ದಿಲ್ಲಿಯಲ್ಲಿ ಆದಿತ್ಯನಾಥ್‌, ಕುತೂಹಲ ಕೆರಳಿಸಿದ ಯೋಗಿ - ಮೋದಿ ಭೇಟಿ

ಉತ್ತರ ಪ್ರದೇಶದ ಭಿನ್ನಮತೀಯ ಘಟನೆಗಳ ನಡುವೆಯೇ ಸಿಎಂ ಯೋಗಿ ಆದಿತ್ಯನಾಥ್ ದಿಲ್ಲಿಗೆ ಬಂದಿಳಿದಿದ್ದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ.

ದಿಲ್ಲಿಯಲ್ಲಿ ಆದಿತ್ಯನಾಥ್‌, ಕುತೂಹಲ ಕೆರಳಿಸಿದ ಯೋಗಿ - ಮೋದಿ ಭೇಟಿ
Linkup
ಹೊಸದಿಲ್ಲಿ: ಮುಖ್ಯಮಂತ್ರಿ ಗುರುವಾರ ದಿಲ್ಲಿಗೆ ಭೇಟಿ ನೀಡಿದ್ದು, ಎರಡು ದಿನಗಳ ಅವಧಿಯಲ್ಲಿ ಪ್ರಧಾನಿ , ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ. ಉತ್ತರ ಪ್ರದೇಶದಲ್ಲಿ ಭಿನ್ನಮತ ಹುಟ್ಟಿಕೊಂಡ ನಂತರ ಯೋಗಿ ಆದಿತ್ಯನಾಥ್‌ ದಿಲ್ಲಿ ನಾಯಕರನ್ನು ಇದೇ ಮೊದಲ ಬಾರಿಗೆ ಭೇಟಿಯಾಗುತ್ತಿದ್ದಾರೆ. ಎರಡು ದಿನಗಳ ಕಾಲ ದಿಲ್ಲಿಯಲ್ಲಿ ಇರಲಿರುವ ಅವರು ಗುರುವಾರ ಅಮಿತ್‌ ಶಾ ಅವರನ್ನು ಹಾಗೂ ಶುಕ್ರವಾರ ನರೇಂದ್ರ ಮೋದಿ ಹಾಗೂ ಜೆಪಿ ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪ್ರಭಾವಿ ನಾಯಕ ಜಿತಿನ್‌ ಪ್ರಸಾದ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡ ಮರುದಿನ ಈ ಬೆಳವಣಿಗೆ ನಡೆಯುತ್ತಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ನಡೆಸುತ್ತಿರುವ ಮರು ಹೊಂದಿಕೆ ರಾಜಕಾರಣದಲ್ಲಿ ಜಿತಿನ್‌ ಪ್ರಸಾದ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಉತ್ತರ ಪ್ರದೇಶ ಚುನಾವಣೆಗೆ 1 ವರ್ಷಕ್ಕೂ ಕಡಿಮೆ ಅವಧಿ ಬಾಕಿ ಇದ್ದು, ಕೋವಿಡ್‌ ನಿರ್ವಹಣೆ ಸಂಬಂಧ ಸಂಸದರು ಮತ್ತು ಶಾಸಕರು ಬಹಿರಂಗವಾಗಿ ಯೋಗಿ ಆದಿತ್ಯನಾಥ್‌ ವಿರುದ್ಧ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ನಾಯಕ ಬಿಎಲ್‌ ಸಂತೋಷ್‌ ನೇತೃತ್ವದ ಕೇಂದ್ರ ಸಮಿತಿ ಕಳೆದ ವಾರ ಶಾಸಕರು, ಸಂಸದರು, ಸಚಿವರ ಜತೆಗೆ ಮುಖ್ಯಮಂತ್ರಿಗಳಿಂದಲೂ ಅಭಿಪ್ರಾಯ ಸಂಗ್ರಹಿಸಿತ್ತು. ಈ ಎಲ್ಲಾ ಹಿನ್ನಲೆಯಲ್ಲಿ ಕೇಂದ್ರ ನಾಯಕರ ಜತೆಗಿನ ಯೋಗಿ ಆದಿತ್ಯನಾಥ್‌ ಸಭೆ ಮಹತ್ವ ಪಡೆದುಕೊಂಡಿದೆ.