ದಿಲ್ಲಿ ಗಲಭೆ ಆರೋಪಿಗೆ ಜಾಮೀನು ನಿರಾಕರಿಸಿದ ದಿಲ್ಲಿ ಕೋರ್ಟ್‌

ಕಳೆದ ವರ್ಷದ ಫೆಬ್ರವರಿ 26ರಂದು ದಿಲ್ಲಿಯಲ್ಲಿ ಭುಗಿಲೆದ್ದ ಗಲಭೆಯಲ್ಲಿ ಉದ್ರಿಕ್ತರ ಗುಂಪು ಅಂಕಿತ್‌ ಶರ್ಮಾ ಅವರನ್ನು ಹತ್ಯೆ ಮಾಡಿ, ಅವರ ಮೃತದೇಹವನ್ನು ಉತ್ತರ ದಿಲ್ಲಿಯ ಚಾಂದ್‌ಬಾಗ್‌ ಪ್ರದೇಶದಲ್ಲಿ ಚರಂಡಿಗೆ ಎಸೆದು ಪರಾರಿಯಾಗಿತ್ತು. ಆಪ್‌ ಕೌನ್ಸಿಲರ್‌ ತಾಹಿರ್‌ ಹುಸೇನ್‌ ಪ್ರಚೋದನೆಯಿಂದಲೇ ಈ ಗಲಭೆ ನಡೆದಿದೆ ಎಂಬ ಆರೋಪ ತನಿಖೆಯಿಂದ ಬೆಳಕಿಗೆ ಬಂದಿತ್ತು.

ದಿಲ್ಲಿ ಗಲಭೆ ಆರೋಪಿಗೆ ಜಾಮೀನು ನಿರಾಕರಿಸಿದ ದಿಲ್ಲಿ ಕೋರ್ಟ್‌
Linkup
ಹೊಸದಿಲ್ಲಿ: ಸಿಎಎ ವಿರೋಧಿ ಹೋರಾಟದ ವೇಳೆ ಕಳೆದ ವರ್ಷದ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದ ಗಲಭೆಯಲ್ಲಿ ಉದ್ರಿಕ್ತರ ಕಿಚ್ಚಿಗೆ ಬಲಿಯಾದ ಗುಪ್ತಚರ ಇಲಾಖೆ ಅಧಿಕಾರಿ ಅಂಕಿತ್‌ ಶರ್ಮಾ ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು ನೀಡಲು ದಿಲ್ಲಿ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ ನಿರಾಕರಿಸಿದೆ. ಕಳೆದ ವರ್ಷದ ಫೆಬ್ರವರಿ 26ರಂದು ದಿಲ್ಲಿಯಲ್ಲಿ ಭುಗಿಲೆದ್ದ ಗಲಭೆಯಲ್ಲಿ ಉದ್ರಿಕ್ತರ ಗುಂಪು ಅಂಕಿತ್‌ ಶರ್ಮಾ ಅವರನ್ನು ಹತ್ಯೆ ಮಾಡಿ, ಅವರ ಮೃತದೇಹವನ್ನು ಉತ್ತರ ದಿಲ್ಲಿಯ ಚಾಂದ್‌ಬಾಗ್‌ ಪ್ರದೇಶದಲ್ಲಿ ಚರಂಡಿಗೆ ಎಸೆದು ಪರಾರಿಯಾಗಿತ್ತು. ಆಪ್‌ ಕೌನ್ಸಿಲರ್‌ ತಾಹಿರ್‌ ಹುಸೇನ್‌ ಪ್ರಚೋದನೆಯಿಂದಲೇ ಈ ಗಲಭೆ ನಡೆದಿದೆ ಎಂಬ ಆರೋಪ ತನಿಖೆಯಿಂದ ಬೆಳಕಿಗೆ ಬಂದಿತ್ತು. ತಾಹಿರ್‌ ಹುಸೇನ್‌ ಅವರ ನಿರ್ದೇಶನದಂತೆ ನಜೀಮ್‌ ಹಾಗೂ ಸಂಗಡಿಗರು ಈ ಕೃತ್ಯ ಎಸಗಿದ್ದರು. ಜಾಮೀನು ಕೋರಿ ನಜೀಮ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ‘ಈ ಹತ್ಯೆ ಪ್ರಕರಣದಲ್ಲಿ ನಿಮ್ಮ ವಿರುದ್ಧ ಪ್ರಮುಖ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು, ಜಾಮೀನು ನೀಡಿದಲ್ಲಿ ಸಾಕ್ಷ್ಯನಾಶ ಪಡಿಸುವ ಸಾಧ್ಯತೆಗಳಿರುತ್ತವೆ’ ಎಂದು ಹೇಳಿ ಜಾಮೀನು ಮುಂಜೂರಿಗೆ ನಿರಾಕರಿಸಿತು. ಇದೇ ಪ್ರಕರಣ ಸಂಬಂಧ ದಿಲ್ಲಿ ಹೈಕೋರ್ಟ್‌ ಇತ್ತೀಚೆಗೆ ಇನ್ನಿಬ್ಬರು ಆರೋಪಿಗಳಾದ ಸಮೀರ್‌ ಖಾನ್‌, ಕಾಸಿಮ್‌ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.