ದೇಶೀಯ ಕ್ರಿಪ್ಟೋಕರೆನ್ಸಿ '$ಗರಿ' ಗೆ ಬಾಲಿವುಡ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಬ್ರ್ಯಾಂಡ್‌ ಅಂಬಾಸಿಡರ್‌!

ಭಾರತದಲ್ಲಿ ಇದೇ ಮೊದಲ ಬಾರಿಗೆ ವಿಡಿಯೋ ಆ್ಯಪ್‌ ಒಂದು ದೇಸಿ ಕ್ರಿಪ್ಟೋಕರೆನ್ಸಿಗೆ ಶನಿವಾರ ಚಾಲನೆ ನೀಡಲಾಗಿದೆ. 'ಚಿಂಗಾರಿ' (Chingari) ಹೆಸರಿನ ಕಿರು ವಿಡಿಯೋ ಆ್ಯಪ್‌ ದೇಸೀ ಕ್ರಿಪ್ಟೋ ನಾಣ್ಯ ಬಿಡುಗಡೆ ಮಾಡಿದ್ದು, ಇದಕ್ಕೆ $ಗರಿ ($Gari) ಎಂದು ಹೆಸರಿಸಲಾಗಿದೆ.

ದೇಶೀಯ ಕ್ರಿಪ್ಟೋಕರೆನ್ಸಿ '$ಗರಿ' ಗೆ ಬಾಲಿವುಡ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಬ್ರ್ಯಾಂಡ್‌ ಅಂಬಾಸಿಡರ್‌!
Linkup
ಹೊಸದಿಲ್ಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ವಿಡಿಯೋ ಆ್ಯಪ್‌ ಒಂದು ದೇಸಿ ಕ್ರಿಪ್ಟೋಕರೆನ್ಸಿಗೆ ಶನಿವಾರ ಚಾಲನೆ ನೀಡಲಾಗಿದೆ. '' () ಹೆಸರಿನ ಕಿರು ವಿಡಿಯೋ ಆ್ಯಪ್‌ ದೇಸೀ ಕ್ರಿಪ್ಟೋ ನಾಣ್ಯ ಬಿಡುಗಡೆ ಮಾಡಿದ್ದು, ಇದಕ್ಕೆ $ಗರಿ ($Gari) ಎಂದು ಹೆಸರಿಸಲಾಗಿದೆ. ಚಿಂಗಾರಿ ವೀಡಿಯೋ ಆಪ್ ತನ್ನದೇ ಆದ NFT ಮಾರುಕಟ್ಟೆ ವ್ಯವಸ್ಥೆಯನ್ನೂ ಆರಂಭಿಸುತ್ತಿದೆ. $ಗರಿ ಕ್ರಿಪ್ಟೋ ನಾಣ್ಯಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅದರ ಬ್ರ್ಯಾಂಡ್ ಅಂಬಾಸಿಡರ್ ಆಗಿರಲಿದ್ದಾರೆ. $ಗರಿ ಉದ್ಘಾಟನಾ ಸಮಾರಂಭದಲ್ಲೂ ಅವರು ಖುದ್ದು ಹಾಜರಿದ್ದರು. ಮೊದಲ ದೇಸಿ ಕ್ರಿಪ್ಟೋನಾಣ್ಯ $ಗರಿಯನ್ನು ಸೊಲಾನಾ ಬ್ಲಾಕ್‌ಚೈನ್ ತಂತ್ರಜ್ಞಾನದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. $ಗರಿಯನ್ನು ಆರ್ಥಿಕ ಟೋಕನ್‌ (ನಾಣ್ಯ) ಎನ್ನುವ ಬದಲು ಸಾಮಾಜಿಕ ಟೋಕನ್ ಎಂಬುದಾಗಿ ಪ್ರಚಾರ ಮಾಡಲಾಗುತ್ತಿದೆ. ಇಲ್ಲಿ ಟೋಕನ್‌ ಮೈನಿಂಗ್‌ ಮಾಡಿದವರು ತಮ್ಮ ವಿಷಯದ ಆಧಾರದ ಮೇಲೆ ನಾಣ್ಯಗಳನ್ನು