ಎಐಎಡಿಎಂಕೆಗೆ ಹಿನ್ನಡೆ: ಜಯಲಲಿತಾ ನಿವಾಸವನ್ನು ಸೋದರ ಸಂಬಂಧಿಗಳಿಗೆ ಒಪ್ಪಿಸಲು ಹೈಕೋರ್ಟ್ ಆದೇಶ

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಪೋಯೆಸ್ ಗಾರ್ಡನ್‌ನ ವೇದ ನಿಲಯಂ ನಿವಾಸವನ್ನು ತನ್ನ ವಶಕ್ಕೆ ಪಡೆದುಕೊಂಡು ಸ್ಮಾರಕವನ್ನಾಗಿ ಪರಿವರ್ತಿಸಿದ್ದ ಹಿಂದಿನ ಎಐಎಡಿಎಂಕೆ ಸರ್ಕಾರದ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.

ಎಐಎಡಿಎಂಕೆಗೆ ಹಿನ್ನಡೆ: ಜಯಲಲಿತಾ ನಿವಾಸವನ್ನು ಸೋದರ ಸಂಬಂಧಿಗಳಿಗೆ ಒಪ್ಪಿಸಲು ಹೈಕೋರ್ಟ್ ಆದೇಶ
Linkup
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ, ದಿವಂಗತ ಜೆ. ಅವರ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸಿರುವ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಪೋಯೆಸ್ ಗಾರ್ಡನ್‌ನಲ್ಲಿ ಇರುವ ಜಯಲಲಿತಾ ಅವರ ವೇದ ನಿಲಯಂ ಅನ್ನು ಸ್ಮಾರಕವನ್ನಾಗಿ ಬದಲಿಸುವ ಸಲುವಾಗಿ ಅದನ್ನು ತಮಿಳುನಾಡು ಸರ್ಕಾರ ಸ್ವಾಧೀನ ಪಡಿಸಿಕೊಂಡಿತ್ತು. ಆದರೆ ಅದನ್ನು ಬುಧವಾರ ರದ್ದುಗೊಳಿಸಿದೆ. ಸ್ವಾಧೀನ ಪಡಿಸಿಕೊಂಡಿರುವ ವೇದ ನಿಲಯಂ ನಿವಾಸವನ್ನು ಜಯಲಲಿತಾ ಅವರ ಸೋದರ ಸೊಸೆ ದೀಪಾ ಮತ್ತು ಸೋದರಳಿಯ ದೀಪಕ್ ಜಯರಾಮ್ ಅವರಿಗೆ ಮೂರು ವಾರಗಳ ಒಳಗೆ ಹಸ್ತಾಂತರಿಸಬೇಕು ಎಂದು ಸರ್ಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ. ಮುಖ್ಯಸ್ಥರಾಗಿದ್ದ ಜಯಲಲಿತಾ ಅವರ ನಿವಾಸವನ್ನು ಹಿಂದಿನ ಎಐಎಡಿಎಂಕೆ ಸರ್ಕಾರ ಸ್ಮಾರಕವನ್ನಾಗಿ ಪರಿವರ್ತನೆ ಮಾಡಿತ್ತು. ಒಬ್ಬರ ಹೆಸರಿನಲ್ಲಿ ಎರಡು ಸ್ಮಾರಕಗಳು ಇರುವುದರ ಅಗತ್ಯವೇನಿದೆ ಎಂದು ಮದ್ರಾಸ್ ಹೈಕೋರ್ಟ್ ಪ್ರಶ್ನಿಸಿದೆ. ಪೋಯೆಸ್ ಗಾರ್ಡನ್‌ನಲ್ಲಿರುವ ಜಯಲಲಿತಾ ಅವರ ನಿವಾಸವನ್ನು ಮಾಡಿ ಪರಿವರ್ತಿಸಿದ ಬಳಿಕ ಆಗಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಜನವರಿಯಲ್ಲಿ ಉದ್ಘಾಟಿಸಿದ್ದರು. 