ಉದ್ಯಮಿ- ಉದ್ಯೋಗಿ ಮಧ್ಯೆ ಸಲಿಂಗ ಸಂಬಂಧ: ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಸೇಲ್ಸ್‌ಮ್ಯಾನ್ ಹತ್ಯೆ!

ಸೇಲ್ಸ್‌ಮ್ಯಾನ್ ಆಗಿರುವ ತನ್ನ ಉದ್ಯೋಗಿ ಜತೆಗೆ ಸಲಿಂಗ ಸಂಬಂಧ ಹೊಂದಿದ್ದ ಉದ್ಯಮಿಯೊಬ್ಬ, ಆತನ ಬ್ಲ್ಯಾಕ್‌ಮೇಲ್‌ನಿಂದ ಸಿಟ್ಟಿಗೆದ್ದು, ಆತನನ್ನು ಕೊಲೆ ಮಾಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಸೇರಿ ಮೂವರನ್ನು ಬಂಧಿಸಲಾಗಿದೆ. ದಕ್ಷಿಣ ದಿಲ್ಲಿಯಲ್ಲಿ ಈ ಘಟನೆ ನಡೆದಿದೆ.

ಉದ್ಯಮಿ- ಉದ್ಯೋಗಿ ಮಧ್ಯೆ ಸಲಿಂಗ ಸಂಬಂಧ: ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಸೇಲ್ಸ್‌ಮ್ಯಾನ್ ಹತ್ಯೆ!
Linkup
ಹೊಸದಿಲ್ಲಿ: ಸೆಕ್ಸ್ ಬ್ಲ್ಯಾಕ್‌ಮೇಲ್‌ ವಿಡಿಯೋ ವಿಚಾರದಲ್ಲಿ ಜವಳಿ ಉದ್ಯಮಿಯೊಬ್ಬ ತನ್ನ ಉದ್ಯೋಗಿಯನ್ನು ಮಾಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ದಕ್ಷಿಣ ದಿಲ್ಲಿಯ ಸರೋಜಿನಿ ನಗರದಲ್ಲಿ ಈ ಘಟನೆ ನಡೆದಿದೆ. ಈ ಕೊಲೆಗೆ ಸಹಾಯ ಮಾಡಿದ ಉದ್ಯಮಿಯ ಸೋದರಳಿಯ ಸೇರಿದಂತೆ ಇನ್ನೂ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಗೌರವ್ ಶರ್ಮಾ ತಿಳಿಸಿದ್ದಾರೆ. ಆಗಿದ್ದ 22 ವರ್ಷದ ಉದ್ಯೋಗಿಯನ್ನು ಹತ್ಯೆ ಮಾಡಿ, ಟ್ರಾಲಿ ಬ್ಯಾಗ್ ಒಳಗೆ ಮೃತದೇಹವನ್ನು ತುಂಬಿಸಿದ್ದ ಅವರು, ಅದನ್ನು ದಕ್ಷಿಣ ದಿಲ್ಲಿಯ ಜನಪ್ರಿಯ ಮಾರುಕಟ್ಟೆ ಸಮೀಪದ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿ ಇರಿಸಿ ತೆರಳಿದ್ದರು. ಆ ಉದ್ಯೋಗಿಯು 36 ವರ್ಷದ ಜತೆಗೆ ಸಲಿಂಗ ಲೈಂಗಿಕ ಸಂಬಂಧ ಹೊಂದಿದ್ದ. ಉದ್ಯಮಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ಇಬ್ಬರ ನಡುವಿನ ಲೈಂಗಿಕ ಕ್ರಿಯೆಯ ವಿಡಿಯೋವನ್ನು ಚಿತ್ರೀಕರಿಸಿದ್ದ ಉದ್ಯೋಗಿ, ಅದನ್ನು ಬಳಸಿಕೊಂಡು ಆತನಿಂದ ಹಣ ಸುಲಿಗೆ ಮಾಡುತ್ತಿದ್ದ. ತನಗೆ ಹಣ ನೀಡದೆ ಹೋದರೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಘಟನೆ ಬಯಲಾದರೆ ತನ್ನ ಮರ್ಯಾದೆ ಹೋಗುತ್ತದೆ ಎಂದು ಅಂಜಿದ ಉದ್ಯಮಿ, ಆತನ ಕೊಲೆಗೆ ಸಂಚು ರೂಪಿಸಿದ್ದ. ಜನವರಿ 19ರಂದು ಮೊದಲು ಹತ್ಯೆ ಸಂಚು ಮಾಡಲಾಗಿತ್ತು. ಆದರೆ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಬಿಗಿ ಭದ್ರತೆ ಇದ್ದಿದ್ದರಿಂದ ಅದನ್ನು ಮುಂದೂಡಲಾಗಿತ್ತು. ಇದರಿಂದ ರೋಸಿ ಹೋದ ಉದ್ಯಮಿ, ಉದ್ಯೋಗಿಯ ಕೊಲೆಗೆ ಸಂಚು ರೂಪಿಸಿದ್ದ. ಅದಕ್ಕಾಗಿ ಉತ್ತರ ಪ್ರದೇಶದ ಹಳ್ಳಿಯಲ್ಲಿ ವಾಸಿಸುವ ತನ್ನ ಸೋದರಳಿಯನನ್ನು ಜನವರಿ 28ರಂದು ದಿಲ್ಲಿಗೆ ಕರೆಯಿಸಿದ್ದ. ಸರೋಜಿನಿ ನಗರದಿಂದ ಮೂರು ಕಿಮೀ ದೂರದಲ್ಲಿರುವ ದಕ್ಷಿಣ ದಿಲ್ಲಿಯ ಯೂಸುಫ್ ಸರೈನಲ್ಲಿನ ಅತಿಥಿ ಗೃಹದಲ್ಲಿ ಎರಡು ರೂಮ್‌ಗಳನ್ನು ಬುಕ್ ಮಾಡಿದ್ದ. ಕೃತ್ಯಕ್ಕೆ ಮತ್ತೊಬ್ಬನ ನೆರವು ಪಡೆದುಕೊಂಡಿದ್ದ. ಕೆಲಸ ಇದೆ ಎಂದು ಉದ್ಯೋಗಿಯನ್ನು ಗೆಸ್ಟ್ ಹೌಸ್‌ಗೆ ಕರೆಯಿಸಿದ್ದ. ಆತ ಅಲ್ಲಿಗೆ ಬರುತ್ತಿದ್ದಂತೆ ಆತನ ಮೇಲೆ ಹಲ್ಲೆ ನಡೆಸಿ ಕೈಗಳನ್ನು ಕಟ್ಟಿ ಹಾಕಿದ್ದರು. ಬಳಿಕ ಬಟ್ಟೆಯಿಂದ ಅತಿಥಿಗೃಹದಲ್ಲಿನ ಬಾಲ್ಕನಿಗೆ ಬಿಗಿದು ಆತನನ್ನು ಕೊಲೆ ಮಾಡಿದ್ದರು. ನಂತರ ದೇಹವನ್ನು ಟ್ರಾಲಿ ಬ್ಯಾಗ್‌ಗೆ ಹಾಕಿಕೊಂಡು ಸರೋಜಿನಿ ನಗರ ಮೆಟ್ರೋ ನಿಲ್ದಾಣದ ಸಮೀಪ ಎಸೆದು ಹೋಗಿದ್ದರು. ಈ ಟ್ರಾಲಿ ಬ್ಯಾಗ್ ಸಾಗಿಸುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಭೀಕರ ಹತ್ಯೆಯ ಬಳಿಕ ಆ ಸೇಲ್ಸ್‌ಮ್ಯಾನ್‌ನ ಶೂಗಳು, ಜಾಕೆಟ್, ಟೊಪ್ಪಿ ಮತ್ತು ವ್ಯಾಲೆಟ್‌ಗಳನ್ನು ತೆಗೆದುಕೊಂಡಿದ್ದ ಉದ್ಯಮಿ, ಅವುಗಳನ್ನು ಉತ್ತಮ ನಗರದ ಮತ್ತೊಂದು ಮೆಟ್ರೋ ಸ್ಟೇಷನ್ ಬಳಿ ಎಸೆದಿದ್ದ. ಮೃತ ವ್ಯಕ್ತಿಯ ಫೋನ್ ಅನ್ನು ಆತನ ಸೋದರಳಿಯ ತನ್ನ ಹಳ್ಳಿಗೆ ತೆಗೆದುಕೊಂಡು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಉದ್ಯಮಿ ಹಾಗೂ ಸೇಲ್ಸ್‌ಮ್ಯಾನ್ ಒಟ್ಟಿಗೆ ಇರುವುದು, ಟ್ರಾಲಿಯನ್ನು ಗೆಸ್ಟ್ ಹೌಸ್ ಒಳಗೆ ಕೊಂಡೊಯ್ಯುವುದು ಮುಂತಾದವು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದ್ದವು. ಇವುಗಳ ಆಧಾರದಲ್ಲಿ ಪೊಲೀಸರು ಉದ್ಯಮಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.