದು ಜನ್ಮದಿನದ ಸಂಭ್ರಮ. ತಮ್ಮ 33ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆಗೆ ಧ್ರುವ ಸರ್ಜಾ ಆಚರಿಸಿಕೊಳ್ಳುತ್ತಿದ್ದಾರೆ.

ಧ್ರುವಸರ್ಜಾ ಅವರಿಗಿಂದು ಜನ್ಮದಿನದ ಸಂಭ್ರಮ. ತಮ್ಮ 33ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
Linkup

ಅಕ್ಟೋಬರ್ 6, 1988 ರಂದು ಜನಿಸಿದ ಧ್ರುವ ಸರ್ಜಾ, ದಿವಂಗತ ನಟ ಶಕ್ತಿ ಪ್ರಸಾದ್ ಅವರ ಮೊಮ್ಮಗ. ಕಲಾ ಕುಟುಂಬದಲ್ಲೇ ಬೆಳೆದ ಧ್ರುವ ಸರ್ಜಾಗೆ ಚಿಕ್ಕವಯಸ್ಸಿನಿಂದಲೇ ನಟನೆಯಲ್ಲಿ ಆಸಕ್ತಿ ಇತ್ತು. ನಟನೆಯಲ್ಲಿ ತರಬೇತಿ ಪಡೆದ ಧ್ರುವ ಸರ್ಜಾ, ಎ.ಪಿ.ಅರ್ಜುನ್ ನಿರ್ದೇಶನದ ‘ಅದ್ಧೂರಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 2012ರಲ್ಲಿ ಬಿಡುಗಡೆಯಾದ ‘ಅದ್ಧೂರಿ’ ಸಿನಿಮಾ ಹಿಟ್ ಆಯ್ತು. ಬಳಿಕ ಧ್ರುವ ಸರ್ಜಾ ನಟನೆಯ ‘ಬಹದ್ದೂರ್’ ಮತ್ತು ‘ಭರ್ಜರಿ’ ಚಿತ್ರಗಳು ಕೂಡ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸೌಂಡ್ ಮಾಡ್ತು.

ಧ್ರುವ ಸರ್ಜಾರವರು ಯುವಕರಾಗಿದ್ದಾಗ, ಅರ್ಜುನ್ ಸರ್ಜಾ ರವರೊಂದಿಗೆ ಚಲನಚಿತ್ರಗಳನ್ನು ನೋಡುತ್ತಿದ್ದರು ಮತ್ತು ಅವರು ಚಲನಚಿತ್ರ ನಾಯಕರಾಗಬೇಕೆಂದು ಬಯಸಿದರು. ಅರ್ಜುನ್ ಸರ್ಜಾರವರು ಉತ್ತರಿಸುತ್ತಾ ಒಬ್ಬ ನಾಯಕನಾಗುವ ಮೊದಲು ಉತ್ತಮ ನಟನಾಗಬೇಕು ಮತ್ತು ತರಬೇತಿಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. 

ಇದೇ ವರ್ಷ ತೆರೆಗೆ ಬಂದಿದ್ದ ‘ಪೊಗರು’ ಚಿತ್ರ ಕೂಡ ಕನ್ನಡ ಚಿತ್ರರಂಗದಲ್ಲಿ ಕಮಾಲ್ ಮಾಡ್ತು. ಸದ್ಯಕ್ಕೆ ‘ಮಾರ್ಟಿನ್’ ಚಿತ್ರದಲ್ಲಿ ಧ್ರುವ ಸರ್ಜಾ ಬಿಜಿಯಾಗಿದ್ದಾರೆ. ‘ಮಾರ್ಟಿನ್’ ಚಿತ್ರಕ್ಕೆ ಎ.ಪಿ.ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಐದು ಭಾಷೆಗಳಲ್ಲಿ ‘ಮಾರ್ಟಿನ್’ ತೆರೆಗೆ ಬರಲಿದೆ. ಧ್ರುವ ಸರ್ಜಾ ಜನ್ಮದಿನದ ಪ್ರಯುಕ್ತ ‘ಮಾರ್ಟಿನ್’ ಸ್ಪೆಷಲ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಧ್ರುವ ಸರ್ಜಾಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಉಂಟಾಗುತ್ತಿದೆ.

ಧ್ರುವ ಸರ್ಜಾರವರಿಗೆ ಅದ್ದೂರಿ ಚಿತ್ರಕ್ಕೆ ಅವರ ನಟನೆಯಿಂದಾಗಿ ಉದಯ ಚಲನಚಿತ್ರ ಪ್ರಶಸ್ತಿ, ಸೈಮಾ ಪ್ರಶಸ್ತಿ ಹಾಗೂ ಸುವರ್ಣ ಪ್ರಶಸ್ತಿ ಲಭಿಸಿದೆ. ಬಹದ್ದೂರ್ ಚಿತ್ರಕ್ಕಾಗಿ ಸೈಮಾ ಪ್ರಶಸ್ತಿಗೆ ಆಯ್ಕೆಯಾಗಿದ್ದರು.ಭರ್ಜರಿ ಚಿತ್ರಕ್ಕಾಗಿ ಲವ್ ಲವಿಕೆ ರೀಡರ್ಸ್ ಚಾಯ್ಸ್ ಪ್ರಶಸ್ತಿ, ಸೈಮಾ ಪ್ರಶಸ್ತಿಗೆ ಕೂಡ ಆಯ್ಕೆಯಾಗಿದ್ದರು.