ತಮಿಳುನಾಡಿನಲ್ಲಿ ಬಲವಂತದ ಮತಾಂತರ ಆರೋಪ: ವಿದ್ಯಾರ್ಥಿನಿ ಆತ್ಮಹತ್ಯೆ

ತಮಿಳುನಾಡಿನಲ್ಲಿ ಹಾಸ್ಟೆಲ್ ವಾರ್ಡನ್ ಕಿರುಕುಳದಿಂದ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ. ಅದರ ಬೆನ್ನಲ್ಲೇ ಮತಾಂತರಕ್ಕೆ ಬಲವಂತ ಮಾಡಿದ್ದ ಆರೋಪವೂ ಕೇಳಿಬಂದಿದೆ. ಇದು ರಾಜಕೀಯ ಆಯಾಮ ಪಡೆದುಕೊಂಡಿದೆ.

ತಮಿಳುನಾಡಿನಲ್ಲಿ ಬಲವಂತದ ಮತಾಂತರ ಆರೋಪ: ವಿದ್ಯಾರ್ಥಿನಿ ಆತ್ಮಹತ್ಯೆ
Linkup
ಚೆನ್ನೈ: ತಮಿಳುನಾಡಿನಲ್ಲಿ 17 ವರ್ಷದ ಶಾಲಾ ಬಾಲಕಿಯ ಮಾಡಿಕೊಂಡಿರುವ ಘಟನೆ ಬಲವಂತದ ಪ್ರಕರಣಗಳ ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ವಿಷ ಸೇವನೆ ಮಾಡಿದ್ದ , ಚಿಕಿತ್ಸೆ ಫಲಿಸದೆ ಬುಧವಾರ ಮೃತಪಟ್ಟಿದ್ದಾಳೆ. ಹಾಸ್ಟೆಲ್ ವಾರ್ಡನ್‌ನ ಕಿರುಕುಳ ಹಾಗೂ ತನ್ನ ಕುಟುಂಬವನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಪ್ರಯತ್ನದ ಕಾರಣ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಬಾಲಕಿಯ ಸಾವಿನ ಬಳಿಕ ವಿಡಿಯೋ ಒಂದು ವೈರಲ್ ಆಗಿದ್ದು, ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಆಕೆಯ ಕುಟುಂಬ ನಿರಾಕರಿಸಿದ ಬಳಿಕ, ಆಕೆಯನ್ನು ನಿಂದಿಸುವ ವಿಚಾರ ಸೆರೆಯಾಗಿದೆ. ಆದರೆ ಇದರ ಅಧಿಕೃತತೆ ಖಚಿತವಾಗಿಲ್ಲ. 'ಎರಡು ವರ್ಷದ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವಂತೆ ಅವರು ನನಗೆ ಹಾಗೂ ನನ್ನ ಪೋಷಕರಿಗೆ ಹೇಳಿದ್ದರು. ನನ್ನ ಶಿಕ್ಷಣದ ವೆಚ್ಚವನ್ನು ನೋಡಿಕೊಳ್ಳುವುದಾಗಿ ಅವರು ತಿಳಿಸಿದ್ದರು' ಎಂದು ಬಾಲಕಿ ಹೇಳುವುದು ವಿಡಿಯೋದಲ್ಲಿ ಕೇಳಿಸಿದೆ. ಮತಾಂತರ ಆಗದೆ ಇರುವುದಕ್ಕಾಗಿಯೇ ಆಕೆಯನ್ನು ನಿರ್ದಿಷ್ಟವಾಗಿ ಗುರಿ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ 'ಹಾಗೆ ಇರಬೇಕು' ಎಂದು ಆಕೆ ಉತ್ತರಿಸಿದ್ದಾಳೆ. ಮತಾಂತರ ಆರೋಪದ ನಿಟ್ಟಿನಲ್ಲಿ ತನಿಖೆ ನಡೆಸಬೇಕು ಎಂದು ಕೂಡ ಬಾಲಕಿಯ ಪೋಷಕರು ಆಗ್ರಹಿಸಿದ್ದಾರೆ. ಪ್ರೌಢಶಾಲೆಯಲ್ಲಿ ಓದುತ್ತಿರುವ ಬಾಲಕಿ ಜನವರಿ 9ರಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಜನವರಿ 19ರಂದು ಆಕೆ ಮೃತಪಟ್ಟಿದ್ದಳು. ಹಾಸ್ಟೆಲ್ ವಾರ್ಡನ್‌ಳನ್ನು ಬಾಲಾರೋಪ ಕಾಯ್ದೆ ಅಡಿ ಬಂಧಿಸಲಾಗಿದೆ. ಹಾಸ್ಟೆಲ್‌ನಲ್ಲಿ ಸ್ವಚ್ಛತೆಯ ಕೆಲಸಗಳನ್ನು ಬಲವಂತವಾಗಿ ಮಾಡಿಸಿಕೊಂಡಿದ್ದಾಳೆ ಎಂದು ಬಾಲಕಿ ಮಾಡಿರುವ ಆರೋಪಗಳ ಆಧಾರದಲ್ಲಿ ಆಕೆ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ. ಬಾಲಕಿ ಅಥವಾ ಆಕೆಯ ಕುಟುಂಬದವರು ಮತಾಂತರ ಆರೋಪದ ಬಗ್ಗೆ ದೂರು ನೀಡಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 'ಆಕೆಯ ದೂರು, ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹಾಗೂ ಸಾಯುವ ಮುನ್ನ ನೀಡಿದ ಹೇಳಿಕೆಯ ದಾಖಲೆಗಳನ್ನು ವಿಡಿಯೋ ಚಿತ್ರೀಕರಿಸಿಕೊಂಡಿದ್ದೇವೆ. ಅದರಲ್ಲಿ ಆಕೆ ಎಲ್ಲಿಯೂ ಮತಾಂತರದ ಬಗ್ಗೆ ಹೇಳಿಕೆ ನೀಡಿಲ್ಲ. ಆಕೆಯ ಪೋಷಕರು ಕೂಡ ಇದರ ಬಗ್ಗೆ ಆರೋಪಿಸಿಲ್ಲ. ಆದರೆ ಈ ಆರೋಪದ ಬಗ್ಗೆಯೂ ನಾವು ತನಿಖೆ ನಡೆಸುತ್ತಿದ್ದೇವೆ' ಎಂದು ತಂಜಾವೂರ್ ಎಸ್‌ಪಿ ರಾವಳಿ ಪ್ರಿಯಾ ತಿಳಿಸಿದ್ದಾರೆ. ವೈರಲ್ ಆಗಿರುವ ವಿಡಿಯೋವನ್ನು ಚಿತ್ರೀಕರಿಸಿದವರಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ವಿಡಿಯೋದ ಅಧಿಕೃತತೆ ಹಾಗೂ ಅದನ್ನು ಬಿಡುಗಡೆ ಮಾಡಿರುವುದರ ಉದ್ದೇಶವನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. 'ಅಪ್ರಾಪ್ತ ವಯಸ್ಸಿನ ಬಾಲಕಿಯ ಗುರುತು ಬಹಿರಂಗವಾಗಿದೆ. ಇದು ಕಾನೂನಿನ ಉಲ್ಲಂಘನೆ' ಎಂದು ಪೊಲೀಸರು ತಿಳಿಸಿದ್ದಾರೆ.