ಸಂಗ್ರಹಿಸಲು ಸಾಧ್ಯವಾಗಲಿದೆ. ಹೊಸ ಕ್ರಿಪ್ಟೋ ಟೋಕನ್ ಅನ್ನು ಬಿಡುಗಡೆ ಮಾಡಿರುವ ಚಿಂಗಾರಿ ಆ್ಯಪ್‌, ಭಾರತದಲ್ಲಿ 'ಟಿಕ್‌ಟಾಕ್‌' ಆ್ಯಪ್‌ನ ಪ್ರತಿಸ್ಪರ್ಧಿಯಾಗಿ ಆರಂಭವಾಯಿತು. ಇದೊಂದು ಕಿರು ವೀಡಿಯೋಗಳ ಅಪ್ಲಿಕೇಶನ್ ಆಗಿದ್ದು, ಇದೀಗ ಇ-ಕಾಮರ್ಸ್‌ ನಡೆಸುವ ಸಲುವಾಗಿ NFT ಆರಂಭಿಸಿದೆ. ಈ ವೇದಿಕೆಯು ತನ್ನ ಗ್ರಾಹಕರಿಗೆ ಅಥವಾ ಬಳಕೆದಾರರಿಗೆ ಕ್ರಿಪ್ಟೋ ಟೋಕನ್‌ಗಳನ್ನು ಪಡೆಯಲು ಅನುಮತಿಸುತ್ತದೆ ಎಂದು ಚಿಂಗಾರಿ ಸಹ ಸಂಸ್ಥಾಪಕ ಮತ್ತು ಸಿಇಒ ಸುಮಿತ್‌ ಘೋಷ್‌ ಹೇಳಿದರು. ಚಿಂಗಾರಿ ಆ್ಯಪ್‌ ನಲ್ಲಿ ವಿಡಿಯೋಗಳನ್ನು ಸೃಷ್ಟಿಸಿ ಅಪ್‌ಲೋಡ್‌ ಮಾಡುವವರಿಗೆ ಕ್ರಿಪ್ಟೋ ನಾಣ್ಯ ($ಗರಿ) ಪಡೆಯಲು ಅವಕಾಶ ನೀಡಲಾಗಿದೆ. ಇದರಿಂದ ವಿಡಿಯೋ ಸೃಷ್ಟಿಕರ್ತರಿಗೆ ಮತ್ತಷ್ಟು ಪ್ರೇರಣೆ ದೊರೆತಂತಾಗಿದೆ. ಇದರಿಂದ ಚಿಂಗಾರಿ ಆ್ಯಪ್‌ ನಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳಲಿದ್ದಾರೆ ಎಂದು. ಭವಿಷ್ಯದಲ್ಲಿ ಮನರಂಜನಾ ಕ್ಷೇತ್ರಕ್ಕೆಮತ್ತಷ್ಟು ಕೊಡುಗೆ ನೀಡಲಿದ್ದಾರೆ. ಚಿಂಗಾರಿ ಅಪ್ಲಿಕೇಶನ್‌ನಲ್ಲಿ ಹೊಸ ಮತ್ತು ಹೆಚ್ಚು ಆಕರ್ಷಕ ವೀಡಿಯೊಗಳನ್ನು ರಚಿಸಲು ಪ್ರೇರೇಪಿಸಿದಂತಾಗಿದೆ ಎಂದು $ಗರಿ ಕ್ರಿಪ್ಟೋನಾಣ್ಯದ ಬ್ರ್ಯಾಂಡ್‌ ಅಂಬಾಸಿಡರ್‌ ಸಲ್ಮಾನ್‌ ಖಾನ್‌ ಅವರು ಮೊದಲೇ ಸಿದ್ದಪಡಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಚಿಂಗಾರಿ ಕಿರು ವಿಡಿಯೋ ಆ್ಯಪ್‌ ಅನ್ನು 2018ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಆರಂಭಿಸಲಾಯಿತು. ಇನ್‌ಸ್ಟಾಗ್ರಾಂ ರೀಲ್ಸ್‌, ಎಂಎಕ್ಸ್‌ ಟಕಾಟಕ್‌, ಜೋಶ್‌ ಮತ್ತು ಮೋಜ್ ಆ್ಯಪ್‌ ಗಳು ಇದಕ್ಕೆ ಪ್ರತಿಸ್ಪರ್ಧಿಯಾಗಿವೆ. ಇದೀಗ ಈ ವಿಡಿಯೋ ಆ್ಯಪ್‌ ಕ್ರಿಪ್ಟೋ ಕರೆನ್ಸಿ ವಹಿವಾಟಿಗೆ ವೇದಿಕೆ ಸಿದ್ದಪಡಿಸಿದೆ.