2017ರ ಆಗಸ್ಟ್‌ನಲ್ಲಿ ಇಪಿಎಸ್ ಬಣದೊಂದಿಗೆ ತಮ್ಮ ಬಣವನ್ನು ವಿಲೀನಗೊಳಿಸುವ ಸಂದರ್ಭದಲ್ಲಿ ಒ. ಪನ್ನೀರ್‌ಸೆಲ್ವಂ ಅವರು ಕೆಲವರು ಷರತ್ತುಗಳನ್ನು ಮುಂದಿಟ್ಟಿದ್ದರು. ಅದರಲ್ಲಿ ಸ್ಮಾರಕ ಪರಿವರ್ತನೆಯೂ ಒಂದು. ಆದರೆ ಈ ಸ್ಮಾರಕವನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸದಂತೆ ಮದ್ರಾಸ್ ಹೈಕೋರ್ಟ್ ತಡೆ ನೀಡಿತ್ತು. 'ಅಮ್ಮಾ' ಅವರ ಮನೆಯನ್ನು ಸ್ಮಾರಕವನ್ನಾಗಿ ಪರಿವರ್ತಿಸುವುದು ಪಕ್ಷದ ಜವಾಬ್ದಾರಿ ಮತ್ತು ಹಕ್ಕು. ಇದು ತಮಿಳುನಾಡಿನ ಜನತೆ ಮತ್ತು ಎಐಎಡಿಎಂಕೆ ಪಕ್ಷದ ಕಾರ್ಯಕರ್ತರ ಮನಪೂರ್ವಕ ಬಯಕೆಯೂ ಹೌದು ಎಂದು ಎಐಎಡಿಎಂಕೆ ಹೇಳಿಕೊಂಡಿತ್ತು. ಕಳೆದ ವರ್ಷದ ಜುಲೈ ತಿಂಗಳಲ್ಲಿ ರಾಜ್ಯ ಸರ್ಕಾರ 0.55 ಎಕರೆ ವಿಸ್ತಾರವುಳ್ಳ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಿಟಿ ಕೋರ್ಟ್‌ನಲ್ಲಿ 67.9 ಕೋಟಿ ರೂ ಠೇವಣಿ ಇರಿಸಿತ್ತು. ಜಯಲಲಿತಾ ಅವರ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಅವರ ಸೋದರ ಸಂಬಂಧಿಗಳಾದ ಮತ್ತು ಅವರ ಕಾನೂನಾತ್ಮಕ ಉತ್ತರಾಧಿಕಾರಿಗಳಾದ ದೀಪಾ ಮತ್ತು ದೀಪಕ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಆಸ್ತಿಯನ್ನು ಬಲವಂತವಾಗಿ ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಿದ್ದರು. 'ಜಯಲಲಿತಾ ಅವರು ವಿವಿಧ ಕಾರಣಗಳಿಂದ ವಿಲ್ ಬರೆಯಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ. ಬಹುಶಃ ಅವರ ವಿರುದ್ಧ ಇದ್ದ ಪ್ರಕರಣಗಳು, ಇಕ್ಕಟ್ಟಿನ ರಾಜಕೀಯ ಸನ್ನಿವೇಶದ ಕಾರಣಗಳಿಂದ ಮತ್ತು ಅವರಿಗೆ ತಾವು ಸಾಯಬಹುದು ಎನ್ನುವುದು ಗೊತ್ತಿಲ್ಲದ ಕಾರಣದಿಂದ ವಿಲ್ ಬರೆದಿರಲಿಲ್ಲ' ಎಂದು ದೀಪಾ ಅರ್ಜಿಯಲ್ಲಿ ಹೇಳಿದ್ದರು. ಇದನ್ನು ಪರಿಗಣಿಸಿದ್ದ ಹೈಕೋರ್ಟ್, ಜನವರಿಯಲ್ಲಿ ಅದರ ಉದ್ಘಾಟನೆಗೆ ಮಾತ್ರವೇ ಅವಕಾಶ ನೀಡಿತ್ತು. ಉದ್ಘಾಟನೆಯ ಬಳಿಕ ಸ್ಮಾರಕದ ಕೀಗಳನ್ನು ಅಧಿಕಾರಿಗಳು ಕೋರ್ಟ್ ರಿಜಿಸ್ಟ್ರಾರ್‌ಗೆ ಒಪ್ಪಿಸಬೇಕು ಎಂದು ಸೂಚನೆ ನೀಡಿತ್ತು. ನಾಲ್ಕು ಬಾರಿ ಸಿಎಂ ಆಗಿದ್ದ ಜಯಲಲಿತಾ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಸುದೀರ್ಘ ಆಸ್ಪತ್ರೆ ವಾಸದ ಬಳಿಕ ಅವರು 2016ರ ಡಿಸೆಂಬರ್‌ನಲ್ಲಿ ಮೃತಪಟ್ಟಿದ್ದರು.