ನದಿಯಂತಾದ ರಾಜಧಾನಿ ರಸ್ತೆಗಳು: 12 ವರ್ಷಗಳಲ್ಲಿಯೇ ದಿನವೊಂದರ ಅತ್ಯಧಿಕ ಮಳೆ ಕಂಡ ದಿಲ್ಲಿ

ರಾಜಧಾನಿ ಹೊಸದಿಲ್ಲಿಯಲ್ಲಿ ಮಂಗಳವಾರ ಮತ್ತು ಬುಧವಾರ ಸುರಿದ ಭಾರಿ ಮಳೆಯಿಂದ ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ರಸ್ತೆಗಳು ನದಿಯಂತೆ ತುಂಬಿಕೊಂಡಿದ್ದರೆ, ವಾಹನ ಸವಾರರು, ಪಾದಚಾರಿಗಳು ಚಲಿಸಲಾಗದೆ ಪರದಾಡುವಂತಾಗಿದೆ.

ನದಿಯಂತಾದ ರಾಜಧಾನಿ ರಸ್ತೆಗಳು: 12 ವರ್ಷಗಳಲ್ಲಿಯೇ ದಿನವೊಂದರ ಅತ್ಯಧಿಕ ಮಳೆ ಕಂಡ ದಿಲ್ಲಿ
Linkup
ಹೊಸದಿಲ್ಲಿ: ರಾಜಧಾನಿ ದೆಹಲಿ ಅಕ್ಷರಶಃ ನೀರಲ್ಲಿ ತೋಯ್ದು ತೊಪ್ಪೆಯಾಗಿದೆ. ಬುಧವಾರ ಸುರಿದ ವಿಪರೀತ ಮಳೆಯಿಂದ ಬೆಳಗಿನ ಜನ ಓಡಾಟದ ಅವಧಿಯಲ್ಲಿ ಪ್ರಮುಖ ರಸ್ತೆಗಳಲ್ಲಿ ನೀರು ನುಗ್ಗಿದ ಪರಿಣಾಮ ಭಾರಿ ಉಂಟಾಗಿದೆ. ರಾಜಧಾನಿ ಹಾಗೂ ನೆರೆಯ ಗುರ್‌ಗಾಂವ್ ಹಾಗೂ ನೋಯ್ಡಾಗಳಲ್ಲಿನ ಅನೇಕ ಭಾಗಗಳಲ್ಲಿ ಪಾದಚಾರಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ಮಂಗಳವಾರ ಬೆಳಿಗ್ಗೆ 8.30 ರಿಂದ ಬುಧವಾರ ಬೆಳಿಗ್ಗೆ 8.30ರ ಅವಧಿಯಲ್ಲಿ ದಿಲ್ಲಿಯಲ್ಲಿ 112.1 ಮಿಮೀ ಮಳೆ ಸುರಿದಿದೆ. ಇದು ಕಳೆದ 12 ವರ್ಷಗಳಲ್ಲಿಯೇ ಅತ್ಯಧಿಕವಾಗಿದ್ದರೆ, ಸೆಪ್ಟೆಂಬರ್ ತಿಂಗಳ ಮಳೆ ದಾಖಲೆಗಳಲ್ಲಿ ಕಳೆದ 19 ವರ್ಷಗಳಲ್ಲಿಯೇ ಅತಿ ಹೆಚ್ಚು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ () ತಿಳಿಸಿದೆ. ದಿಲ್ಲಿಯಲ್ಲಿ ಘೋಷಿಸಲಾಗಿದೆ. ಫ್ಲೈ ಓವರ್‌ಗಳು ನದಿಯಂತಾಗಿ ರಭಸದಿಂದ ನೀರು ಸಾಗಿಸುತ್ತಿದ್ದರೆ, ಅನೇಕ ರಸ್ತೆಗಳು, ವಸತಿ ಪ್ರದೇಶಗಳು ಕೆರೆಯಂತಾಗಿದ್ದವು. ಮನೆಗಳ ಒಳಗೆ ನೀರು ನುಗ್ಗಿದ ಪರಿಣಾಮ ಜನರು ಏನು ಮಾಡುವುದೆಂದು ತೋಚದೆ ದಿಕ್ಕೆಟ್ಟರು. ಮನೆ, ಅಂಗಡಿಗಳಿಂದ ಬೆಲೆ ಬಾಳುವ ವಸ್ತುಗಳು ನೀರು ಪಾಲಾಗಿವೆ. ಪೀಠೋಪಕರಣ, ಎಲೆಕ್ಟ್ರಾನಿಕ್ಸ್ ವಸ್ತುಗಳು ಮುಂತಾದವು ನೀರು ನುಗ್ಗಿ ಹಾಳಾಗಿವೆ. ಕಟ್ಟಡದೊಳಗೆ ತುಂಬಿದ ಕೆಸರು ನೀರನ್ನು ಹೊರಹಾಕಲು ಹರಸಾಹಸ ಮಾಡುವಂತಾಗಿದೆ. ಇನ್ನು ಅಂಡರ್‌ಪಾಸ್‌ಗಳಲ್ಲಿ ಭಾರಿ ನೀರು ತುಂಬಿದ್ದರಿಂದ ವಾಹನ ಸವಾರರು ಮುಂದೆ ಸಾಗಲಾಗದೆ, ಹಿಂದೆಯೂ ತಿರುಗಿ ಹೋಗಲಾಗದೆ ಪರದಾಡಿದರು. ಕೆಲವು ಕಾರುಗಳು ನೀರಿನಲ್ಲಿ ತೇಲುವ ದೃಶ್ಯಗಳು ಕಂಡುಬಂದಿವೆ. ರಾಜ್‌ಘಾಟ್‌ಗೆ ತೆರಳುವ ಯಮುನಾ ಸೇತುವೆ ಪ್ರದೇಶದಲ್ಲಿ ನೀರು ತುಂಬಿದ ಪರಿಣಾಮ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದ್ದು, ಬಹಳ ನಿಧಾನಗತಿಯ ಸಂಚಾರ ಕಂಡುಬಂದಿದೆ. ಗುರ್‌ಗಾಂವ್‌ನಲ್ಲಿ ಕೂಡ ಇದೇ ರೀತಿಯ ಸನ್ನಿವೇಶ ಉಂಟಾಗಿದೆ. ಇಲ್ಲಿ ಕಳೆದ 24 ಗಂಟೆಗಳಲ್ಲಿ 64.2 ಮಿಮೀ ಮಳೆ ಸುರಿದಿದೆ. ರಸ್ತೆಗಳು, ಮಾರುಕಟ್ಟೆಗಳು ಜಲಾವೃತವಾಗಿವೆ. ರಾಜಧಾನಿಯಲ್ಲಿ 2002ರ ಸೆಪ್ಟೆಂಬರ್ 13ರಂದು 126.8 ಮಿಮೀ ಮಳೆ ಸುರಿದಿತ್ತು. 1963ರ ಸೆಪ್ಟೆಂಬರ್ 16ರಂದು ಸುರಿದ 172.6 ಮಿಮೀ ಮಳೆ ಸಾರ್ವಕಾಲಿಕ ದಾಖಲೆಯಾಗಿದೆ. ಬುಧವಾರ ಬೆಳಿಗ್ಗೆ 8.30ರ ಬಳಿಕ ಕೇವಲ ಮೂರು ಗಂಟೆಯಲ್ಲಿ 75.6 ಮಿಮೀ ಮಳೆಯಾಗಿದೆ. ಇಡೀ ತಿಂಗಳ ವಾಡಿಕೆ ಮಳೆ ಮೊದಲ ಎರಡು ದಿನಗಳಲ್ಲಿಯೇ ಸುರಿದಿದೆ ಎಂದು ಐಎಂಡಿ ತಿಳಿಸಿದೆ.