ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಅನುಮಾನಾಸ್ಪದ ಚಟುವಟಿಕೆ: ಚೀನೀ ವ್ಯಕ್ತಿಯ ಬಂಧನ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿ ಭಾಗದಲ್ಲಿ ಶಂಕಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ್ದ ಚೀನಾದ ವ್ಯಕ್ತಿಯೊಬ್ಬನನ್ನು ಬಿಎಸ್ಎಫ್ ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಅನುಮಾನಾಸ್ಪದ ಚಟುವಟಿಕೆ: ಚೀನೀ ವ್ಯಕ್ತಿಯ ಬಂಧನ
Linkup
ಹೊಸದಿಲ್ಲಿ: ಭಾರತ ಮತ್ತು ಗಡಿ ಭಾಗದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಚೀನಾದ 35 ವರ್ಷದ ವ್ಯಕ್ತಿಯನ್ನು ಭದ್ರತಾ ಪಡೆ ಬಂಧಿಸಿದೆ. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಗಡಿ ಸಮೀಪ ಗುರುವಾರ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಂಗ್ಲಾದೇಶದ ವೀಸಾ ಇರುವ ಪಾಸ್‌ಪೋರ್ಟ್ ಹೊಂದಿರುವ ಆತನ ಬಳಿ ಒಂದು ಲ್ಯಾಪ್‌ಟಾಪ್ ಮತ್ತು ಮೂರು ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ. ಬಂಧಿತನನ್ನು ಹಾನ್ ಜುನ್ವೆಯಿ ಎಂದು ಗುರುತಿಸಲಾಗಿದೆ. 'ಆತನನ್ನು ಬೆಳಿಗ್ಗೆ 7 ಗಂಟೆಗೆ ವಶಕ್ಕೆ ಪಡೆಯಲಾಗಿದೆ. ಕಾಲಿಯಾಚಕ್ ಪೋಸ್ಟ್‌ನಿಂದ ಆತನನ್ನು ಕರೆತರಲಾಗಿದ್ದು, ಇತರೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ. ಆತನನ್ನು ಅವರು ವಿಚಾರಣೆಗೆ ಒಳಪಡಿಸಿದ್ದಾರೆ' ಎಂದು ಅಧಿಕಾರಿಗಳು ಹೇಳಿದ್ದಾರೆ. ಗಡಿಯಲ್ಲಿ ನುಸುಳು ಬಂದಿದ್ದ ವ್ಯಕ್ತಿಗೆ ಇಂಗ್ಲಿಷ್ ತಿಳಿದಿಲ್ಲ. ಹೀಗಾಗಿ ಆತನೊಂದಿಗೆ ಆರಂಭದಲ್ಲಿ ಸಂವಹಿಸುವುದು ಕಷ್ಟಕರವಾಗಿತ್ತು. ಬಳಿಕ ಮ್ಯಾಂಡೆರಿನ್ ಭಾಷೆ ಬಲ್ಲ ಭದ್ರತಾ ಅಧಿಕಾರಿಯೊಬ್ಬರನ್ನು ಕರೆಸಲಾಯಿತು. ಗುಪ್ತಚರ ಸಂಸ್ಥೆಗಳು ಈಗ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮಾಲ್ಡಾ ಜಿಲ್ಲೆಯು ಬಾಂಗ್ಲಾದೇಶದೊಂದಿಗೆ ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದ್ದು, ಇದು ಅತ್ಯಂತ ಕಳ್ಳ ವ್ಯವಹಾರಗಳು ನಡೆಯುವ ಗಡಿಗಳಲ್ಲಿ ಒಂದಾಗಿದೆ. ಮಾದಕವಸ್ತು, ಶಸ್ತ್ರಾಸ್ತ್ರ, ಜಾನುವಾರುಗಳು ಹಾಗೂ ಅಕ್ರಮ ವಲಸಿಗರ ಕಳ್ಳಸಾಗಣೆಗೆ ಇದು ಹೆಚ್ಚು ಬಳಕೆಯಾಗುತ್ತಿದೆ.